ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಋತ್ಯ ರೈಲ್ವೆ : ಹಲವು ರೈಲುಗಳ ವೇಳಾಪಟ್ಟಿ ಬದಲು

|
Google Oneindia Kannada News

Recommended Video

ನೈಋತ್ಯ ರೈಲ್ವೆ : ಹಲವು ರೈಲುಗಳ ವೇಳಾಪಟ್ಟಿ ಬದಲು | Oneindia Kannada

ಹಾಸನ, ನವೆಂಬರ್ 15 : ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಜೋಡಿ ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ನವೆಂಬರ್ 16
ರಿಂದ 27ರ ತನಕ ವೇಳಾಪಟ್ಟಿ ಬದಲಾಯಿಸಲಾಗಿದೆ.

ಮೈಸೂರು ವಿಭಾಗದ ಅರಸೀಕೆರೆ-ಆದಿಹಳ್ಳಿ-ಹೊನ್ನವಳ್ಳಿ-ತಿಪಟೂರು-ಕರಡಿ ರೈಲ್ವೆ ನಿಲ್ದಾಣಗಳ ಮಧ್ಯೆ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಆದ್ದರಿಂದ, ಕೆಲವು ರೈಲುಗಳ ಸಂಚಾರ ರದ್ದಾಗಿದೆ, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ನ.14ರಿಂದ ಶ್ರೀರಾಮಚಂದ್ರನ ಮಾರ್ಗದಲ್ಲಿ ರಾಮಾಯಣ ಎಕ್ಸ್ ಪ್ರೆಸ್ನ.14ರಿಂದ ಶ್ರೀರಾಮಚಂದ್ರನ ಮಾರ್ಗದಲ್ಲಿ ರಾಮಾಯಣ ಎಕ್ಸ್ ಪ್ರೆಸ್

Doubling work : Railway schedule changed

ಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಕಲ್ಕಾ-ಶಿಮ್ಲಾ ರೈಲು ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿ

ಸಂಪೂರ್ಣ ರದ್ದು

* ನ.22ರಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಹರಿಹರ (16577)
* ನ.23ರಂದು ಹೊರಡುವ ಹರಿಹರ-ಯಶವಂತಪುಎ (16578)
* ನ.23 ರಿಂದ 26ರ ತನಕ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಅರಸೀಕರೆ ಪ್ಯಾಸೆಂಜರ್ (56274)
* ನ.24 ರಿಂದ 27ರ ತನಕ ಅರಸೀಕರೆಯಿಂದ ಹೊರಡಬೇಕಿದ್ದ ಅರಸೀಕರೆ-ಹುಬ್ಬಳ್ಳಿ ಪ್ಯಾಸೆಂಜರ್ (56273)
* ನ.23 ರಿಂದ 26ರ ವರೆಗಿನ ಅರಸೀಕೆರೆ-ಮೈಸೂರು (56265/56566)
* ನ.23 ರಿಂದ 27ರ ವರೆಗೆ ಮೈಸೂರಿನಿಂದ ಹೊರಡಲಿದ್ದ ಮೈಸೂರು-ಅರಸೀಕೆರೆ (56268)

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಮಾರ್ಗ ಬದಲಾವಣೆ

* ನ.19ರಂದು ಯಶವಂತಪುರ-ಬರ್ಮಾರ ಎಕ್ಸ್‌ಪ್ರೆಸ್ (14805) ರೈಲು ನೆಲಮಂಗಲ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ. ಚಿಕ್ಕಬಾಣಾವರದಲ್ಲಿ ಮಾತ್ರ ನಿಲುಗಡೆ. ತುಮಕೂರಿನಿಂದ ಬರುವವರು ಚಿಕ್ಕಬಣಾವರ ಅಥವ ಅರಸೀಕೆರೆಯಲ್ಲಿ ರೈಲು ಹತ್ತಬಹುದು.

ರೈಲುಗಳ ನಿಲುಗಡೆ

* ನ.19 ರಿಂದ ನ.23ರ ತನಕ ಬೆಂಗಳೂರು ನಗರ-ಧಾರವಾಡ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (12725) ಬಾಣಸಂದ್ರ ಹಾಗೂ ಅಮ್ಮಸಂದ್ರ ನಿಲ್ದಾಣಗಳಲ್ಲಿ 20 ನಿಮಿಷ ನಿಲ್ಲಲಿದೆ.

* ನ.23ರಂದು ತಿರುಚಿನಾಪಳ್ಳಿ-ಶ್ರೀ ಗಂಗಾನಗರ ಎಕ್ಸ್‌ಪ್ರೆಸ್ (22498) ಬಾಣಸಂದ್ರದಲ್ಲಿ 40 ನಿಮಿಷ ನಿಲ್ಲಲಿದೆ.

* ನವೆಂಬರ್ 24 ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (56269) ರೈಲು ಬಾಣವರ ನಿಲ್ದಾಣದಲ್ಲಿ 30 ನಿಮಿಷ ನಿಲ್ಲಲಿದೆ.

ಸಮಯ ಪರಿಷ್ಕರಣೆ

* ನವೆಂಬರ್ 17 ರಿಂದ 19ರ ತನಕ ಶಿವಮೊಗ್ಗ-ಬೆಂಗಳೂರು ನಗರ (56228) ರೈಲು 120 ನಿಮಿಷ ತಡ. ನವೆಂಬರ್ 22 ರಂದು 60 ನಿಮಿಷ, ನವೆಂಬರ್ 27ರಂದು 80 ನಿಮಿಷ ವಿಳಂಬ

* ನವೆಂಬರ್ 21ರಂದು ಬೆಂಗಳೂರು ನಗರ-ಹುಬ್ಬಳ್ಳಿ ಪ್ಯಾಸೆಂಜರ್ (56913) ರೈಲು 45 ನಿಮಿಷ ತಡ. ನ.21ರಂದು ಮೈಸೂರು-ಅರಸೀಕೆರೆ ಪ್ಯಾಸೆಂಜರ್ಸ (56266) ನಿಮಿಷ ತಡ.

* ಅರಸೀಕೆರೆ-ಮೈಸೂರು ಪ್ಯಾಸೆಂಜರ್ (56265) 60 ನಿಮಿಷ ತಡ

English summary
Due to railway doubling work of Arasikere-Honnavalli-Tiptur-Karadi several rail service schedule changed in Mysusu division of Hassan district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X