ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಟುಂಬ ರಾಜಕೀಯದ ಬಗ್ಗೆ ಕಾನೂನು ತರಲಿ; ಎಚ್. ಡಿ. ರೇವಣ್ಣ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 07; "ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಯನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂಎಲ್ಎ, ಎಂಎಲ್‌ಸಿ ಹೀಗೆ ಬೇರೆ ಬೇರೆ ಹುದ್ದೆಗಳಲ್ಲಿ ಇದ್ದಾರೆ. ಕುಟುಂಬ ರಾಜಕಾರಣ ಎಂದು ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ?" ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಪ್ರಶ್ನಿಸಿದರು.

ಸೋಮವಾರ ಹಾಸನದಲ್ಲಿ ಮಾತಾನಾಡಿಡ ಅವರು, "ಎರಡು ರಾಷ್ಟ್ರೀಯ ಪಕ್ಷದವರು ಜೆಡಿಎಸ್ ಕುಟುಂಬ ರಾಜಕಾರಣ ಅನ್ನೋದು ಬಿಟ್ಟರೆ ಹಾಸನ ಜಿಲ್ಲೆಗೆ ಅವರ ಕೊಡುಗೆ ಏನು?" ಎಂದು ಕಿಡಿಕಾರಿದರು.

ಸೂರಜ್ ರೇವಣ್ಣಗೆ ಬಿಗಿ ರಿಲೀಫ್ ಕೊಟ್ಟ ಹೈಕೋರ್ಟ್ ಸೂರಜ್ ರೇವಣ್ಣಗೆ ಬಿಗಿ ರಿಲೀಫ್ ಕೊಟ್ಟ ಹೈಕೋರ್ಟ್

"ಮೋದಿಯವರು ಬಿಜೆಪಿಯಲ್ಲಿ 75 ವರ್ಷ ಆದವರು ಅಧಿಕಾರದಲ್ಲಿ ಇರೋ ಹಾಗಿಲ್ಲ ಎಂಬ ಕಾನೂನು ಮಾಡಿದ್ದಾರೆ. ಅದೇ ರೀತಿ ಕುಟುಂಬದಲ್ಲಿ ಒಬ್ಬರು ನಿಲ್ಲಬೇಕೆಂದು ಬಿಲ್ ತರಲಿ. ಹಾಗೇ ನಾವು ಒಬ್ಬೊಬರು ನಿಲ್ಲುತ್ತೇವೆ" ಎಂದು ಸವಾಲು ಹಾಕಿದರು.

Family Politics HD Revanna Challenged To Introduce Bill

"ಸೂರಜ್ ರೇವಣ್ಣ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡುವುದಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ಯಾರು ಅರ್ಜಿ ಹಾಕಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ" ಎಂದರು.

ಹಾಸನ ರಾಜಕೀಯ ಲೆಕ್ಕಾಚಾರ ಬದಲು; ಕಾಂಗ್ರೆಸ್ ನಾಯಕ ಬಿಜೆಪಿಗೆ! ಹಾಸನ ರಾಜಕೀಯ ಲೆಕ್ಕಾಚಾರ ಬದಲು; ಕಾಂಗ್ರೆಸ್ ನಾಯಕ ಬಿಜೆಪಿಗೆ!

"ರಾಜ್ಯದಲ್ಲಿ ಬಿ ಮತ್ತು ಸಿ ಎಂಬ ಎರಡು ಟೀಂ ಇದೆ. ಬಿ ಅಂದರೆ ಬಿಜೆಪಿ, ಸಿ ಅಂದರೆ ಕಾಂಗ್ರೆಸ್. ಇವೆರಡು ಟೀಂಗಳು ನಮಗೆ ಬೇಡ. ಇವರಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಇದರಿಂದಾಗಿ 2023ರಲ್ಲಿ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದದರು.

ಹಾಸನ; ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಿಗ್ ಫೈಟ್! ಹಾಸನ; ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಿಗ್ ಫೈಟ್!

"ಕಾಂಗ್ರೆಸ್‌ ಅನ್ನು ನಾವ್ಯಾರು ತೆಗೆಯಬೇಕಿಲ್ಲ. 26 ರಾಜ್ಯಗಳಲ್ಲಿ ಜನತೆಯೆ ಮನೆಗೆ ಕಳುಹಿಸಿದ್ದಾರೆ. 27ನೇಯದು ಕರ್ನಾಟಕವಾಗಿದ್ದು, ಇಲ್ಲೂ ಅವರನ್ನು ಮನೆಗೆ ಕಳುಹಿಸುತ್ತಾರೆ" ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ವ್ಯಂಗ್ಯವಾಡಿದರು.

"ಹಣದಿಂದ ರಾಜಕೀಯ ಮಾಡಲು ಆಗಲ್ಲ. ಜನತೆ, ದೇವರ ಆಶೀರ್ವಾದ ಇರುವವರೆಗೂ ರಾಜಕೀಯ ಮಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗುತ್ತದೆ. ಕಾಂಗ್ರೆಸ್ ಮುಖಂಡರೆ ಕಾಂಗ್ರೆಸ್ ಪಕ್ಷ ಮುಗಿಸುತ್ತಾರೆ. ನೆಹರು ಕಾಲದ ಕಾಂಗ್ರೆಸ್ ಈಗ ಇಲ್ಲಾ" ಎಂದರು.

ರಾಷ್ಟ್ರೀಯ ಪಕ್ಷಗಳ ಹೇಳಿಕೆ ಕುರಿತು ಮಾತನಾಡಿದ ಅವರು, "ಎರಡು ರಾಷ್ಟ್ರೀಯ ಪಕ್ಷಗಳು ಬೆಳಗ್ಗೆ ಎದ್ದರೆ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನು ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಇಲ್ವಾ?, ಕಾಂಗ್ರೆಸ್ ನಲ್ಲಿ ಒಂದೇ ಕುಟುಂಬದ ನಾಲ್ಕು ಜನ ಎಂಎಲ್‍ಎ, ಎಂಎಲ್‍ಸಿ ಇನ್ನೂ ಬೇರೆ-ಬೇರೆ ಹುದ್ದೆಗಳಲ್ಲಿ ಇದ್ದಾರೆ" ಎಂದು ಟೀಕಿಸಿದರು.

"ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಬ್ ನಬಿ ಅಜಾದ್ ಅಲ್ಪಸಂಖ್ಯಾತರ ಮಹಾನ್ ನಾಯಕ. ಕಾಂಗ್ರೆಸ್‌ನ ಸ್ತಂಭ ಅವರು. ಅಂತಹವರನ್ನೇ ಬುಡಸಮೇತ ಕಿತ್ತು ಹಾಕಿದ್ದಾರೆ. ಇಲ್ಲಿ ಒಬ್ಬ ಮುಖಂಡನನ್ನು ಇಟ್ಟುಕೊಂಡಿದ್ದಾರೆ. ಅವರಿಂದ ಮಾಜಿ ಪ್ರಧಾನಿ ದೇವೇಗೌಡರನ್ನು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಬೈಯ್ಯದಿದ್ದರೆ ಅವರಿಗೆ ಊಟ ಸೇರಲ್ಲ" ಎಂದು ಆರೋಪಿಸಿದರು.

ರೇವಣ್ಣರನ್ನು ರಾವಣನಿಗೆ ಹೋಲಿಕೆ; ಮಾಜಿ ಸಚಿವ ಎಚ್‌. ಡಿ. ರೇವಣ್ಣರನ್ನು ರಾವಣನಿಗೆ ಹೋಲಿಸಿ ವಿಧಾನ ಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಟೀಕಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

"ಜೆಡಿಎಸ್‌ನಲ್ಲಿ ಬೇರೆ ಯಾರೂ ಅಭ್ಯರ್ಥಿಗಳಿರಲಿಲ್ವಾ?. ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬೆಂಗಳೂರಿನಲ್ಲಿ ಎಂಎಲ್‌ಸಿ ಮಾಡಿದಿರಿ. ಇಡೀ ಮನೆಯವರೆಲ್ಲಾ ಸೇರಿಕೊಂಡು ಕಳೆದ ಭಾರೀ ಪಟೇಲ್ ಶಿವರಾಂ ಸೋಲಿಸಿದ್ದರು. ಮಾತು ಎತ್ತಿದರೆ ಎಲ್ಲಾ ದೇವರ ಕೃಪೆ ಅಂತೀರಾ. ಮಹಿಷಾಸುರ ಮರ್ದನ ಮಾಡಿದ್ದು ದೇವರೇ. ರಾವಣನ ದುಷ್ಟ ಬುದ್ದಿಗೆ ಶ್ರೀರಾಮಚಂದ್ರ ಅವನನ್ನು ಕೊಂದ. ರಾವಣನ ಅಂಶ ನಿಮ್ಮ ಹತ್ತಿರನೂ ಇದೆ. ಈ ಜಿಲ್ಲೆಯ ಜನರನ್ನು ಕಾಡುತ್ತಿದ್ದೀರಾ?" ಎಂದರು.

Recommended Video

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

"ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ನಿಮ್ಮ ವಿರುದ್ಧ ಚೀಟಿ ಹಾಕಿದ್ದು ಅವರೇ. ನಿಮಗೆ ಕಿಂಚಿತ್ತು ಗೌರವ, ನೈತಿಕತೆ ಇದ್ದರೆ ನಿಮ್ಮ ಮಕ್ಕಳನ್ನು ಚುನಾವಣೆಗೆ ನಿಲ್ಲಿಸುತ್ತಿರಲಿಲ್ಲ" ಎಂದು ಡಾ. ಸೂರಜ್ ರೇವಣ್ಣ ಸ್ಪರ್ಧೆ ಬಗ್ಗೆ ವಾಗ್ದಾಳಿ ನಡೆಸಿರು.

English summary
Former minister and JD(S) leader H. D. Revanna challenged political party's to come up with bill to control family politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X