ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಡೆಂಗ್ಯೂ ಜ್ವರದ ವಿರುದ್ಧ ಜನಜಾಗೃತಿ

By Gururaj
|
Google Oneindia Kannada News

ಹಾಸನ, ಸೆಪ್ಟೆಂಬರ್ 06 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಾಸನ ನಗರದಾದ್ಯಂತ ಡೆಂಗ್ಯೂ ನಿಯಂತ್ರಣ ಸಲುವಾಗಿ ಸಾಮೂಹಿಕ ಈಡಿಸ್ ಲಾರ್ವ ಸಮೀಕ್ಷೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹಾಸನ ನಗರದಲ್ಲಿ ಸೆಪ್ಟೆಂಬರ್ 3 ರಿಂದ 5ವರೆಗೆ ಮೂರು ದಿನಗಳ ಕಾಲ ಸಮೀಕ್ಷೆ ನಡೆಯಿತು. ಸಮೀಕ್ಷೆಗಾಗಿ ಹಾಸನದ ಆರೋಗ್ಯ ಇಲಾಖೆಯ ವತಿಯಿಂದ 29 ಮೇಲ್ವಿಚಾರಕರು, 86 ಕಿರಿಯ ಆರೋಗ್ಯ ಸಹಾಯಕರು, 224 ಆಶಾ ಕಾರ್ಯಕರ್ತೆಯರ ಮುಖಾಂತರ 150 ತಂಡಗಳನ್ನು 11 ವಾಹನಗಳನ್ನು ನಿಯೋಗಿಸಲಾಗಿತ್ತು.

ಮತ್ತೆ ಸದ್ದು ಮಾಡುತ್ತಿದೆ ಡೆಂಗ್ಯೂ ಮಹಾಮಾರಿ, ಪರಿಹಾರ ಹೇಗೆ?ಮತ್ತೆ ಸದ್ದು ಮಾಡುತ್ತಿದೆ ಡೆಂಗ್ಯೂ ಮಹಾಮಾರಿ, ಪರಿಹಾರ ಹೇಗೆ?

Dengue awareness

ಈ ಸಂದರ್ಭದಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣ ಮತ್ತು ಸೊಳ್ಳೆಗಳ ನಾಶ ಕುರಿತು ಅರಿವು ಮೂಡಿಸಿದರು. ಪ್ರತಿ ಮನೆಗೆ ಭೇಟಿ ನೀಡಿದಾಗ ಟಾರ್ಚ್ ಬಳಸಿ ಅವರ ಮನೆಗಳಲ್ಲಿ ಸಂಗ್ರಹಸಿಟ್ಟ ನೀರಿನ ಸಂಗ್ರಹಣೆಗಳಲ್ಲಿ ಲಾರ್ವ ಪತ್ತೆ ಮಾಡಿ ನಮೂನೆಗಳಲ್ಲಿ ಭರ್ತಿ ಮಾಡಿ, ಆಯಾ ಮನೆಗಳ ಮುಂದೆ ಸ್ಟಿಕ್ಕರ್ ಅಂಟಿಸಿ, ಮುನ್ನೆಚ್ಚರಿಕೆ ಬಗ್ಗೆ ಕರಪತ್ರ ವಿತರಿಸಲಾಯಿತು.

ಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳುಡೆಂಗ್ಯೂ ರೋಗ ಲಕ್ಷಣ, ಮನೆಮದ್ದು, ಮುಂಜಾಗ್ರತಾ ಕ್ರಮಗಳು

ಅವಶ್ಯವಿದ್ದ ಮನೆಗಳಲ್ಲಿ ಲಾರ್ವಾನಾಶಕವಾದ ಟೆಮಿಫಾಸ್ ಬಳಸಿ ಲಾರ್ವ ನಾಶ ಪಡಿಸಲಾಗಿದೆ. ನಗರದ ವಿವಿಧ ಕಡೆ ಡೆಂಗ್ಯೂ ನಿಯಂತ್ರಣ ಕುರಿತ ಹೋರ್ಡಿಂಗ್ ಪ್ರದರ್ಶಿಸಲಾಗಿದೆ, ಮೈಕ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಲಾಗಿದೆ.

ಮೂರು ದಿನಗಳಂದು ಒಟ್ಟು ಹಾಸನ ನಗರದ 32051 ಮನೆಗಳಲ್ಲಿ ಈ ಸರ್ವೆ ನಡೆಸಲಾಗಿದ್ದು, 996 ಮನೆಗಳಲ್ಲಿ ಈಡಿಸ್ ಲಾರ್ವೆ ಪತ್ತೆ ಮಾಡಲಾಗಿದೆ. ಅಂತೆಯೇ 194664 ನೀರಿನ ಸಂಗ್ರಹಣೆಗಳನ್ನು ಪರಿಶೀಲಸಿ 1086 ರಲ್ಲಿ ಲಾರ್ವಾ ಪತ್ತೆ ಮಾಡಿ ನಾಶಪಡಿಸಲಾಗಿದೆ.

ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ನೀಡಿದ ಆರೋಗ್ಯ ಶಿಕ್ಷಣ ಮತ್ತು ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರು ಪಾಲಿಸಿದರೆ ಮುಂದಿನ ದಿನಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

English summary
Hassan zilla panchayat and District health and family welfare office jointly completed Dengue awareness campaign in Hassan city. Health workers visited the 32051 house for the survey and campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X