ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ ಘಾಟ್‌ ಈಗ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತ

By Nayana
|
Google Oneindia Kannada News

ಸಕಲೇಶಪುರ, ಆಗಸ್ಟ್ 2: ಶಿರಾಡಿ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧ ತೆರವು ಮಾಡಿ ಹಾಸ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ಲಘು ವಾಹನ, ಭಾರಿ ವಾಹನಗಳು ಸೇರಿ ಎಲ್ಲ ವಾಹನಗಳ ಸಂಚಾರಕ್ಕೆ ಶಿರಾಡಿಘಾಟ್‌ ಬುಧವಾರದಿಂದ ಸಂಚಾರಮುಕ್ತವಾಗಿದೆ. ಘಾಟಿ ಮಾರ್ಗವಾಗಿ ಕಾಂಕ್ರೀಟ್‌ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದ್ದು, ಇತ್ತೀಚೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಶಿರಾಡಿಘಾಟ್‌: ದುರಸ್ತಿ ಅಪೂರ್ಣ, ಭಾರಿ ವಾಹನಗಳಿಗೆ ನಿರ್ಬಂಧ ಶಿರಾಡಿಘಾಟ್‌: ದುರಸ್ತಿ ಅಪೂರ್ಣ, ಭಾರಿ ವಾಹನಗಳಿಗೆ ನಿರ್ಬಂಧ

ಆದರೆ ರಸ್ತೆ ಬದಿಯ ತಡೆಗೋಡೆ ಸೇರಿ ಇನ್ನೂ ಕೆಲವು ಕಾಮಗಾರಿಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಲಘುವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಈಗ ಬದಲಿ ರಸ್ತೆಯಲ್ಲಿ ಸಾಗುತ್ತಿದ್ದ ಮಂಗಳೂರು-ಬೆಂಗಳೂರು ವಾಹನಗಳು ಶಿರಾಡಿ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.

Finally Shiradi ghat opens for heavy vehicles

ಸಕಲೇಶಪುರ ಸುತ್ತಮುತ್ತಲು ಭಾರಿ ಮಳೆಯಿಂದಾಗಿ ಶಿರಾಡಿಘಾಟ್‌ನ ಕೆಲವು ಕಡೆ ಮಣ್ಣು ಕುಸಿದಿತ್ತು, ಹೀಗಾಗಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು, ಆದರೂ ವಾಹನಗಳು ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸುರಕ್ಷತೆ ಕಾಮಗಾರಿ ಮುಗಿಸದೆ ತರಾತುರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಎಷ್ಟು ಸುರಕ್ಷಿತ ಎನ್ನುವ ಗೊಂದಲ ಈಗ ಕಾಡತೊಡಗಿದೆ.

ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಕೊಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡುವ ಕೊನೆಯ ಹಂತಕ್ಕೆ ತಲುಪಿದೆ. ಶಿರಾಡಿಘಾಟ್ ನ 26 ಕಿಲೋಮೀಟರ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿಗಾಗಿ ಕೇಂದ್ರ ಸರಕಾರ ಸುಮಾರು 183 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು.

ಆದರೆ, ಈ ಹಂತದಲ್ಲಿ ರಸ್ತೆಯ ಹಲವಾರು ತಿರುವುಗಳಲ್ಲಿ ತಡೆಗೋಡೆಗಳು ಇನ್ನಷ್ಟೇ ನಿರ್ಮಾಣ ಆಗಬೇಕಿದೆ. ಇನ್ನು ಕೆಲವು ಕಡೆಗಳಲ್ಲಿ ಕಟ್ಟಿದ ತಡೆಗೋಡೆ ಕುಸಿದು ಬಿದ್ದಿದೆ. ಅಲ್ಲದೆ ಮೂರು ಪದರದಲ್ಲಿ ಕಾಂಕ್ರೀಟ್ ಹಾಕಿರುವ ಕಾರಣ ರಸ್ತೆಯು ನೆಲದ ಮಟ್ಟದಿಂದ 1 ಅಡಿಯಷ್ಟು ಎತ್ತರದಲ್ಲಿದೆ. ಇದೀಗ ಎಲ್ಲಾ ಕಾಮಗಾರಿ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿದೆ.

English summary
As deputy commissioner of Hassan Rohini Sindhuri has lift ban on heavy vehicles movement in Shiradi ghat on Wednesday, traveling between Bangalore and Mangalore has become more users friendly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X