ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಪ್ರಧಾನಿಗಳೇ.. ದಯಮಾಡಿ ಅಷ್ಟು ಕೆಳಮಟ್ಟಕ್ಕೆ ಇಳಿಯಬೇಡಿ''

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮೇ 19: ದಯಮಾಡಿ ಪ್ರಧಾನಮಂತ್ರಿಗಳು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಎಚ್.ಡಿ ರೇವಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ ರೇವಣ್ಣ, ಜಿಲ್ಲಾಧಿಕಾರಿಗಳೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ಹೊರಹಾಕಿದರು.

ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ನೀವು ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೀರಿ? ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಸಭೆ ಮಾಡಿ ಈ ರಾಜ್ಯದ ಬಗ್ಗೆ ಪ್ರಧಾನಿಗಳು ಏನು ತಿಳಿದುಕೊಂಡಿದ್ದಾರೆ ಎಂದು ರೇವಣ್ಣ ಖಾರವಾಗಿ ಪ್ರಶ್ನಿಸಿದರು.

Hassan: Former Minister HD Revanna Expressed Outrage On PM Narendra Modi

ಬಿಬಿಎಂಪಿ ವಿಶೇಷ ಅಧಿಕಾರಿ ಆ ಗೌರವ್ ಗುಪ್ತಾ ಅವರ ಜೊತೆ ಮಾತನಾಡಿದ್ದಾರೆ. ಅವರಿಗೆ ಎಷ್ಟು ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ. ಅವರು ಫೋನ್ ಕರೆ ಸ್ವೀಕರಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡಿದರು.

Hassan: Former Minister HD Revanna Expressed Outrage On PM Narendra Modi

ಎರಡು ತಿಂಗಳು ತೆಗೆದುಕೊಂಡು ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 20 ಸಾವಿರ ರೈತರು ಅಂತಾರೆ. ಹಾಗಾದರೆ ಅವರನ್ನು ಗುರುತಿಸಿರುವವರು ಯಾರು? ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ಇದು ತಾತ್ಕಾಲಿಕ ಪ್ಯಾಕೇಜ್. ಒಬ್ಬರಿಗೆ ತಿಂಗಳಿಗೆ ಕನಿಷ್ಟ 5 ಸಾವಿರದಂತೆ ಪ್ಯಾಕೇಜ್ ಕೊಡಬೇಕಿತ್ತು. ಸಚಿವರುಗಳು ಸ್ವಲ್ಪ ಲೂಟಿ ಮಾಡೋದು ನಿಲ್ಲಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.

Hassan: Former Minister HD Revanna Expressed Outrage On PM Narendra Modi

Recommended Video

Yediyurappaನವರ ಮಾತನ್ನು ಕೇಳಿ ಉಳಿದ ನಾಯಕರು ಹೇಳಿದ್ದೇನು? | Oneindia Kannada

ಒಂದು ತಿಂಗಳ ಕಾಲ ಲಾಕ್‌ಡೌನ್ ಮಾಡಬೇಕು. ಸರ್ಕಾರ ಲೂಟಿ ಮಾಡುವುದರಲ್ಲಿ ಶೇ.10ರಷ್ಟು ಬಡವರಿಗೆ ಕೊಡಿ. ಬಡವರಿಗೆ ಒಂದು ತಿಂಗಳು ಏನೆಲ್ಲ ಸಹಾಯ ಮಾಡಬೇಕು ಅದನ್ನು ಮಾಡಿ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಸಲಹೆ ನೀಡಿದರು.

English summary
Former Minister HD Ravanna has made a expressed outrage against Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X