ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದ ಜೆಡಿಎಸ್ ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ನಿಧನ

|
Google Oneindia Kannada News

Recommended Video

ಹಾಸನದ ಜೆಡಿಎಸ್ ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ನಿಧನ | Oneindia Kannada

ಹಾಸನ, ನವೆಂಬರ್ 27: ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಎಚ್‌.ಎಸ್. ಪ್ರಕಾಶ್(67) ಮಂಗಳವಾರ ಹೃದಯಾಘಾತದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.

ಮೃತರು, ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ, 67 ವರ್ಷದ ಎಚ್‌ಎಸ್ ಪ್ರಕಾಶ್ ಅವರ ಪೂರ್ಣ ಹೆಸರು ಹಾಸನ ಸಣ್ಣಯ್ಯ ಪ್ರಕಾಶ್, 1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರಕಾಶ್ 1999ರಲ್ಲಿ ಸೋಲು ಅನುಭವಿಸಿದ್ದರು.

ನಂತರ 2004,2008,2013ರಲ್ಲಿ ಸತತ ಹ್ಯಾಟ್ರಿಕ್ ಬಾರಿಸಿದ್ದ ಪ್ರಕಾಶ್, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರೀತಂ ಗೌಡ ವಿರುದ್ಧ ಸೋಲು ಅನುಭವಿಸಿದ್ದರು.

Former MLA H.S.Prakash no more

ಆರಂಭದಿಂದಲೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಬೆಂಬಲಿಗರಾಗಿದ್ದ ಪ್ರಕಾಶ್, 1983-89ರವರೆಗೆ ಹಾಸನ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಸನದ ಸಂಜೀವಿನಿ ಕೋ-ಆಪರೇಟಿವ್ ಹಾಸ್ಪಿಟಲ್ ಅಧ್ಯಕ್ಷರಾಗಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹೆಸರು ಮಾಡಿದ್ದರು.

English summary
Former MLA HS Prakash has died on Tuesday at private hospital who was suffered from cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X