ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇನಲ್ಲಿ ನಡೆಯಲಿದೆ ಮೊದಲ ಹಳೆಗನ್ನಡ ಸಾಹಿತ್ಯ ಸಮ್ಮೇಳನ

By Manjunatha
|
Google Oneindia Kannada News

ಶ್ರವಣಬೆಳಗೊಳ, ಡಿಸೆಂಬರ್ 30: ಪ್ರಥಮ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ಶ್ರವಣಬೆಳಗೊಳ ದಲ್ಲಿ ಮುಂದಿನ ವರ್ಷ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.

ಗೊಮ್ಮಟ ನಗರದಲ್ಲಿ ಏರ್ಪಡಿಸಿರುವ ಕನ್ನಡ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ಸಮ್ಮೇಳನದ ಬಗ್ಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಜತೆ ಚರ್ಚಿಸಿ ಮೇ ನಲ್ಲಿ ಆಯೋಜಿಸಲಾಗುವುದು. ನವೆಂಬರ್ ನಲ್ಲಿ ಇದನ್ನು ನಡೆಸಬೇಕಿತ್ತು. ಆದರೆ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಕಾರಣ ಆಗಲಿಲ್ಲ ಎಂದರು.

First ancient Kannada litrature fest is going organize in May

ಭಕ್ತರ ಕೋರಿಕೆಯಂತೆ ಭರತೇಶ ವೈಭವ ಗ್ರಂಥವನ್ನು ಕ.ಸಾ.ಪ ವತಿಯಿಂದ ಮರು ಮುದ್ರಣ ಮಾಡಲಾಗಿದೆ. ಅದೇ ರೀತಿ ಇನ್ನು ಎರಡು ಗ್ರಂಥ ಗಳನ್ನು ಆದಷ್ಟು ಬೇಗ ಮರು ಮುದ್ರಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಸಮ್ಮೇಳನ ಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಸಾಹಿತಿ ಜಿನದತ್ತ ದೇಸಾಯಿ ಸಮ್ಮೇಳನಾಧ್ಯಕ್ಷರು.

English summary
Kannada Sahithya parishad President Manu Baligar announced that first ever ancient Kannada (halagannada) literature fest is going held in May at Shravanabelagola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X