ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಂದ ಹಾಸನ ಜಿಲ್ಲೆಗೆ ಅನ್ಯಾಯ; ಎಚ್.ಡಿ. ರೇವಣ್ಣ

|
Google Oneindia Kannada News

ಹಾಸನ, ಫೆಬ್ರವರಿ 28: "ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲೆಗೆ ಮಾಡಿರುವ ಅನ್ಯಾಯಗಳು ಒಂದೆರೆಡಲ್ಲ. ಬಿಜೆಪಿಯ ಐದು ವರ್ಷ ಮತ್ತು ಕಾಂಗ್ರೆಸ್​ನ ಐದು ವರ್ಷದ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲೆಗೆ ಏನೂ ಕೊಡುಗೆ ಸಿಕ್ಕಿಲ್ಲ," ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ಹಾಸನ ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅರಕಲಗೂಡು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, "ಈ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತನಿಖೆ ಆಗಬೇಕು. ಹಾಸನ ನಗರಸಭೆಯ ಹಿಂದಿನ ಆಯುಕ್ತರು ಮತ್ತು ಈಗಿನ ಆಯುಕ್ತರ ಕಾರ್ಯನಿರ್ವಹಣೆಯ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಬೇಕು. ಈ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಿದರೆ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ," ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯರದು ತಾಲಿಬಾನ್‌ಗಿಂತ ಕಡಿಮೆ ಇಲ್ಲದ ಮನಸ್ಥಿತಿ; ಸಿ.ಟಿ. ರವಿ ವಾಗ್ದಾಳಿಸಿದ್ದರಾಮಯ್ಯರದು ತಾಲಿಬಾನ್‌ಗಿಂತ ಕಡಿಮೆ ಇಲ್ಲದ ಮನಸ್ಥಿತಿ; ಸಿ.ಟಿ. ರವಿ ವಾಗ್ದಾಳಿ

"ಹಾಸನ ನಗರವನ್ನು ಯಾರಿಗೂ ಬರೆದುಕೊಟ್ಟಿಲ್ಲ. ಇದು ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಕ್ಷಗಳು ಅಣ್ಣ- ತಮ್ಮಂದಿರು, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮಗೆ ಜಿಲ್ಲಾ ಪಂಚಾಯಿತಿಯಲ್ಲಿ ಬಹುಮತ ಇದ್ದರೂ ಕಾಂಗ್ರೆಸ್ ಸರ್ಕಾರವು ಎಸ್​ಟಿ ಮೀಸಲಾತಿ ಜಾರಿಗೆ ತಂದರು. ನಗರಸಭೆಯಲ್ಲಿ ನಮಗೆ ಬಹುಮತ ಇದ್ದರೂ ಬಿಜೆಪಿಯು ಎಸ್​ಟಿ ಮೀಸಲಾತಿ ತಂದಿದೆ," ಎಂದು ಎಚ್.ಡಿ. ರೇವಣ್ಣ ಬೇಸರ ಹೊರ ಹಾಕಿದರು.

Former CM BS Yediyurappa Injustice to Hassan District Says HD Revanna

ಹಾಸನದ ಮಹಾರಾಜ ಪಾರ್ಕ್​ನಲ್ಲಿ 44 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಿದ್ದಾರೆ. ಆದರೆ ನಗರಸಭೆಯಲ್ಲಿ ಚರ್ಚೆಯನ್ನೇ ಮಾಡಿಲ್ಲ. ಹಾಸನ ನಗರದಲ್ಲಿ ಕಾಮಗಾರಿಗಳ ಹೆಸರಿನಲ್ಲಿ ಅಕ್ಷರಶಃ ಲೂಟಿ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಏನೇ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಹಾಸನ ನಗರದಲ್ಲಿ ಬೋಗಸ್ ಕೆಲಸ ನಡೆಯುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಸತ್ತುಹೋಗಿದ್ದಾರೆ. ಎಸಿಬಿ ಅಧಿಕಾರಿಗಳೂ ಏನೂ ಕ್ರಮ ವಹಿಸುತ್ತಿಲ್ಲ. ಹಾಸನ ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸಮರ್ಪಕ ತನಿಖೆಯಾಗಬೇಕು. ನಗರಸಭೆಯ ಆಯುಕ್ತರನ್ನು ಅಮಾನತು ಮಾಡಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಎಚ್.ಡಿ. ರೇವಣ್ಣ, ಇಲ್ಲವಾದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಸದನದಲ್ಲೂ ಈ ಬಗ್ಗೆ ಹೋರಾಟ ನಡೆಸುತ್ತೇವೆ. ಸೂಕ್ತ ಕ್ರಮ ಆಗದಿದ್ದರೆ ನಮ್ಮ ಜೆಡಿಎಸ್ ಸದಸ್ಯರು ನಗರಸಭೆಯಲ್ಲಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.

ಉಕ್ರೇನ್​ನಲ್ಲಿ ಹಾಸನದ ವಿದ್ಯಾರ್ಥಿ ಗಗನ್ ಗೌಡ ಸಿಲುಕಿರುವ ಬಗ್ಗೆ ಹಾಗೂ ಅಲ್ಲಿ ಆತ ಪರದಾಡುತ್ತಿರುವ ಬಗ್ಗೆ ಮಾಜಿ ಸಚಿವ ಎಚ್​.ಡಿ. ರೇವಣ್ಣ ಪ್ರತಿಕ್ರಿಯಿಸಿದರು. ಈಗಾಗಲೇ ದೇವೇಗೌಡರು ಕೇಂದ್ರ ಸರ್ಕಾರದ ಜೊತೆ ಮಾತಾಡಿದ್ದಾರೆ. ಅವರ ತಾಯಿ ಮತ್ತು ವಿದ್ಯಾರ್ಥಿ ಜತೆ ನಾನೂ ಮಾತಾಡಿದ್ದೇನೆ. ಕೇಂದ್ರ ಸರ್ಕಾರವು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಹಾಸನ ನಗರಸಭೆಯಲ್ಲಿ ಬಿಜೆಪಿ- ಜೆಡಿಎಸ್ ಸದಸ್ಯರ ಜಟಾಪಟಿ
ಹಾಸನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಹಾಸನ ನಗರಸಭೆಯಲ್ಲಿ ಬಿಜೆಪಿ- ಜೆಡಿಎಸ್ ಸದಸ್ಯರ ಜಟಾಪಟಿ ನಡೆಸಿದರಲ್ಲದೇ, ಪರಸ್ಪರ ಹಲ್ಲೆ ಯತ್ನ ಆರೋಪ ಮಾಡಿದರು.

ನಗರಸಭೆಯ ಸಾಮಾನ್ಯ ಸಭೆ ವೇಳೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ಗಲಾಟೆ ಹೋಗಿದ್ದು, ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿಲ್ಲ, ಚರ್ಚೆ ಮಾಡದೆ ನಿರ್ಣಯ ಅಂಗೀಕಾರ ಆಗುತ್ತಿದೆ ಎಂದು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷರ ಪೀಠದ ಎದುರು ನುಗ್ಗಿ ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದ್ದು, ಈ ವೇಳೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ನಗರಸಭೆ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರ ಧರಣಿ ನಡೆಸಿ, ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನು ಅಮಾನತು ಮಾಡಿ ಎಂದು ಬಿಜೆಪಿ ಸದಸ್ಯರ ಆಗ್ರಹಿಸಿದರು.

ಹಾಸನ ನಗರಸಭೆ ಪೌರಾಯುಕ್ತರ ಕಚೇರಿ ಎದುರು ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರ ಧರಣಿ ನಡೆಸಿದರೆ, ಮತ್ತೊಂದೆಡೆ ಮೀಟಿಂಗ್ ಹಾಲ್‌ನಲ್ಲಿ ಜೆಡಿಎಸ್ ಸದಸ್ಯರ ಧರಣಿ ಮುಂದುವರೆಸಿದರು.

ಬಿಜೆಪಿ ಸದಸ್ಯರು ದುರ್ವರ್ತನೆ ತೋರಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಿ, ವಿನಾಕಾರಣ ಪದೇಪದೇ ಸಭೆ ಮುಂದೂಡುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಅಧ್ಯಕ್ಷರು ಪಲಾಯನ ಮಾಡಿದ್ದಾರೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು.

English summary
Former chief minister BS Yediyurappa had done Injustice to Hassan district during his tenure, Former Minister HD Revanna Alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X