ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

50 ನಿಮಿಷದಲ್ಲಿ ವಿಂದ್ಯಗಿರಿ ಬೆಟ್ಟವೇರಿದ ದೇವೇಗೌಡರು!

|
Google Oneindia Kannada News

ಹಾಸನ, ಫೆಬ್ರವರಿ 25 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. 8ನೇ ದಿನವಾದ ಶನಿವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಂದ್ಯಗಿರಿ ಬೆಟ್ಟವನ್ನು ಏರಿ ಬಾಹುಬಲಿಯ ದರ್ಶನ ಪಡೆದರು.

ಶನಿವಾರ ಮಧ್ಯಾಹ್ನ 12.25ರ ಸುಮಾರಿಗೆ ದೇವೇಗೌಡರು ಪತ್ನಿ ಚೆನ್ನಮ್ಮ ಜೊತೆ ಶ್ರವಣಬೆಳಗೊಳಕ್ಕೆ ಆಗಮಿಸಿದರು. ಪತ್ನಿಗೆ ಡೋಲಿಯಲ್ಲಿ ಬರುವಂತೆ ಹೇಳಿ, ಬೆಟ್ಟವೇರಲು ಆರಂಭಿಸಿದರು.

ಬಾಹುಬಲಿಗಾಗಿ 11.60 ಕೋಟಿ ದಾನ ಮಾಡಿದ ರಾಜಸ್ತಾನಿ ಕುಟುಂಬಬಾಹುಬಲಿಗಾಗಿ 11.60 ಕೋಟಿ ದಾನ ಮಾಡಿದ ರಾಜಸ್ತಾನಿ ಕುಟುಂಬ

85 ವರ್ಷ ವಯಸ್ಸಿನ ಎಚ್.ಡಿ.ದೇವೇಗೌಡರು, ಬರಿಗಾಲಿನಲ್ಲಿ ಅಂಗ ರಕ್ಷಕರು ಮತ್ತು ಶಾಸಕ ಸಿ.ಎನ್.ಬಾಲಕೃಷ್ಣ ಜೊತೆ 50 ನಿಮಿಷದಲ್ಲಿ ವಿಂದ್ಯಗಿರಿ ಬೆಟ್ಟವನ್ನು ಏರಿದರು. 412 ಮೆಟ್ಟಲುಗಳನ್ನು ಏರುವಾಗ ಎರಡು ಬಾರಿ ವಿಶ್ರಾಂತಿ ಪಡೆದರು.

In Pics: ಮುಗಿಲೆತ್ತರಕ್ಕೆ ನಿಂತ ವಿರಾಗಿಗೆ ಮಹಾಮಸ್ತಕಾಭಿಷೇಕ

Deve Gowda climbs Shravanabelagola Vindyagiri hill in barefoot

ಬೆಟ್ಟದಿಂದ ಕೆಳಗೆ ಇಳಿದ ಬಳಿಕ ಮಾತನಾಡಿದ ದೇವೇಗೌಡರು, 'ದೇವರ ಪ್ರೇರಣೆಯಿಂದ ಬೆಟ್ಟ ಹತ್ತಿ ಮಹಾನುಭಾವನ ದರ್ಶನ ಮಾಡಿದೆ' ಎಂದು ಹೇಳಿದರು.

ಮಹಾಮಸ್ತಕಾಭಿಷೇಕ ಮತ್ತು ಹಾಸನದ 7 ಸುಂದರ ಪ್ರವಾಸಿ ತಾಣಮಹಾಮಸ್ತಕಾಭಿಷೇಕ ಮತ್ತು ಹಾಸನದ 7 ಸುಂದರ ಪ್ರವಾಸಿ ತಾಣ

Deve Gowda climbs Shravanabelagola Vindyagiri hill in barefoot

'ಬಾಹುಬಲಿ ಎಲ್ಲವನ್ನು ತೊರೆದು ವಿರಾಗಿಯಾಗಿ ಬೆಟ್ಟದ ಮೇಲೆ ನಿಂತಿದ್ದಾನೆ. ಆದರೆ, ಇಂದು ಆಡಳಿತ ನಡೆಸುವವರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಅಧಿಕಾರ ಸಿಕ್ಕಿರುವುದು ಜನಸೇವೆಗಾಗಿ ಎಂದು ತಿಳಿದು ಅಹಂ ತೊರೆದು ಜನವರವಾಗಿ ನೆಡೆದುಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.

ಶನಿವಾರ ಮಹಾಮಸ್ತಕಾಭಿಷೇಕದ 8ನೇ ದಿನ. ಬೆಳಗ್ಗೆ 1008 ಕಲಶಗಳಿಂದ ಬಾಹುಬಲಿಗೆ ಅಭಿಷೇಕ ನಡೆಯಿತು.

English summary
Former prime minister and JDS Supremo H.D.Deve Gowda climbed nearly 400 steps to reach the shrine of Lord Bahubali on the Vindhyagiri in Shravanabelagola, Hassan for the ongoing Mahamastakabhisheka. 84-year-old Deve Gowda climbed the hill barefoot with the help of security personnel and MLA C.N.Balakrishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X