ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಲೇಶಪುರ ಪ್ರವಾಸಕ್ಕೆ ಬಂದ ಯುವತಿಯರ ರಂಪಾಟ; ಪೊಲೀಸರಿಗೇ ಅವಾಜ್

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮಾರ್ಚ್ 18: ಕುಡಿದ ಅಮಲಿನಲ್ಲಿ ಯುವತಿಯರು ರಂಪಾಟ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೊರೊನಾದಿಂದಾಗಿ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಸಕಲೇಶಪುರ ಪ್ರವಾಸಕ್ಕೆ ಬಂದ ಯುವತಿಯರ ಈ ರಂಪಾಟಕ್ಕೆ ಪೊಲೀಸರೇ ಸುಸ್ತಾಗಿದ್ದಾರೆ.

Recommended Video

Indian women cricketers return to Mumbai airport without cheering | Women Cricket | India

ಕೊರೊನಾ ರಜೆ ಮೇಲೆ ನಿನ್ನೆ ಸಕಲೇಶಪುರಕ್ಕೆ ಬಂದ ಈ ಯುವತಿಯರು ನಡು ರಾತ್ರಿ ಬಯಲಿನಲ್ಲಿ ಅಮಲೇರಿಸಿಕೊಂಡು ಕುಣಿಯುತ್ತಿದ್ದರು ಎಂಬ ಆರೋಪದ ಮೇಲೆ ಸ್ಥಳೀಯರು ಯುವತಿಯರನ್ನು ಕರೆತಂದು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಮಾತನಾಡಿಸಲು ಹೋದರೆ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ.

ಕೊರೊನಾ ಟೈಮಲ್ಲಿ ಕಿಮ್ಸ್ ನಲ್ಲಿ ಡ್ಯಾನ್ಸ್; ಪ್ರಕರಣಕ್ಕೀಗ ಹೊಸ ಟ್ವಿಸ್ಟ್ಕೊರೊನಾ ಟೈಮಲ್ಲಿ ಕಿಮ್ಸ್ ನಲ್ಲಿ ಡ್ಯಾನ್ಸ್; ಪ್ರಕರಣಕ್ಕೀಗ ಹೊಸ ಟ್ವಿಸ್ಟ್

"ಏನು ಹೊಡಿತೀರಾ, ಹೊಡೆಯೋಕೆ ಧೈರ್ಯ ಇದ್ಯಾ, ಧೈರ್ಯ ಇದ್ದರೆ ಮುಟ್ಟಿ" ಎಂದು ಪೊಲೀಸರಿಗೇ ಅವಾಜ್ ಹಾಕಿದ್ದಾರೆ. ಈ ನಡುವೆ ಪೋಷಕರಿಗೆ ಕರೆ ಮಾಡಿ ಎಂದು ಹೇಳಿದ್ದಕ್ಕೆ, "ಮಾಡಲ್ಲ ಏನಿವಾಗ, ನಮ್ಮ ಅಪ್ಪ ಅಮ್ಮನೇ ಹೊಡೆಯಲ್ಲ, ನೀವ್ಯಾರು ಹೊಡೆಯೊಕೆ, ತಾಕತ್ತಿದ್ದರೆ ಮೈ ಮುಟ್ಟಿ ನೋಡೋಣ" ಎಂದು ಮಾತಿನ ಮೇಲೇ ಮಾತಾಡಿದ್ದಾರೆ.

Girls Came To Sakaleshpura Trip Shout At Police

ಯುವತಿಯರನ್ನು ಸುಧಾರಿಸುವಷ್ಟರಲ್ಲಿ ಪೊಲೀಸರಿಗೇ ಸುಸ್ತಾಗಿತ್ತು. ನಡು ರಾತ್ರಿಯಲ್ಲಿ ಅಮಲೇರಿಸಿಕೊಂಡು ತೇಲಾಡುತ್ತಿದ್ದ ಯುವತಿಯರನ್ನು ಕೊನೆಗೂ ಪೊಲೀಸರು ಪೋಷಕರಿಗೆ ಒಪ್ಪಿಸಿದರು. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಈ ಯುವತಿಯರ ರಂಪಾಟದ ವಿಡಿಯೋ ಇದೀಗ ವೈರಲ್ ಆಗಿದೆ.

English summary
Girls who came to sakaleshpura trip shout at police. This video is going viral now,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X