ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಫೈಟ್; ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ!

|
Google Oneindia Kannada News

ಹಾಸನ, ಫೆಬ್ರವರಿ 03: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಂಡಿದೆ. ಅಧ್ಯಕ್ಷರಾಗಲು ಪೈಪೋಟಿ ಜೋರಾಗಿದೆ. ಹಾಸನದಲ್ಲಿ ಅಧ್ಯಕ್ಷರಾಗಬೇಕಿದ್ದ ಅಭ್ಯರ್ಥಿಯನ್ನು ಅಪಹರಣ ಮಾಡಲಾಗಿದೆ.

ಹಾಸನ ತಾಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಬೇಕಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾರೇಕೆರೆಯಿಂದ ಗೆದ್ದಿದ್ದ ಭಾಗ್ಯಮ್ಮ ಸ್ಪರ್ಧಿಸಲು ತೀರ್ಮಾನಿಸಿದ್ದರು.

ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ! ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ!

ಬೆಂಗಳೂರಿನ ಸಂಬಂಧಿಕರ ಮನೆಯಿಂದ ಆಗಮಿಸುತ್ತಿದ್ದ ಭಾಗ್ಯಮ್ಮ ಅವರನ್ನು ಅಪಹರಣ ಮಾಡಲಾಗಿದೆ. ಭಾಗ್ಯಮ್ಮ ಪುತ್ರ ಈ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಗ್ರಾ.ಪಂ ಪ್ರವೇಶ ಮಾಡಿದ ಪತಿ-ಪತ್ನಿ ಕೆ.ಆರ್.ಪೇಟೆಯಲ್ಲಿ ಗ್ರಾ.ಪಂ ಪ್ರವೇಶ ಮಾಡಿದ ಪತಿ-ಪತ್ನಿ

Gram Panchayat President Election Member Kidnapped

ಲೋಕೇಶ್ ಎಂಬುವವರು ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಮಡೆನೂರು, ಕಾರೇಕೆರೆ ಗ್ರಾಮದ ವೆಂಕಟೇಶ್, ಹಿರಿಯಣ್ಣ ಗೌಡ, ಸುರೇಂದ್ರ ಎಂಬುವವರು ತಮ್ಮ ತಾಯಿಯನ್ನು ಅಪಹರಣ ಮಾಡಿದ್ದಾರೆ ಎಂದು ಭಾಗ್ಯಮ್ಮ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.

ಅಚ್ಚರಿ ನಡೆ; ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ, ಕಾಂಗ್ರೆಸ್! ಅಚ್ಚರಿ ನಡೆ; ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ, ಕಾಂಗ್ರೆಸ್!

ಭಾಗ್ಯಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಅವರನ್ನು ತಕ್ಷಣ ಹುಡುಕಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ.

2020ರ ಡಿಸೆಂಬರ್ 30ರಂದು ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. ಈಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಯಾ ಜಿಲ್ಲೆಗಳಲ್ಲಿ ಪ್ರಕಟವಾಗುತ್ತಿದ್ದು, ಅಧಿಕಾರ ಪಡೆಯಲು ಭಾರಿ ಪೈಪೋಟಿ ಇದೆ.

English summary
Bhayamma who wish to contest for Hassan taluk Madenuru gram panchayat president post kidnapped. Complaint field by her son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X