ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾನ್ಸ್​ಟೇಬಲ್​​ ಮೇಲೆ ಹಲ್ಲೆ ; ಡಿವೈಎಸ್‌ಪಿ ವಿರುದ್ಧ ರೇವಣ್ಣ ಕಿಡಿ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 25 : ಕ್ಷುಲ್ಲಕ‌ ಕಾರಣಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಡಿವೈಎಸ್‌ಪಿ ಹಲ್ಲೆ ಮಾಡಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ.‌ ಹಲ್ಲೆಯಿಂದ ಗಾಯಗೊಂಡ ಕಾನ್ಸ್‌ಟೇಬಲ್ ವೇಣುಗೋಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ಹಾಸನ ನಗರ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಭೇಟಿ ನೀಡಿದ್ದರು.‌ ಈ ವೇಳೆ 303 ವೆಪನ್‌ನ ಬಿಡಿ ಭಾಗಗಳನ್ನು ಬೇರ್ಪಡಿಸಿ ವಾಪಾಸ್ ಜೋಡಿಸುವಂತೆ ಠಾಣೆಯ ಎಲ್ಲಾ ಕಾನ್ಸ್‌ಟೇಬಲ್‌ಗಳಿಗೆ ಡಿವೈ‌ಎಸ್‌ಪಿ ಉದಯ್‌ ಭಾಸ್ಕರ್ ಸೂಚನೆ ನೀಡಿದ್ದಾರೆ. ಈ ವೇಳೆ ನಗರಠಾಣೆ ಕಾನ್ಸ್‌ಟೇಬಲ್ ವೇಣು ತಪ್ಪೆಸಿಗಿದ್ದಾರೆ. ಇದರಿಂದ ಕೋಪಗೊಂಡ ಹಾಸನ ಉಪವಿಭಾಗ ಡಿವೈ‌ಎಸ್‌ಪಿ ಉದಯ್‌ಭಾಸ್ಕರ್ ಎಸ್‌ಪಿ ಸಮ್ಮುಖದಲ್ಲೇ ಹಲ್ಲೆ ಮಾಡಿದ್ದಾರೆ ಎಂದು ವೇಣು ಆರೋಪಿಸಿದ್ದಾರೆ.‌

ಮೋದಿಗಾಗಿ 32 ಕೋಟಿ ವ್ಯಯಿಸುವ ಬದಲು ಒಂದು ಪಂಚಾಯಿತಿ ಅಭಿವೃದ್ಧಿ ಮಾಡಬಹುದಿತ್ತು: ಕುಮಾರಸ್ವಾಮಿಮೋದಿಗಾಗಿ 32 ಕೋಟಿ ವ್ಯಯಿಸುವ ಬದಲು ಒಂದು ಪಂಚಾಯಿತಿ ಅಭಿವೃದ್ಧಿ ಮಾಡಬಹುದಿತ್ತು: ಕುಮಾರಸ್ವಾಮಿ

ಡಿವೈಎಸ್‌ಪಿ ಹಲ್ಲೆಯಿಂದ ವೇಣು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ‌. ಬಳಿಕ ಹಾಸನದ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೇದೆ ಮೇಲೆ ವೇಣುಗೋಪಾಲ್ ಮೇಲೆ ಡಿವೈಎಸ್ಪಿ ಉದಯಭಾಸ್ಕರ್ ಹಲ್ಲೆ ಮಾಡಿದ್ದಾರಂಬ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಹೆಚ್. ಡಿ.‌ ರೇವಣ್ಣ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಡಿವೈಎಸ್ಪಿ ಉದಯ ಭಾಸ್ಕರ್ ಮೇಲೆ ಕೆಂಡಾಮಂಡಲಾವಾಗಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಆಸ್ಪತ್ರೆಗ ಭೇಟಿ ನೀಡಿದ ಎಚ್‌ಡಿ ರೇವಣ್ಣ

ಆಸ್ಪತ್ರೆಗ ಭೇಟಿ ನೀಡಿದ ಎಚ್‌ಡಿ ರೇವಣ್ಣ

"ಕೆಳ ಹಂತದ ಕಾನ್ಸ್‌ಟೇಬಲ್‌ಗೆ ಕಾಪಾಳಕ್ಕೆ ಹೊಡೆಯೋದು ಎಂದರೆ ಏನು? ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆಯೇ ಹಲ್ಲೆ ಮಾಡಿದ್ದಾರೆ‌. ಮೊದಲು ಡಿವೈಎಸ್ಪಿ ಮೇಲೆ ಎಫ್ ಐಆರ್ ಹಾಕಿ, ಕೂಡಲೇ ಬಂಧಿಸಬೇಕು, ಸಬ್ ಇನ್ಸ್ ಪೆಕ್ಟರ್ ಹಾಗೂ ಎಸ್ಪಿದೇ ಸ್ಟೇಟ್ ಮೆಂಟ್ ತಗೋಬೇಕು, ಹಾಸನ ನಗರದಲ್ಲಿ ಇವನದ್ದೇ ದರ್ಬಾರ್ ಆಗಿ ಹೋಗಿದೆ. ನಮ್ಮದೇ ಸರ್ಕಾರ ಇದೆ, ಪ್ರಭಾವಿಗಳ ಬೆಂಬಲ ಇದೆ , ಏನ್ ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾನೆ. ಹೇಳೋರು, ಕೇಳೋರು ಯಾರೂ ಇಲ್ಲ. ಯಾರೋ ಸಣ್ಣ ಪುಟ್ಟವರು ತಪ್ಪು ಮಾಡಿದರೆ ಬಂಧಿಸಿ ಚೈನ್ ಹಾಕ್ತೀರಾ. ಇವನೇನು ದೊಡ್ಡ ಮನುಷ್ಯನಾ, ಇವನು ನಮ್ಮಂಗೆ ಸಾಮಾನ್ಯ ಜನ" ಎಂದು ಡಿವೈಎಸ್ಪಿ ಮೇಲೆ ರೇವಣ್ಣ ಆಕ್ರೋಶ ಹೊರ ಹಾಕಿದ್ದಾರೆ.

ಕುಮಾರಸ್ವಾಮಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ; ಅಶ್ವಥ್ ನಾರಾಯಣಕುಮಾರಸ್ವಾಮಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ; ಅಶ್ವಥ್ ನಾರಾಯಣ

ಪ್ರಶಾಂತ್ ಹತ್ಯೆ ಆರೋಪಿಗಳಿಗೆ ಬಿರಿಯಾನಿ ಕೊಡಿಸಿದ್ದರು

ಪ್ರಶಾಂತ್ ಹತ್ಯೆ ಆರೋಪಿಗಳಿಗೆ ಬಿರಿಯಾನಿ ಕೊಡಿಸಿದ್ದರು

"ನಮ್ಮ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಆರೋಪಿಗಳಿಗೆ ಬಿರಿಯಾನಿ ತಿನ್ನಿಸಿ ಸಿಐಡಿಗೆ ಒಪ್ಪಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಗೆ ಇಂತಹ ಅಧಿಕಾರಿಗಳಿಂದ ಧಕ್ಕೆಯಾಗುತ್ತಿದೆ, ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು. ಇವನೇನು ದೊಡ್ಡ ಮನುಷ್ಯನ ಇವನು ನಮ್ಮ ಹಾಗೆ ಸಾಮಾನ್ಯ ಮನುಷ್ಯ, ಆತನ ವಿರುದ್ದ ಕ್ರಮ ಕೈಗೊಳ್ಳಬೇಕು" ಎಂದು ರೇವಣ್ಣ ಆಗ್ರಹಿಸಿದರು.

ಉದಯ್ ಭಾಸ್ಕರ್ ಬಳಿ ರೌಡಿ ಗ್ಯಾಂಗ್ ಇದೆ

ಉದಯ್ ಭಾಸ್ಕರ್ ಬಳಿ ರೌಡಿ ಗ್ಯಾಂಗ್ ಇದೆ

"ಪೊಲೀಸ್ ಇಲಾಖೆಯಲ್ಲಿದ್ದರೂ ಉದಯ ಭಾಸ್ಕರ್ ರೌಡಿ ಗ್ಯಾಂಗ್ ಇಟ್ಟುಕೊಂಡಿದ್ದಾನೆ" ಎಂದು ಆರೋಪಿಸಿದ ರೇವಣ್ಣ ಆಸ್ಪತ್ರೆಯಿಂದಲೇ ಬಡಾವಣೆ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಂ ರಾಜುಗೆ ಕರೆ ಮಾಡಿ, "ಇನ್ನೂ ದೂರು ದಾಖಲಾಗಿಲ್ಲ‌ ಯಾಕೆ?. ಒಂದು ವೇಳೆ ಕೇಸ್ ದಾಖಲಾಗದಿದ್ದರೆ ಇದರ ಪರಿಣಾಮ ಬೇರೆ ಇರುತ್ತದೆ" ಎಂದು ಎಚ್ಚರಿಕೆ ನೀಡಿದರು.

ಪೊಲೀಸ್ ಕೆಲಸವೇ ಬೇಡ ಎನ್ನಿಸುತ್ತಿದೆ

ಪೊಲೀಸ್ ಕೆಲಸವೇ ಬೇಡ ಎನ್ನಿಸುತ್ತಿದೆ

"ನಾನು ಕೂಡಾ 25 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಹೀಗೆ ಮೇಲಿನ ಅಧಿಕಾರಿಗಳು ಯಾರೂ ವರ್ತಿಸಿರಲಿಲ್ಲ, ನನ್ನ ಮಗನಿಗೆ ಸಣ್ಣ ಮಗು ಇದೆ, ಒಂದು ವೇಳೆ ನನ್ನ ಮಗ ಸತ್ತೇ ಹೋಗಿದ್ದರೆ, ಅವನ ಹೆಂಡತಿ‌ಮಕ್ಕಳಿಗೆ ಯಾರು ಗತಿ, ಅವರ ಮಕ್ಕಳಿಗೆ ಹೀಗೆ ಹೊಡೆದಿದ್ದರೆ ಏನು ಮಾಡುತ್ತಿದ್ದರು?, ಇಂತಹ ಸನ್ನಿವೇಶಗಳನ್ನು ನೋಡಿದರೆ ಪೊಲೀಸ್ ಕೆಲಸವೇ ಬೇಡ ಎನ್ನಿಸಿಬಿಡುತ್ತದೆ" ಎಂದು ವೇಣುಗೋಪಾಲ್ ತಂದೆ ಮಳಲಿಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ರೇವಣ್ಣ ಹಾಸನ ಡಿವೈಎಸ್‌ಪಿ ಉದಯ್ ಬಾಸ್ಕರ್ ವಿರುದ್ಧ ಕಿಡಿ ಕಾರುತ್ತಿರುವುದು ಇದೇ ಮೊದಲೇನಲ್ಲ. ಕೆಲವು ದಿನಗಳ ಹಿಂದೆ ಜೆಡಿಎಸ್‌ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ವೇಳೆ ತಮಗೆ ಹೇಗೆ ಬೇಕೋ ಹಾಗೆ ಬರೆಸಿದ್ದರು. ಮರಳು ದಂದೆ ಸೇರಿದಂತೆ ಇತರೆ ದಂಧೆಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

English summary
Hassan DYSP Uday Bhaskar has been accused of assaulting a police constable in front of Superintendent of Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X