ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜ್ವಲ್ ರೇವಣ್ಣ ರಂಗಪ್ರವೇಶಕ್ಕೆ ಎದುರಾಯಿತು ಹೊಸ ವಿಘ್ನ: ಈ ಬಾರಿ ಯಾರಿಂದ?

|
Google Oneindia Kannada News

Recommended Video

ಪ್ರಜ್ವಲ್ ರೇವಣ್ಣ ರಂಗಪ್ರವೇಶಕ್ಕೆ ಎದುರಾಯಿತು ಹೊಸ ವಿಘ್ನ..! | Oneindia Kannada

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಮಗ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಲೇಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟಿದ್ದ ತಾಯಿ ಭವಾನಿ ರೇವಣ್ಣ ಕೊನೆಗೂ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ವಿಫಲರಾಗಿದ್ದರು.

ಈ ವಿಚಾರದಲ್ಲಿ ದೇವೇಗೌಡರ ಮನೆಯಲ್ಲಿ ಸಾಕಷ್ಟು ವಾದವಿವಾದಗಳು ನಡೆದಿದ್ದವು ಎಂದೇ ಸುದ್ದಿಯಾಗಿತ್ತು. ನನ್ನ ಮೊಮ್ಮಗನನ್ನು ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಡಿಸಬೇಕೆಂದು ನನಗೆ ಗೊತ್ತಿದೆ ಎಂದು ಹೇಳಿದ್ದ ಗೌಡ್ರು, ನಂತರ ಪ್ರಜ್ವಲ್ ಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು.

ಸೀಟು ಹಂಚಿಕೆ ಅಂತಿಮ: ಜೆಡಿಎಸ್ಸಿಗೆ ಎಷ್ಟು, ಕಾಂಗ್ರೆಸ್ಸಿಗೆ ಮಿಕ್ಕಿದ್ದೆಷ್ಟು?ಸೀಟು ಹಂಚಿಕೆ ಅಂತಿಮ: ಜೆಡಿಎಸ್ಸಿಗೆ ಎಷ್ಟು, ಕಾಂಗ್ರೆಸ್ಸಿಗೆ ಮಿಕ್ಕಿದ್ದೆಷ್ಟು?

ಹಾಸನ ಕ್ಷೇತ್ರದಿಂದ ಪ್ರಜ್ವಲ್ ಸ್ಪರ್ಧಿಸುವುದಕ್ಕೆ ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದ ದೇವೇಗೌಡರಿಗೆ ಈಗ ಮತ್ತೊಂದು ಅಡ್ದಿ ಎದುರಾಗುವ ಸಾಧ್ಯತೆಯಿದೆ. ಈ ಬಾರಿ ಅವರ ತಾಯಿ, ಭವಾನಿ ರೇವಣ್ಣ, ನನ್ನ ಮಗ ಸ್ಪರ್ಧಿಸುವುದಕ್ಕಿಂತ ನನ್ನ ಮಾವನವರೇ ಸ್ಪರ್ಧಿಸುವುದು ಉತ್ತಮ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜುಪ್ರಜ್ವಲ್ ಸ್ಪರ್ಧಿಸಿದರೆ ಬೆಂಬಲ ನೀಡೊಲ್ಲ: ಎ ಮಂಜು

ದೇವೇಗೌಡರು ಮೊಮ್ಮಗನಿಗಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ತಯಾರಿ ನಡೆಸಿಕೊಂಡಿದ್ದಾರೆ ಎನ್ನುವ ಸುದ್ದಿಯ ನಡುವೆ, ಭವಾನಿ ಹೇಳಿಕೆ ಆಶ್ಚರ್ಯವನ್ನು ಉಂಟುಮಾಡಿದೆ.

ಹಾಸನ ಲೋಕಸಭಾ ಕ್ಷೇತ್ರ

ಹಾಸನ ಲೋಕಸಭಾ ಕ್ಷೇತ್ರ

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಹಾಸನ ನಗರ ಸೀಟೊಂದನ್ನು ಬಿಟ್ಟು, ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಲೋಕೋಪಯೋಗಿ ಸಚಿವ ರೇವಣ್ಣ ಅವರ ಭರ್ಜರಿ ಹಿಡಿತದಲ್ಲಿರುವ ಹಾಸನದಲ್ಲಿ ಪ್ರಜ್ವಲ್ ಸ್ಪರ್ಧಿಸಿದರೆ ಗೆಲುವು ಸುಲಭ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನನ್ನ ಜೊತೆ ಹತ್ತು ದಿನ ಸುತ್ತಾಡಿದರೆ, ಅವನನ್ನು ರೆಡಿ ಮಾಡುತ್ತೇನೆ

ನನ್ನ ಜೊತೆ ಹತ್ತು ದಿನ ಸುತ್ತಾಡಿದರೆ, ಅವನನ್ನು ರೆಡಿ ಮಾಡುತ್ತೇನೆ

ಮೊಮ್ಮಗ ಪ್ರಜ್ವಲ್ ಸ್ಪರ್ಧೆಗೆ ಸಮಯ ಕೂಡಿ ಬಂದಿದೆ. ಇನ್ನೂ ಸ್ವಲ್ಪ ಪಳಗಬೇಕು, ನನ್ನ ಜೊತೆ ಹತ್ತು ದಿನ ಸುತ್ತಾಡಿದರೆ, ಅವನನ್ನು ರೆಡಿ ಮಾಡುತ್ತೇನೆ ಎಂದು ಎರಡು ದಿನಗಳ ಹಿಂದೆಯಷ್ಟೇ ದೇವೇಗೌಡ್ರು ಹೇಳಿದ್ದರು. ಲೋಕಸಭಾ ರಂಗಪ್ರವೇಶಕ್ಕೆ ಪ್ರಜ್ವಲ್ ಕೂಡಾ ಪೂರ್ವತಯಾರಿಯನ್ನು ಈಗಾಗಲೇ ಆರಂಭಿಸಿದ್ದರು.

ಬಿಜೆಪಿ ಶಾಸಕ ಪ್ರೀತಂ ಹಾಗೂ ಟ್ವೀಟ್ ವಿರುದ್ಧ ಪ್ರಜ್ವಲ್ ಫ್ಯಾನ್ಸ್ ಗರಂಬಿಜೆಪಿ ಶಾಸಕ ಪ್ರೀತಂ ಹಾಗೂ ಟ್ವೀಟ್ ವಿರುದ್ಧ ಪ್ರಜ್ವಲ್ ಫ್ಯಾನ್ಸ್ ಗರಂ

ದೇವೇಗೌಡರೇ ಸ್ಪರ್ಧಿಸಬೇಕೆನ್ನುವುದು ನನ್ನ ನಿಲುವು

ದೇವೇಗೌಡರೇ ಸ್ಪರ್ಧಿಸಬೇಕೆನ್ನುವುದು ನನ್ನ ನಿಲುವು

ಬೇಲೂರಿನಲ್ಲಿ ಗುರುವಾರ (ಜ 31) ಮಾತನಾಡುತ್ತಿದ್ದ ಭವಾನಿ ರೇವಣ್ಣ, ಹಾಸನದಲ್ಲಿ ನನ್ನ ಮಾವ ದೇವೇಗೌಡರೇ ಚುನಾವಣೆಗೆ ಸ್ಪರ್ಧಿಸಲಿ ಎಂಬುದು ನನ್ನ ಒತ್ತಾಯ. ಹಲವು ಬಾರಿ ನಾನು ಮಾವನವರಲ್ಲಿ ನೀವೇ ನಿಲ್ಲುವಂತೆ ಒತ್ತಾಯವನ್ನು ಮಾಡಿದ್ದೇನೆ. ವೈಯಕ್ತಿಕವಾಗಿ ದೇವೇಗೌಡರೇ ಸ್ಪರ್ಧಿಸಬೇಕೆನ್ನುವುದು ನನ್ನ ನಿಲುವು ಕೂಡಾ.ಪ್ರಜ್ವಲ್ ಕಣಕ್ಕಿಳಿದರೆ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತದೆ ಎಂದಿರುವ ಭವಾನಿ, ಪಕ್ಷದ ಅಂತಿಮ ನಿರ್ಧಾರಕ್ಕೆ ನಾನು ಬದ್ದ ಎಂದಿದ್ದಾರೆ.

ಸ್ಥಳೀಯ ಘಟಕದಿಂದ ಉತ್ತಮ ಬೆಂಬಲ

ಸ್ಥಳೀಯ ಘಟಕದಿಂದ ಉತ್ತಮ ಬೆಂಬಲ

ಪ್ರಜ್ವಲ್ ಸ್ಪರ್ಧಿಸುವುದಕ್ಕೆ ಜೆಡಿಎಸ್ ಸ್ಥಳೀಯ ಘಟಕದಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದರೂ, ಮಿತ್ರ ಪಕ್ಷ ಕಾಂಗ್ರೆಸ್ಸಿನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯವಾಗಿ ಪ್ರಭಲರಾಗಿರುವ ಎ ಮಂಜು ಬಹಿರಂಗವಾಗಿಯೇ ಗೌಡ್ರು ಸ್ಪರ್ಧಿಸಿದರೆ ಮಾತ್ರ ನಮ್ಮ ಬೆಂಬಲ ಎಂದು ಹೇಳಿದ್ದರು. ಈ ಕಾರಣಕ್ಕಾಗಿ, ಭವಾನಿ ರೇವಣ್ಣ, ಮಾವನವರೇ ಸ್ಪರ್ಧಿಸಲಿ ಎನ್ನುವ ಹೇಳಿಕೆಯನ್ನು ನೀಡಿರಬಹುದು.

ಲೋಕಸಭೆ ಚುನಾವಣೆ: ಹಾಸನದಿಂದಲೇ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಸಜ್ಜು!ಲೋಕಸಭೆ ಚುನಾವಣೆ: ಹಾಸನದಿಂದಲೇ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಸಜ್ಜು!

ಪ್ರಜ್ವಲ್ ರೇವಣ್ಣ ಕನಸು ಮತ್ತೆ ನುಚ್ಚುನೂರು

ಪ್ರಜ್ವಲ್ ರೇವಣ್ಣ ಕನಸು ಮತ್ತೆ ನುಚ್ಚುನೂರು

ಒಂದು ವೇಳೆ ಸೊಸೆಯ ಮಾತಿಗೆ ಮಾವ ಸೊಪ್ಪು ಹಾಕಿದರೆ, ಪ್ರಜ್ವಲ್ ರೇವಣ್ಣ ಕನಸು ಮತ್ತೆ ನುಚ್ಚುನೂರಾಗಲಿದೆ. ಮೊದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಪ್ರಜ್ವಲ್ ಅವರನ್ನು ಹೇಗೋ ಸಮಾಧಾನ ಮಾಡಿ, ಲೋಕಸಭೆಗೆ ಸ್ಪರ್ಧಿಸಲು ತಯಾರು ನಡೆಸುವಂತೆ ಗೌಡ್ರು ಸೂಚಿಸಿದ್ದರು. ಇನ್ನೇನು ಆಗುತ್ತೋ, ಪ್ರಜ್ವಲ್ ರಾಜಕೀಯ ಭವಿಷ್ಯ?

English summary
My father-in-law H D Deve Gowda is the right choice than my son Prajwal Revanna from Hassan LS constituency, Bhavani Revanna shocking statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X