ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಶಿಶುಗಳಿಗಾಗಿ ಅತಿ ದೊಡ್ಡ ಐಸಿಯು : ರೋಹಿಣಿ

By Mahesh
|
Google Oneindia Kannada News

ಹಾಸನ, ನವೆಂಬರ್ 15: ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆ (ಹಿಮ್ಸ್) ಸುಧಾರಣೆಗೆ ಮುಂದಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಜಿಲ್ಲಾಸ್ಪತ್ರೆಯಲ್ಲಿ ನೂತನ ನಿರ್ಮಿಸಿರುವ ನವಜಾತ ಶಿಶುಗಳ ತೀವ್ರ ನಿಗಾಘಟಕವನ್ನು ಉದ್ಘಾಟಿಸಿದರು.

ಜಿಲ್ಲಾ ಆಸ್ಪತ್ರೆಯ ನೂತನ 55 ಹಾಸಿಗೆಗಳ ನವಜಾತ ಶಿಶುಗಳ ತೀವ್ರ ನಿಗಾಘಟಕವು ನವೆಂಬರ್ 14ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಇದರಿಂದ ರಾಜ್ಯದಲ್ಲೆ ಅತಿ ಹೆಚ್ಚು ಹಾಸಿಗೆ ಉಳ್ಳ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಎಂಬ ಹೆಗ್ಗಳಿಕೆಗೆ ಹಾಸನ ಜಿಲ್ಲಾ ಆಸ್ಪತ್ರೆ ಪಾತ್ರವಾಗಿದೆ.

ಮಕ್ಕಳ ದಿನಾಚರಣೆ ವಿಶೇಷ ಕೊಡುಗೆಯೆಂಬಂತೆ ತೀವ್ರ ನಿಗಾ ಘಟಕವನ್ನು ಜಿಲ್ಲಾಧಿಕಾರಿ ಅವರು ಸೇವೆಗೆ ಸಮರ್ಪಿಸಿದರು.
ರೇಡಿಯೆಂಟ್ ವಾರ್ಮರ್, ನಿಯೋನಾಟಲ್ ವೆಂಟಿಲೇಟರ್, ಬಬ್ಬಲ್ ಸಿಪಿಎಪಿ, ಎಬಿಜಿ ಮೆಷಿನ್, ಸಿರಂಜ್ ಪಂಪ್ ಸೇರಿದಂತೆ ಇತರ ಸೌಲಭ್ಯಗಳನ್ನು ಈ ಕೇಂದ್ರ ಒಳಗೊಂಡಿದೆ. ಸಮಸ್ಯೆಯಿಂದ ಬಳಲುವ ಎಲ್ಲಾ ನವಜಾತ ಶಿಶುಗಳಿಗೆ ಇಲ್ಲಿ ಚಿಕಿತ್ಸಾ ಸೌಲಭ್ಯ ವಿಶೇಷ ಕಾಳಜಿ ದೊರೆಯಲಿದೆ ಹಾಗೂ ಮೊಲೆಹಾಲು ಕುಡಿಸುವ ವಿಧಾನಗಳ ಬಗ್ಗೆಯು ಮಾಹಿತಿ ನೀಡಲಾಗುತ್ತದೆ.

ಏನೆಲ್ಲ ಸೌಲಭ್ಯಗಳು ಹಿಮ್ಸ್ ನಲ್ಲಿ ಲಭ್ಯ

ಏನೆಲ್ಲ ಸೌಲಭ್ಯಗಳು ಹಿಮ್ಸ್ ನಲ್ಲಿ ಲಭ್ಯ

ರೇಡಿಯೆಂಟ್ ವಾರ್ಮರ್, ನಿಯೋನಾಟಲ್ ವೆಂಟಿಲೇಟರ್, ಬಬ್ಬಲ್ ಸಿಪಿಎಪಿ, ಎಬಿಜಿ ಮೆಷಿನ್, ಸಿರಂಜ್ ಪಂಪ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ವೈದ್ಯಕೀಯ ಗಳನ್ನು ಈ ಕೇಂದ್ರ ಒಳಗೊಂಡಿದೆ.
ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ, ಡಾ|| ಕುಮಾರ್, ಡಾ|| ಮನುಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕ

ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕ

ಹಿಮ್ಸ್ ನ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಸ್ತುತ 20 ಹಾಸಿಗೆಗಳ ಸಾಮರ್ಥ್ಯ ಹೊಂದಿತ್ತು. ನವಜಾತ ಶಿಶುಗಳಿಗೆ ಮತ್ತಷ್ಟು ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಘಟಕದಲ್ಲಿನ ಹಾಸಿಗೆ ಸಾಮರ್ಥ್ಯವನ್ನು 55ಕ್ಕೆ ಹೆಚ್ಚಿಸಲಾಗಿದೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ಹಾಸಿಗೆ ಸಾಮರ್ಥ್ಯವಿರುವ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಿದೆ.

ಎನ್.ಎಚ್.ಎಂ ನಿಂದ ಹಿಮ್ಸ್ ಗೆ ಯಂತ್ರೋಪಕರಣ

ಎನ್.ಎಚ್.ಎಂ ನಿಂದ ಹಿಮ್ಸ್ ಗೆ ಯಂತ್ರೋಪಕರಣ

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ), ನರ್ಸಿಂಗ್ ಸ್ಟಾಫ್ ಮತ್ತು ವೈದ್ಯಕೀಯ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಹಿಂದೂಸ್ತಾನ್ ಪೆಟ್ರೋ ಕೆಮಿಕಲ್ಸ್ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ಪಡೆಯುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಮಕ್ಕಳ ವಿಭಾಗದ ಮುಖ್ಯ ಡಾ. ಪ್ರಸನ್ನ ತಿಳಿಸಿದರು.ಡಾ. ಕುಮಾರ್, ಡಾ. ಮನುಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಿಂಧೂರಿ ಅವರ ವಿಶೇಷ ಕಾಳಜಿ

ಸಿಂಧೂರಿ ಅವರ ವಿಶೇಷ ಕಾಳಜಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿಶೇಷ ಕಾಳಜಿ ಹಾಗೂ ಹಾಸನ ವೈದ್ಯಕೀಯ ಕಾಲೇಜು ನಿರ್ದೇಶಕರಾದ ಡಾ|| ಬಿ.ಸಿ.ರವಿಕುಮಾರ್, ಶಸ್ತ್ರ ಚಿಕಿತ್ಸಕರಾದ ಡಾ|| ಶಂಕರ್, ನವಜಾತ ಶಿಶು ಚಿಕಿತ್ಸಾ ವೈದ್ಯಾಧಿಕಾರಿಗಳು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ವೆಂಕಟೇಶ್ ಅವರ ಪ್ರಯತ್ನದ ಫಲವಾಗಿ ಈ ತೀವ್ರ ನಿಗಾಘಟಕ ಸಿದ್ದಗೊಂಡಿದೆ.

English summary
Hassan DC Rohini Sindhuri inaugurated new born children ICU special care unit at Hassan Institute of Medical Sciences. Child ICU at HIMS is the largest in Karnataka is fully functional from November 14, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X