ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಲೇಶಪುರ ಕಾಂಗ್ರೆಸ್ ಅಭ್ಯರ್ಥಿ ಸಿದ್ದಯ್ಯ ವಿರುದ್ಧ ಸ್ಥಳೀಯರ ಮುನಿಸು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಏಪ್ರಿಲ್ 18: ಸಿದ್ದಯ್ಯ, ಐಎಎಸ್ ಅಂದ್ರೆ ಬೆಂಗಳೂರಿಗರಿಗೆ ಪರಿಚಿತ ಮುಖ. ಏಕೆಂದರೆ ಅವರು ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2013ರಲ್ಲಿ ಸೇವಾ ನಿವೃತ್ತಿ ಹೊಂದಿದ ಬಳಿಕ ಅವರು ರಾಜಕೀಯ ಪ್ರವೇಶಿಸುತ್ತಾರೆ ಅನ್ನುವ ವದಂತಿ ಪ್ರತಿ ಚುನಾವಣಾ ಸಮಯದಲ್ಲೂ ಕೇಳಿ ಬರುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಾದ ಸಕಲೇಶಪುರ-ಆಲೂರು ಕೇತ್ರದಿಂದ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.

ಆದರೆ, ದೇವರು (ಹೈಕಮಾಂಡ್) ಕೊಟ್ಟರೂ ಪೂಜಾರಿ (ಸ್ಥಳೀಯ ನಾಯಕರು) ಬಿಡ ಎಂಬಂತಾಗಿದೆ ಸಿದ್ದಯ್ಯ ಪರಿಸ್ಥಿತಿ. ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ ಅವರು ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ನೀಡಲು ಹಾಸನಕ್ಕೆ ಆಗಮಿಸಿದ್ದರು. ಐಎಎಸ್ ಗತ್ತಿನಲ್ಲೇ ಅವರು ಜಿಲ್ಲೆ ಪ್ರವೇಶಿಸಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಭಾರೀ ಪ್ರತಿಭಟನೆಯ ಸ್ವಾಗತ.

Elections 2018 : Sakleshpur Congress workers oppose Siddaiah contest from constituency

ಸಿದ್ದಯ್ಯ ಅವರ ಇನ್ನೋವಾ ಕಾರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರಲ್ಲೇ ತಡೆ ಹಿಡಿದ ಪ್ರತಿಭಟನಾಕಾರರು, ಸ್ಥಳೀಯರಿಗೆ ಪಕ್ಷದ ಟಿಕೆಟ್ ನೀಡಬೇಕೆಂಬ ಆಗ್ರಹ ಮುಂದಿಟ್ಟರು. ಸಿದ್ದಯ್ಯ ಅವರನ್ನು ಸಕಲೇಶಪುರ ಪ್ರವೇಶಿಸಲು ಬಿಡುವುದಿಲ್ಲ ಎಂಬ ಘೋಷಣೆ ಮೊಳಗಿಸಲಾಯಿತು. ಕೊನೆಗೆ ಹಿರಿಯ ನಾಯಕರು, ಸಿದ್ದಯ್ಯ ಅವರನ್ನು ಕಚೇರಿಯ ಒಳಗೆ ಕರೆದುಕೊಂಡು ಹೋದರು.

ಸಕಲೇಶಪುರ: ಕಾಂಗ್ರೆಸ್ಸಿನಿಂದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಕಣಕ್ಕೆಸಕಲೇಶಪುರ: ಕಾಂಗ್ರೆಸ್ಸಿನಿಂದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಕಣಕ್ಕೆ

ಸರ್ಕಾರಿ ಕೆಲಸ ಬಿಟ್ಟು ಪೇಚಾಟ: ಕಾಂಗ್ರೆಸ್ ಮೂಲಗಳ ಪ್ರಕಾರ ಸಕಲೇಶಪುರದ ಸುಮಾರು 15ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಈ ಬಾರಿ ಟಿಕೆಟ್ ಅಪೇಕ್ಷಿಸಿ ಅರ್ಜಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಇದೊಂದೇ ಪರಿಶಿಷ್ಟ ಜಾತಿಗೆ ಮೀಸಲಾದ ಕೇತ್ರವಾದ ಹಿನ್ನಲೆಯಲ್ಲಿ ಹಲವು ಜಿಲ್ಲಾ ನಾಯಕರೂ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.

ಚನ್ನಮ್ಮಲ್ಲಯ್ಯ ಎನ್ನುವವರಂತೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದರು. ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಟಿಕೆಟ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದ ಹಿನ್ನಲೆಯಲ್ಲಿ ಅವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರಂತೆ. ಈಗ ಟಿಕೆಟ್ ನಿರಾಕರಿಸಿ ಅನ್ಯಾಯ ಮಾಡಲಾಗಿದೆ ಎಂಬುದು ಅವರ ಆರೋಪ.

ಒಟ್ಟಾರೆ ಕಾಂಗ್ರೆಸ್ನಲ್ಲಿ ಈ ಆಂತರಿಕ ಬೇಗುದಿ, ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ಎಚ್ ಕೆ ಕುಮಾರಸ್ವಾಮಿ ಮೊಗದಲ್ಲಿ ಮುಗುಳ್ನಗೆ ಮೂಡಿಸಿರುವುದು ಸುಳ್ಳಲ್ಲ.

English summary
Elections 2018 : Congress has decided to field retired IAS Officer H Siddaiah from Alur-Sakleshpur constituency.But, local Congress leaders and workers opposing this move and
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X