ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ಉಪಟಳ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ : ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಬೆಳ್ಳಂಬೆಳಿಗ್ಗೆ ಗ್ರಾಮಗಳ ಒಳಗೆ ಒಂಟಿ ಸಲಗಗಳು ಏಕಾಏಕಿ ಪ್ರವೇಶ ಮಾಡಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

ಸಕಲೇಶಪುರ ತಾಲ್ಲೂಕಿನ ಕಿರುಹುಣಸೆ ಸರ್ಕಲ್ ಹಾಗೂ ವಡೂರು ಗ್ರಾಮದಲ್ಲಿ ಹಾದು ಹೋದ ಗಜ ಕಾಡಾನೆ ಕಂಡು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಕಾಡಾನೆಯೊಂದು ರಸ್ತೆಯಲ್ಲಿ ದಿಢೀರನೆ ಎದುರು ಬರುತ್ತಿದ್ದಂತೆ ಬೈಕ್ ನಿಲ್ಲಿಸಿ ಸವಾರರೊಬ್ಬರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಕಿರುಹುಣಸೆ ಗ್ರಾಮದೊಳಗೆ ಎರಡು ಸಲಗಗಳು ಸಂಚಾರ ಮಾಡುವ ವಿಡಿಯೋ ವೈರಲ್ ಇದೀಗ ವೈರಲ್‌ ಆಗಿದ್ದು, ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತವೆಯೋ ಎಂದು ಆತಂಕ ಗ್ರಾಮದಲ್ಲಿ ಮನೆ ಮಾಡಿದೆ.

Elephant Attack countinues in hassan

ಆನೆಗಳ ಉಪಟಳ ಜಾಸ್ತಿಯಾಗುತ್ತಿದಂತೆ ಇಂದು ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯಿಸಿ ಶಾಸಕ‌ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Elephant Attack countinues in hassan

ಇನ್ನೊಂದೆಡೆ ಕಾಡಾನೆಗಳ ಇರುವ ಮಾಹಿತಿ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದು, ಜನರಿಗೆ ಹೊರ ಬಾರದಂತೆ ಸೂಚನೆ ನೀಡಲಾಗಿದೆ. ಮಠಸಾಗರ, ಟಾಟಾ ಎಸ್ಟೇಟ್ ಬಳಿ ಕಾಡಾನೆಗಳಿದ್ದು ಜನರು ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಓಡಾಡುವಂತೆ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗುತ್ತಿದೆ.

Recommended Video

ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿಕೊಂಡ ಪಂತ್ ! | Oneindia Kannada

English summary
elephants cross in sakaleshpur taluk kiruhunse and vaduru villege,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X