ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ರಾಜಕಾರಣದಲ್ಲಿ ಭಾರೀ ಸ್ಥಿತ್ಯಂತರ: ಹಾಸನಾಂಬೆಯ ಮುಂದೆ ಹೊಸ ಬಾಂಬ್ ಸಿಡಿಸಿದ ಎ ಮಂಜು

|
Google Oneindia Kannada News

Recommended Video

A Manju predicts the future of state politics | Oneindia Kannada

ಹಾಸನ, ಅ 23: ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಬಿಜೆಪಿ ಮುಖಂಡ ಎ.ಮಂಜು ಭವಿಷ್ಯ ನುಡಿದಿದ್ದಾರೆ.

"ಜೆಡಿಎಸ್ ಪಕ್ಷದ ಹದಿನೈದು ಶಾಸಕರು ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆ" ಎಂದು ಮಂಜು ಹೇಳಿರುವುದು, ಜೆಡಿಎಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ.

ಬಿಜೆಪಿ ಬಾಹ್ಯ ಬೆಂಬಲ ನೀಡಿದ್ದು ನಿಜ ಎಂದ ಜೆಡಿಎಸ್ ಶಾಸಕಬಿಜೆಪಿ ಬಾಹ್ಯ ಬೆಂಬಲ ನೀಡಿದ್ದು ನಿಜ ಎಂದ ಜೆಡಿಎಸ್ ಶಾಸಕ

"ಕುಮಾರಸ್ವಾಮಿಯವರಿಗೆ ಈ ವಿಚಾರವೆಲ್ಲಾ ಅರಿತಿದೆ. ಆ ಕಾರಣಕ್ಕಾಗಿಯೇ, ಅವರು ಬಿಜೆಪಿ ಸಖ್ಯ ಬೆಳೆಸಲು ಮುಂದಾಗಿದ್ದಾರೆ" ಎಂದು ಮಂಜು, ಹಾಸನಾಂಬೆಯ ದರ್ಶನ ಪಡೆದು ಹೇಳಿದ್ದಾರೆ.

Fifteen JDS MLAs All Set To Join BJP In Karnataka: A Manju Statement

"ಕೆಲವು ದಿನಗಳ ಹಿಂದೆ, ದೇವೇಗೌಡ್ರು, ಸರ್ದಾರ್ ಪಟೇಲ್ ಪ್ರತಿಮೆಯ ಮುಂದೆ ಫೋಟೋ ತೆಗೆಸಿಕೊಂಡಿದ್ದು ಏನಕ್ಕೆ ಎನ್ನುವುದನ್ನು ಬಿಜೆಪಿಯವರು ಅರಿತುಕೊಳ್ಳಬೇಕು" ಎಂದು ಮಂಜು, ತಮ್ಮದೇ ಪಕ್ಷದ ಮುಖಂಡರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

"ನಾನು ಕಾಂಗ್ರೆಸ್ ನಲ್ಲಿ ಇದ್ದಾಗಲೂ, ಸಿದ್ದರಾಮಯ್ಯನವರಿಗೆ ಹೇಳುತ್ತಲೇ ಬರುತ್ತಿದೆ. ಈಗ, ಅವರಿಗೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಏನು ತೊಂದರೆ ಎನ್ನುವುದು ಗೊತ್ತಾಗಿದೆ" ಎಂದು ಮಂಜು ಹೇಳಿದ್ದಾರೆ.

"ಅಧಿಕಾರಕ್ಕಾಗಿ ಜೆಡಿಎಸ್ ಯಾರ ಜೊತೆಗಾದರೂ ಹೋಗುತ್ತಾರೆ" ಎಂದು, ಮಾಜಿ ಸಚಿವ, ಎ. ಮಂಜು ಹೇಳಿದ್ದಾರೆ. "ಬಿಜೆಪಿ ಜತೆ ಕೈ ಜೋಡಿಸಲು‌ ಜೆಡಿಎಸ್ ಶಾಸಕರು ನಿರ್ಧರಿಸಿದ್ದೆವು. ನಾವೇ ಅವರಿಗೆ ಬಾಹ್ಯ ಬೆಂಬಲ ನೀಡಿದರೂ ಆಪರೇಷನ್ ಕಮಲ ಏಕೆ ಮಾಡಿದರು ಎಂದು ತಿಳಿದಿಲ್ಲ" ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು.

English summary
Fifteen JDS MLAs All Set To Join BJP In Karnataka: A Manju Statement In Hassan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X