• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

By Mahesh
|
   ತ್ವರಿತಗತಿಯಲ್ಲಿ ಅಭಿವೃದ್ದಿ ಕೈಗೊಳ್ಳುವಂತೆ ಮಾಜಿ ಪ್ರಧಾನಿ ದೇವೇಗೌಡ ಸೂಚನೆ | Oneindia Kannada

   ಹಾಸನ ಸೆಪ್ಟೆಂಬರ್ 04: ಎತ್ತಿನ ಹೊಳೆ ಸೇರಿದಂತೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಯನ್ನು ಚುರುಕುಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

   ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನೀರಾವರಿ ಯೋಜನೆಗಳಿಗೆ ವಶಪಡಿಸಿಕೊಳ್ಳುವ ಭೂಮಿಗೆ ಸಕಾಲದಲ್ಲಿ ರೈತರಿಗೆ ಪರಿಹಾರ ನೀಡಬೇಕೆಂದು ಹಾಗೂ ಕಾಮಗಾರಿಗಳು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದರು.

   ಸ್ಥಳೀಯ ಸಂಸ್ಥೆ ಚುನಾವಣೆ : ಹಾಸನದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್

   ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಹೆಚ್.ಕೆ.ಕುಮಾರಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿ, ಕೆ.ಎಸ್ ಲಿಂಗೇಶ್ ಅವರು ಎತ್ತಿನಹಳ್ಳ ಯೋಜನೆ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಇತರ ಯೋಜನೆಗಳಲ್ಲಿ ಪರಿಹಾರ ವಿತರಣೆ ಅಗದೇ ಇರುವ ಬಗ್ಗೆ ಸಭೆಯ ಗಮನ ಸೆಳೆದು ಜಿಲ್ಲೆಗೆ ಹೆಚ್ಚುವರಿ ಭೂಸ್ವಾಧೀನಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದರು.

   ಶಾಸಕರಾದ ಪ್ರೀತಂ ಜೆ. ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾದೇವರಾಜ್, ಉಪಾಧ್ಯಕ್ಷರಾದ ಸುಪ್ರದೀಪ್ ಯಜಮಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜಗದೀಶ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಉಪವಿಭಾಗಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಸಕಲೇಶಪುರ, ಬೇಲೂರು, ಚಿಕ್ಕಮಗಳೂರು ರೈಲ್ವೆ ಮಾರ್ಗಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ರೈಲ್ವೆ ಯೋಜನೆಗಳಿಗೂ ಭೂಸ್ವಾಧೀನ ಪ್ರಕ್ರೀಯೆ ತ್ವರಿತವಾಗಿ ಮುಗಿಸುವಂತೆ ಸೂಚಿಸಿದ ಮಾಜಿ ಫ್ರಧಾನಿ ದೇವೇಗೌಡರು ಹಾಸನ ರೈಲ್ವೆ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣದ ಬಳಿಗೆ ಸ್ಥಳಾಂತರಿಸುವ ಯೋಜನೆಗೂ

   ಮಂಜೂರಾತಿ ದೊರೆತಿದೆ. ಹಾಸನ ನಗರದ ಎನ್.ಆರ್.ವೃತ್ತದಿಂದ ಕೆ.ಎಸ್.ಆರ್.ಟಿ.ಸಿ.ನಿಲ್ದಾಣದವರೆಗಿನ ರೈಲ್ವೆ ಮೇಲ್‍ಸೇತುವೆ ಕಾಮಗಾರಿ ಶೀಘ್ರ ಪ್ರಾರಂಭವಾಗಬೇಕಿದೆ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಚಿಸಿದರು.

   ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ರೋಹಿಣಿಗೆ ಎಚ್ಡಿಡಿ ಕಿವಿಮಾತು

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಮಾತನಾಡಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ನೀರಾವರಿ ಯೋಜನೆಗಳು ಜಾರಿಯಲ್ಲಿದ್ದು, ಈ ಹಿಂದೆಯೇ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ 200 ಕೋಟಿ ರೂಪಾಯಿ ಭೂ ಪರಿಹಾರ ಬಾಕಿ ಇದೆ. ಎತ್ತಿನಹೊಳೆ ಯೋಜನೆ ಜಿಲ್ಲೆಯಲ್ಲಿ 2 ಹಂತಗಳಲ್ಲಿ ನಡೆಯುತ್ತಿದೆ. ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ನೇರ ಖರೀದಿ ಮೂಲಕ ಮಾಡಲಾಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 2ನೇ ಹಂತದ ಯೋಜನೆ ಜಾರಿಯಾಗಬೇಕಿದ್ದು, ಸಮಾಜಿಕ ಪರಿಣಾಮ ಸಮೀಕ್ಷೆ ನಡೆಸಿ ಆನಂತರ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಿದೆ ಎಂದರು.

   ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಆದಷ್ಟು ಶೀಘ್ರವಾಗಿ ಅದನ್ನು ದುರಸ್ಥಿಪಡಿಸುವಂತೆ ಹಾಗೂ ಮಳೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರು ಸೂಚಿದರು.

   ಅಂಚೆ ವಿಮಾ ಗ್ರಾಮ ಯೋಜನೆ ಹಳ್ಳಿಗರಿಗೆ ಉಪಯುಕ್ತ : ಡಿಸಿ ರೋಹಿಣಿ

   ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಸಭೆಯಲ್ಲಿ ಜಿಲ್ಲೆಯ ಕೆಲವೆಡೆ ಮುಂದುವರೆದಿರುವ ಬರ ಪರಿಸ್ಥಿತಿ, ಕಳೆದ ಸಾಲಿನಲ್ಲಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಸಿದ ಬಾಕಿ ಬಿಲ್ ಪಾವತಿ, ನಾಶವಾದ ತೆಂಗು ಬೆಳೆಗೆ ಪರಿಹಾರ ಅತಿವೃಷ್ಠಿ ಹಾಗೂ ಅನಾವೃಷ್ಠಿಗಳಿಂದಾಗಿರುವ ಬೆಳೆ ಹಾನಿಗೆ ಪರಿಹಾರ ವಿತರಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶಾಸಕರಾದ ಶಿವಲಿಂಗೇಗೌಡ, ಹೆಚ್.ಕೆ. ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ, ಬಾಲಕೃಷ್ಣ, ಲಿಂಗೇಶ್ ಅವರು ತಮ್ಮ ಕ್ಷೇತ್ರದಲ್ಲಾಗಿರುವ ಸಮಸ್ಯೆಗಳನ್ನು ಮಾಜಿ ಪ್ರಧಾನಿ ದೇವೇಗೌಡರ ಮುಂದೆ ತೆರೆದಿಟ್ಟರು.

   ಕೃಷಿಯಂತ್ರಿಕರಣ ಯೋಜನೆಯಡಿ ನೀಡಲಾಗುತ್ತಿರುವ ಸಾಧನ ಸಲಕರಣೆಗಳು ಚೀನಾದಿಂದ ಅಮದಾಗುತ್ತಿದ್ದು ಮಾರುಕಟ್ಟೆ ದರವೇ ಸಬ್ಸಿಡಿ ಹಣಕ್ಕಿಂತಲು ಕಡಿಮೆ ಇದೆ ಈ ಮಾಫಿಯಾಕ್ಕೆ ಕಡಿವಾಣ ಬೀಳಬೇಕಿದೆ ಎಂದು ಎ.ಟಿ. ರಾಮಸ್ವಾಮಿ ಹೇಳಿದರು.

   ಹಾಸನದ ಸಂತ್ರಸ್ತರಿಗೆ ತಾತ್ಕಾಲಿಕ ವ್ಯವಸ್ಥೆ : ರೋಹಿಣಿ ಸಿಂಧೂರಿ

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಜಿಲ್ಲಾ ಅಭಿವೃದ್ಧಿ ಸಭೆಯಲ್ಲಿ ಅಧಿಕಾರಿಗಳಿಗೆ ದೇವೇಗೌಡರಿಂದ ಎಚ್ಚರಿಕೆ

   ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿಯವರು ಸಕಲೇಶಪುರ ಮತ್ತು ಆಲೂರು ಭಾಗದ ಮಳೆಯಿಂದಾಗಿರುವ ಅನಾಹುತಗಳನ್ನು ವಿವರಿಸಿದರೆ, ಶಾಸಕ ಕೆ..ಎಂ. ಶಿವಲಿಂಗೇಗೌಡ ಅವರು ಜಿಲ್ಲೆಯ ಒಟ್ಟಾರೆ ಮಳೆ ಬೆಳೆಯ ಸಮಗ್ರ ವರದಿಯಲ್ಲಿ ಯಾವಾಗಲೂ ಉತ್ತಮ ಪರಿಸ್ಥಿತಿ ಎಂದಿರುತ್ತದೆ. ಅದರೆ ಅರಸೀಕೆರೆ 10 ವರ್ಷಗಳಿಂದ ಬರದಿಂದ ಕಂಗೆಟ್ಟಿದೆ ಅಧಿಕಾರಿಗಳು ವರದಿ ನೀಡುವಾಗ ತಾಲ್ಲೂಕಿನ ನೈಜ ಚಿತ್ರಣವನ್ನು ವಿಶೇಷವಾಗಿ ವರದಿ ಮಾಡಿ ಜನರ ಸಂಕಷ್ಠ ನಿವಾರಣೆಗೆ ಸಹಕರಿಸಬೇಕು ಎಂದರು.

   ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಚಿವ ರೇವಣ್ಣ ಗರಂ

   ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಚಿಂತನೆಗಳಿವೆ

   ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಚಿಂತನೆಗಳಿವೆ

   ಸಚಿವ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಚಿಂತನೆಗಳಿವೆ ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಗಳು ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿಕೊಂಡು ರೈತರಿಗೆ ನೆರವಾಗಬೇಕು. ಕೈಗಾರಿಕಾ ಇಲಾಖೆಯಲ್ಲಿ ಗ್ರಾಮಿಣ ನಿರುದ್ಯೋಗಿಗಳಿಗೆ ಸ್ವ ಉದ್ಯೋಗಕ್ಕೆ ಸಾಲ ಮತ್ತು ತರಬೇತಿ ಒದಗಿಸಲು ಇನ್ನಷ್ಟು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕು ಎಂದರು.

   ಅಂಗಡಿ, ಹೊಟೇಲ್‍ಗಳಲ್ಲೂ ಅನಧಿಕೃತವಾಗಿ ನಡೆಯುತ್ತಿರುವ ಮಧ್ಯ ಮಾರಾಟದಿಂದ ಹಳ್ಳಿಗಳ ಪರಿಸ್ಥಿತಿ ಹದಗೆಟ್ಟಿದೆ ಈ ಬಗ್ಗೆ ಅಬಕಾರಿ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕುಸ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಬಾಕಿ ಇರುವ ಯೋಜನೆಗಳನ್ನು ಆದಷ್ಟು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

   ಶಿರಾಡಿ, ಬಿಸಲೆ

   ಶಿರಾಡಿ, ಬಿಸಲೆ

   ಶಿರಾಡಿ, ಬಿಸಲೆ ಸೇರಿದಂತೆ ಹದಗೆಟ್ಟಿರುವ ರಸ್ತೆಗಳ ದುರಸ್ಥಿಕಾರ್ಯ ಶೀಘ್ರದಲ್ಲೇ ನಡೆಯಲಿದೆ ಕಂದಾಯ ಇಲಾಖೆ ಮೂಲಕ ಆಲೂಗೆಡ್ಡೆ, ತೆಂಗು, ಭತ್ತ, ರಾಗಿ ಮತ್ತಿತರ ಬೆಳೆಹಾನಿಗೆ ಪರಿಹಾರ ಬೇಗನೆ ವಿತರಣೆಯಾಗಬೇಕು ಎಂದರು.

   ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳನ್ನು ತೊಡಗಿಸಿ ಜಿಲ್ಲೆಯ ಸರ್ವತೋಮುಕ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಸಚಿವರು ಹೇಳಿದರು.

   ಕೆ.ಎಂ. ಶಿವಲಿಂಗೇಗೌಡ ಅವರು ಯಗಚಿ ನದಿಯಿಂದ ಅರಸೀಕೆರೆಯ 30 ಗ್ರಾಮಗಳಿಗೆ ನೀರು ದೊರೆಯಬೇಕಿದೆ ಅದೇ ರೀತಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆದಷ್ಟು ತುರ್ತಾಗಿ ಪೂರ್ಣಗೊಳಿಸಿ ತಾಲ್ಲೂಕಿನ ಜನರ ನೀರಿನ ಭವಣೆ ನೀಗಿಸುವಂತೆ ಮನವಿ ಮಾಡಿದರು.

   ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ

   ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ

   ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೇಮಕಾತಿ ವೇಳೆ ಇರುವ ಲೋಪಗಳು ಪಶು ಭಾಗ್ಯ ಯೋಜನೆ ಸಬ್ಸಿಡಿ ಹಣ ವಿತರಣೆಯಲ್ಲಿ ನಡೆದಿರುವ ತಪ್ಪುಗಳ ಬಗ್ಗೆ ಸಭೆಯಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

   ಪಶು ಭ್ಯಾಗ ಸಾಲ ಮಂಜೂರಾತಿಯಲ್ಲಿ ಉಂಟಾಗಿರುವ ತಪ್ಪುಗಳ ಬಗ್ಗೆ ಉಪನಿರ್ದೇಶಕರ ಹಂತದಲ್ಲಿ ನಡೆದಿರುವ ತನಿಖೆ ಬಗ್ಗೆ ಪರಿಶೀಲಿಸಿ ತಮ್ಮಗೆ ವರದಿ ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

   ಮೊದಲ ಭಾರಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀನೆ

   ಮೊದಲ ಭಾರಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀನೆ

   ಮೊದಲ ಭಾರಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀನೆ: ಮಾಜಿ ಪ್ರಧಾನಿ ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ನಡೆದ ದಿಶಾ ಸಭೆಯಲ್ಲಿ ಇದೇ ಮೊದಲ ಭಾರಿ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಲಾಯಿತು. ಸಭೆಯ ನಂತರ ಈ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಈ ಸಭೆ ತಮಗೆ ತೃಪ್ತಿ ತಂದಿದೆ ಇದೇ ಮೊದಲ ಭಾರಿಗೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದಿರುವುದು ಸಮಾಧಾನ ತಂದಿದೆ ಎಂದರು.

   ಶಾಸಕರಾದ ಪ್ರೀತಂ ಜೆ. ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾದೇವರಾಜ್, ಉಪಾಧ್ಯಕ್ಷರಾದ ಸುಪ್ರದೀಪ್ ಯಜಮಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜಗದೀಶ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಉಪವಿಭಾಗಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former PM HD Deve Gowda chaired Hassan district development meet and urged officials to speed up the land acquisition works related to Irrigation projects.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more