ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳ : ಡಿಸೆಂಬರ್‌ನಲ್ಲಿ ಬಾಹುಬಲಿ ಮೂರ್ತಿ ಸ್ವಚ್ಛತಾ ಕಾರ್ಯ

|
Google Oneindia Kannada News

ಹಾಸನ, ನವೆಂಬರ್ 28 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿಯನ್ನು ರಾಸಾಯನಿಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ. 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮುಗಿದ ಬಳಿಕ ಈ ಸ್ವಚ್ಛತೆ ಕಾರ್ಯ ನಡೆಸಲಾಗುತ್ತದೆ.

ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ (ಎಎಸ್‌ಐ) ಈ ರಾಸಾಯನಿಕಗಳಿಂದ ಮೂರ್ತಿಯನ್ನು ಸ್ವಚ್ಛಗೊಳಿಸಲಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ಕಾರ್ಯವನ್ನು ನಡೆಸಲು ಎಎಸ್‌ಐ ನಿರ್ಧರಿಸಿದ್ದು, ಅಗತ್ಯ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ದೇಶದ 10 'ಸ್ವಚ್ಛ ಐಕಾನಿಕ್' ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರವಣಬೆಳಗೊಳದೇಶದ 10 'ಸ್ವಚ್ಛ ಐಕಾನಿಕ್' ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರವಣಬೆಳಗೊಳ

ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ವಿಜ್ಞಾನ ವಿಭಾಗಕ್ಕೆ ಈಗಾಗಲೇ ಮೂರ್ತಿಯ ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳಬೇಕು ಎಂದು ಪತ್ರ ಬರೆಯಲಾಗಿದೆ. ಈ ಸ್ವಚ್ಛತಾ ಕಾರ್ಯದ ಜೊತೆಗೆ ಮೂರ್ತಿಯ ಬಗ್ಗೆ ಅಧ್ಯಯನವನ್ನು ನಡೆಸಲಾಗುತ್ತದೆ.

ಶ್ರವಣಬೆಳಗೊಳ: ವಿರಾಗಿಯನ್ನು ಭಜಿಸಿದ ಮಾನಿನಿಯರುಶ್ರವಣಬೆಳಗೊಳ: ವಿರಾಗಿಯನ್ನು ಭಜಿಸಿದ ಮಾನಿನಿಯರು

Gomateshwara statue chemical wash in December

2018ರ ಫೆಬ್ರವರಿ 7ರಂದು ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಿದ್ದರು. ಫೆ.26ರಂದು ಸಮಾರೋಪ ಸಮಾರಂಭ ನಡೆದಿತ್ತು.

ಬಾಹುಬಲಿಗಾಗಿ 11.60 ಕೋಟಿ ದಾನ ಮಾಡಿದ ರಾಜಸ್ತಾನಿ ಕುಟುಂಬಬಾಹುಬಲಿಗಾಗಿ 11.60 ಕೋಟಿ ದಾನ ಮಾಡಿದ ರಾಜಸ್ತಾನಿ ಕುಟುಂಬ

ಹೊಸ ಮೆಟ್ಟಿಲು ನಿರ್ಮಾಣ : ಚಂದ್ರಗಿರಿ ಬೆಟ್ಟವನ್ನು ಏರಲು ಮತ್ತೊಂದು ಜೋಡಿ ಮೆಟ್ಟಿಲನ್ನು ನಿರ್ಮಾಣ ಮಾಡಲಾಗುತ್ತದೆ. ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಮೆಟ್ಟಿಲು ನಿರ್ಮಾಣದ ಕೆಲಸವನ್ನು ಈಗಾಗಲೇ ಆರಂಭಿಸಿದೆ.

English summary
A chemical wash of the Gomateshwara statue Vindhyagiri in Shravanabelagola, Hassan district to be completed in December. Chemical wash will held after every Mahamastakabhisheka ceremony in once in 12 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X