ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ದ್ವೇಷದ ಮನೋಭಾವನೆ ಬಿತ್ತಬೇಡಿ: ಎಚ್‌ಡಿ ಕುಮಾರಸ್ವಾಮಿ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮೇ 18: ಹಿಂದೂ ಸಂಘಟನೆಗಳು ಮಕ್ಕಳನ್ನು ಭಯೋತ್ಪಾದಕರ ಒಂದು ಗುಂಪುಗಳನ್ನಾಗಿ ತಯಾರು ಮಾಡಲು ಪ್ರಯತ್ನಿಸುತ್ತಿದ್ದೀರಾ, ರಾಜ್ಯದಲ್ಲಿ ದ್ವೇಷದ ಮನೋಭಾವನೆ ಬಿತ್ತಬೇಡಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಎಂದು ಮನವಿ ಮಾಡಿದ್ದಾರೆ.

ಅರಕಲಗೂಡು ತಾಲೂಕು ಮಲ್ಲಿತಮ್ಮನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಬಜರಂಗದಳದಿಂದ ಏರ್ ಗನ್ ಶಸ್ತ್ರಾಭ್ಯಾಸ ಅಂತ ಹೇಳಿದ್ದಾರೆ. ಈ ಬೆಳವಣಿಗೆ ಎಲ್ಲೋ ಒಂದು ಕಡೆ ಸಮಾಜದ ಸಾಮರಸ್ಯ, ವೈಕ್ಯತೆಯನ್ನು ಹಾಳುಮಾಡುವ ವಾತಾವರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇವತ್ತು ನಮಗೆ ಬೇಕಾಗಿರುವುದು ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿಯ ಕಡೆ ನಮ್ಮ ಹೋರಾಟ ಇರಬೇಕು. ಶಸ್ತ್ರದಿಂದ ಅಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರವನ್ನು ಶಾಂತಿಯಿಂದ ಹೋರಾಟ ಮಾಡಿ ಪಡೆಯಬೇಕು. ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಪ್ರಶ್ನೆ ಮಾಡಿದರು.

ಪಠ್ಯ ಪುಸ್ತಕದಲ್ಲಿ ಹೆಡ್ಗೇವಾರ್ ವಿಷಯ ಸೇರ್ಪಡೆ ವಿಷಯವಾಗಿ ಪ್ರತಿಕ್ರಿಯಿಸಿ, ನೀವು ಯಾವ ವಿಷಯಗಳನ್ನಾದರು ಇಟ್ಟುಕೊಳ್ಳಿ ಮಕ್ಕಳಿಗೆ ಬೇಕಿರುವುದು ಉತ್ತಮ ಶಿಕ್ಷಣ. ಇಲ್ಲಿ ಗುಣಾತ್ಮಕವಾದ ಶಿಕ್ಷಣ ಬೇಕು. ಯಾವ ವ್ಯಕ್ತಿಗಳ ಪಾಠ ಮುಂದಿಟ್ಟುಕೊಂಡು ಕಲಿಸುವುದು ಬೇಡ. ಮಕ್ಕಳಿಗೆ ಮೊದಲು ಕಲಿಸಬೇಕಿರುವುದು ಮನುಷ್ಯತ್ವ, ಹೃದಯ ವೈಶಾಲ್ಯತೆ, ಬದುಕುವ ಮಾರ್ಗ. ಅದರ ಬಗ್ಗೆ ಮೊದಲು ಗಮನಕೊಡಲಿ ಎಂದು ಸಲಹೆ ನೀಡಿದರು.

ಮುಂದೇ ಗೋಡ್ಸೆ, ಸಾವರ್ಕರ್‌ ವಿಷಯ ಇಟ್ಟುಕೊಳ್ಳುತ್ತಾರಾ?

ಮುಂದೇ ಗೋಡ್ಸೆ, ಸಾವರ್ಕರ್‌ ವಿಷಯ ಇಟ್ಟುಕೊಳ್ಳುತ್ತಾರಾ?

ಭಗತ್‌ಸಿಂಗ್ ಒಬ್ಬ ದೇಶ ಪ್ರೇಮಿ, ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದಂತಹ ವ್ಯಕ್ತಿ ಅಂತಹವರ ವಿಷಯಗಳನ್ನು ತೆಗೆದು ಹಾಕಿ ಹೆಡ್ಗೇವಾರ್ ವಿಷಯ ಸೇರಿಸಲು ಹೊರಟಿದ್ದಾರೆ. ಮುಂದೆ ಗೋಡ್ಸೆ, ಸಾವರ್ಕರ್ ವಿಷಯ ಇಟ್ಟುಕೊಳ್ಳುತ್ತೀರಾ. ಮುಂದೆ ಇನ್ನೇನು ಅಜೆಂಡಾ ತೆಗೆದುಕೊಂಡು ಹೋಗುತ್ತೀರಾ ಎಂದು ಸರಕಾರವನ್ನು ಪ್ರಶ್ನಿಸಿದರು. ಈ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ವಾತಾವರಣ ನಿಮಗೆ ಬೇಕಾಗಿದೆ. ಈಗಾಗಲೇ ಕಾಶ್ಮೀರಿ ಫೈಲ್ಸ್ ಸಿನಿಮಾ ತೆಗೆದ್ರಿ, ಇದರಿಂದ ಶಾಂತಿ ನೆಲೆಸಲು ಅವಕಾಶ ಕೊಟ್ಟಿದ್ದೀರಾ? ಅಲ್ಲಿಯ ರಾಜಕಾರಣಿಗಳು ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ ಎಂದು ಹೇಳಿದರು.

ನಾವು ಮರಿತಿಬ್ಬೇಗೌಡರಿಗೆ ಯಾವುದೇ ಕಿರುಕುಳ ನೀಡಿಲ್ಲ

ನಾವು ಮರಿತಿಬ್ಬೇಗೌಡರಿಗೆ ಯಾವುದೇ ಕಿರುಕುಳ ನೀಡಿಲ್ಲ

ಜೆಡಿಎಸ್ ಪಕ್ಷವನ್ನು ತ್ಯಜಿಸಿರುವ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸುತ್ತೇನೆ. ಅವರು ಪಕ್ಷವನ್ನು ಬಿಟ್ಟರೂ ಸಹ ಜೆಡಿಎಸ್ ಹಾಗೂ ಪಕ್ಷದ ವರಿಷ್ಠ ದೇವೇಗೌಡರ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನು ಆಡಿದ್ದಾರೆ. ಕೆಲವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಎಂದ ಕುಮಾರಸ್ವಾಮಿ ಅವರು, ನಾವು ಮರಿತಿಬ್ಬೇಗೌಡರಿಗೆ ಯಾವುದೇ ಕಿರುಕುಳ ನೀಡಿಲ್ಲ. ನೀಡಿದ್ದರೆ ಅವರು ಅದನ್ನು ಹೇಳಿಕೊಳ್ಳಬಹುದಿತ್ತು ಎಂದು ಹೇಳಿದರು.

ಮರಿತಿಬ್ಬೆಗೌಡಗೆ ಟಾಂಗ್

ಮರಿತಿಬ್ಬೆಗೌಡಗೆ ಟಾಂಗ್

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಈ ಬಗ್ಗೆ ಚರ್ಚೆ ಬೇಡ. ಈ ಬಗ್ಗೆ ಶಾಸಕ ಅನ್ನದಾನಿ ಯವರೇ ಸ್ಪಷ್ಟವಾದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ದಲಿತ ಸಮಾಜದ ಯುವಕ ವಾಸಕ್ಕೂ ಮನೆ ಇಲ್ಲದ ವ್ಯಕ್ತಿಯನ್ನು ಪಕ್ಷ ಶಾಸಕರನ್ನಾಗಿ ಆಯ್ಕೆ ಮಾಡಿದೆ. ನಾವೇನು ಅವರನ್ನು ಹಣ ಪಡೆದು ಆಯ್ಕೆ ಮಾಡಿದ್ದೆವಾ? ಎಂದು ಪ್ರಶ್ನಿಸಿದರು. ಮರಿತಿಬ್ಬೇಗೌಡರನ್ನು ಶಾಸಕರನ್ನಾಗಿ ಮಾಡಿದ್ದೇವೆ. ಟಿಕೆಟ್ ನೀಡುವ ಸಂದರ್ಭ ಅವರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಚರ್ಚೆ ಬೇಡ. ಅವರು ಜೆಡಿಎಸ್‌ನಿಂದ ಎಂ.ಎಲ್.ಸಿ. ಆಗಿದ್ದಾರೆ ಡಿಕೆಶಿ ಹೇಗೆ ಬೆಳೆಸುತ್ತಾರೆ. ಅವರು ಹೇಗೆ ಬೆಳೆಸಲು ಸಾಧ್ಯ, ಆ ಟೈಂಗೆ ಹೇಗೆ ಬೇಕು ಹಾಗೆ ಹೇಳಿಕೊಂಡು ಹೋಗುತ್ತಾರೆ.

ಹೆಚ್ ಡಿಕೆ ಜೊತೆ ವೇದಿಕೆ ಹಂಚಿಕೊಂಡು ಎ.ಟಿ.ರಾಮಸ್ವಾಮಿ

ಹೆಚ್ ಡಿಕೆ ಜೊತೆ ವೇದಿಕೆ ಹಂಚಿಕೊಂಡು ಎ.ಟಿ.ರಾಮಸ್ವಾಮಿ

ಎ.ಟಿ.ರಾಮಸ್ವಾಮಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ಗೆ ಹೋಗಲಿದ್ದಾರೆ, ಅಮ್ ಆದ್ಮಿ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಚರ್ಚೆಗಳ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡು ರಾಮಸ್ವಾಮಿ ಪಕ್ಷ ತ್ಯಜಿಸುವ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ತಾಲೂಕಿನ ಮಲ್ಲಿತಮ್ಮನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ದೇವಮ್ಮ ದೇವಿ ಮತ್ತು ಗ್ರಾಮ ದೇವತೆಗಳ ನೂತನ ಹಾಗೂ ಪ್ರಾಣ ಪ್ರತಿಷ್ಠಾಪನಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ರೇವಣ್ಣ ಜೊತೆ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ರಾಮಸ್ವಾಮಿ, ನಾನು ಕೊಟ್ಟ ಸಲಹೆ ಕೇಳಿದ್ರೆ ಕುಮಾರಸ್ವಾಮಿಯವರೇ, ಶಾಶ್ವತವ ಮುಖ್ಯಮಂತ್ರಿ ಆಗಿರುತ್ತಿದ್ರಿ. ನಾನು ಹೇಳಿದ್ದನ್ನ ನೀವು ಯಾಕೆ ಕೇಳಿಲ್ಲವೋ ಗೊತ್ತಿಲ್ಲ ಬಹುಶಃ ನೀವು ಹೆಚ್.ಡಿ.ರೇವಣ್ಣನ ಮಾತು ಕೇಳಿದ್ರೋ ಏನೋ ಎಂದರು.

ನಾನು ಸಚಿವನಾಗಬೇಕು ಎಂದು ಬಯಸಿಲ್ಲ

ನಾನು ಸಚಿವನಾಗಬೇಕು ಎಂದು ಬಯಸಿಲ್ಲ

ಈ ನಡುವೆ ಬಂದು ಮಾತನಾಡಿದ ಮಾಜಿ ಸಚಿವ ರೇವಣ್ಣ, ಅಭಿವೃದ್ಧಿಯಲ್ಲಿ ನಾನು ಎಂದೂ ರಾಮಸ್ವಾಮಿ ಅವರನ್ನ ಮೀರಿಸಲು ಆಗಲ್ಲ. ಒಂದು ಬಾರಿ ನಿಮ್ಮನ್ನ ಮಂತ್ರಿ ಮಾಡಬೇಕು ಎನ್ನೋದು ನನ್ನ ಆಸೆ ಎನ್ನುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಚಿವರಾಗಿ ಮಾಡುವ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ರಾಮಸ್ವಾಮಿ, ನಾನು ಸಚಿವನಾಗಬೇಕು ಎಂದು ಬಯಸಿಲ್ಲ. ಸಚಿವ ಆಗ ಬಯಸಿದ್ದರೆ ಎಂದೋ ಆಗಬಹುದಿತ್ತು, ಸಾಕಷ್ಟು ಬಾರಿ ನನ್ನನ್ನ ಕರೆದರು ಎಂದು ರೇವಣ್ಣ ಅವರಿಗೆ ಮನದಟ್ಟು ಮಾಡಿದರು.
ನಾನು ಎಂದು ಕೈ ಒಡ್ಡಿ ಬೇಡಿದವನಲ್ಲ. ನಮ್ಮ ನಾಯಕರಿಗೆ ಎಂದು ಕೆಟ್ಟ ಹೆಸರು ಬರದಂತೆ ನೋಡಿಕೊಂಡಿದ್ದೇನೆ. ಎನ್ನೋ ವಿಶ್ವಾಸ ನನಗಿದೆ. ದುಷ್ಟ, ದುರಾಸೆಯ, ಲೂಟಿಕೋರರೇ ಇಂದು ಜಾಸ್ತಿ ಇದ್ದಾರೆ. ಇದೆಲ್ಲದರ ನಡುವೆ ಸಾರ್ವಜನಿಕ ಜೀವನದಲ್ಲಿ ಈಜಿಕೊಂಡು ಏಗಿಕೊಂಡು ಹೋಗೋದು ಬಹಳ ಕಷ್ಟ ಎಂದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮತ್ತಿತರರಿದ್ದರು.

English summary
Are the Hindu organizations trying to prepare children as a group of terrorists?, HD Kumaraswamy warns not to spread hatred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X