• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶ್ರವಣಬೆಳಗೊಳ: ವಿರಾಗಿಯನ್ನು ಭಜಿಸಿದ ಮಾನಿನಿಯರು

By ಹಾಸನ ಪ್ರತಿನಿಧಿ
|

ಹಾಸನ, ಜನವರಿ 24: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಗೆ ಫೆ.7 ರಿಂದ ಆರಂಭವಾಗಲಿರುವ 88ನೇ ಮಾಹಾಮಸ್ತಕಾಭಿಷೇಕಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರತಿದಿನವೂ ಒಂದಲ್ಲ ಒಂದು ರೀತಿಯ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಿವೆ.

ಈ ನಡುವೆ ವಿಂಧ್ಯಗಿರಿಯ ಬೆಟ್ಟದ ತಪ್ಪಲಿನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಹುಬ್ಬಳ್ಳಿಯ ದಿಗಂಬರ ಮಹಿಳಾ ಜೈನ ಸಮಾಜ ಮಹಿಳೆಯರು ನಡೆಸಿಕೊಟ್ಟ ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ ಎಂಬ ಸಾಮೂಹಿಕ ಭಜನೆ ನೆರೆದವರ ಮನಸೆಳೆದು ಭಕ್ತಿಯ ಅವಾಹನೆ ಮಾಡಿದೆ.

ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆ

ಇದೇ ವೇಳೆ ಸಾನಿಧ್ಯವಹಿಸಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಕರ್ತವ್ಯ ನಿರ್ವಹಣೆ ಹಾಗೂ ಭಕ್ತಿ ಸೇರಿದರೆ ಅದ್ಭ್ಬುತ ಶಕ್ತಿ ಬರುತ್ತದೆ ಶಕ್ತಿಯಿಂದ ಯುಕ್ತಿ ಉಂಟಾಗುತ್ತದೆ, ಯುಕ್ತಿಯಿಂದ ನಮ್ಮಲ್ಲಿರುವ ಕಷ್ಟಗಳನ್ನು ಪರಿಹರಿಸುವ ಮುಕ್ತಿಯು ದೊರೆಯತ್ತದೆ ಎಂದರು.

ಹುಬ್ಬಳ್ಳಿಯಿಂದ ಹರಿದು ಬಂದ ಜನಸಾಗರ

ಹುಬ್ಬಳ್ಳಿಯಿಂದ ಹರಿದು ಬಂದ ಜನಸಾಗರ

ಮಹಾ ತಪಸ್ವಿಯಾದ ಬಾಹುಬಲಿ ಸ್ವಾಮಿ 1 ವರ್ಷಗಳ ವರೆಗೆ ಕಠಿಣ ತಪಸ್ಸನ್ನು ಆಚರಿಸಿದರು. ಬೆಟ್ಟದ ಮೇಲೆ ನಿಂತಿರುವ ಮೂರ್ತಿಯ ಧನ್ಯತಾ ಭಾವ ಹಾಗೂ ಚಾಮುಂಡರಾಯನ ತ್ಯಾಗ ಸ್ಮರಿಸುವಂತಹದು. ಹುಬ್ಬಳ್ಳಿಯ ಸುತ್ತ ಮುತ್ತಲಿನಿಂದ ಆಗಮಿಸಿರುವ ಎಲ್ಲ್ಲ ಭಕ್ತರು ವಿಂಧ್ಯಗಿರಿ ತಪ್ಪಲಿನಲ್ಲಿ ಸೇರಿ ಸಾಮೂಹಿಕವಾಗಿ ಭಜಿಸುತ್ತಿರುವುದಕ್ಕೆ ಶುಭ ಹಾರೈಸಿ ನೆರೆದಿದ್ದವರೆಲ್ಲರೂ ಗುಳ್ಳೆಕಾಯಿ ಅಜ್ಜಿಯಂತೆ ಅಭೀಷೇಕ ಮಾಡಲು ಸಜ್ಜಾಗಿರುವಂತೆ ಕಾಣುತ್ತಿದೆ ಎಂದರು.

ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಜರ್ಮನ್ ಅಟ್ಟಣಿಗೆ ಬಳಕೆ

ಜೀನಗೀತೆಯ ದಾಖಲೆ

ಜೀನಗೀತೆಯ ದಾಖಲೆ

ಮಹಾಮಸ್ತಕಾಭಿಷೆಕ ಮಹೋತ್ಸವ-2018ರ ಲಾಂಛನದಲ್ಲಿ ಮಹಿಳೆ ಗುಳಕಾಯಿ ಅಜ್ಜಿಗೆ ಪ್ರಾಮುಖ್ಯತೆ ನೀಡಿದ್ದಕ್ಕೆ ಸಾಕ್ಷಿಯಾಗಿ ಸಾವಿರಾರು ಮಹಿಳೆಯರು ಏಕ ಕಾಲದಲ್ಲಿ ಜಿನಗೀತೆ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ವಿಂಧ್ಯಗಿರಿ ತಪ್ಪಲಿನಲ್ಲಿ 2018 ಮಹಿಳಾ ಭಕ್ತೆಯರು ಸಾಮೂಹಿಕ ಜೀನಗೀತೆ ಹಾಡುವ ಸಮಾರಂಭದಲ್ಲಿ ನೆರೆದಿದ್ದವರಿಗೆ ಅವರು ಆಶೀರ್ವಚನ ನೀಡಿದರು, ಮಹಾ ಮಸ್ತಕಾಭಿಷೇಕ ಮಹೋತ್ಸವ ಲಾಂಛನ ತಯಾರಿಸುವಾಗ ಗುಳಕಾಯಿ ಅಜ್ಜಿಗೆ ಪ್ರಾಮುಖ್ಯತೆ ನೀಡಬೇಕೆಂದು ತಿಳಿಸಿದ್ದನ್ನು ಇದೇ ವೇಳೆ ನೆನಪಿಸಿದರು.

ಏಕಶಿಲೆಯಲ್ಲಿ ಬೃಹತ್ ಮೂರ್ತಿ ಕೆತ್ತಿದ ಶಿಲ್ಪಿಗೆ ವಂದನೆ

ಏಕಶಿಲೆಯಲ್ಲಿ ಬೃಹತ್ ಮೂರ್ತಿ ಕೆತ್ತಿದ ಶಿಲ್ಪಿಗೆ ವಂದನೆ

ಬಾಹುಬಲಿ ಮೂರ್ತಿ ಏಕಶಿಲೆಯಲ್ಲಿ ಕೆತ್ತಿಸಲು ಆಲೋಚಿಸಿದ ಚಾವುಂಡರಾಯ ಹಾಗೂ ಇವರ ತಾಯಿ ಕಾಳಲಾದೇವಿ ಅಚ್ಚುಕಟ್ಟಾಗಿ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿಗೆ ಮತ್ತು ಜೈನಮಠದ ಮೊದಲ ಪೀಠಾಧ್ಯಕ್ಷ ನೇಮಿಚಂದ್ರ ಸಿದ್ದಾಂತರಿಗೆ ಅನಂತ ವಂದನೆ ಸಲ್ಲಿಸಬೇಕು ಇವರ ಶ್ರಮದಿಂದ ಇಂದು ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಕ್ಷೇತ್ರದ ಭೂಮಿಯಾಗಿದೆ ಎಂದರು.

ಸಾಕ್ಷಿಯಾದ ಗಣ್ಯರು

ಸಾಕ್ಷಿಯಾದ ಗಣ್ಯರು

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಮಠದ ಪೀಠಾಧಿಪತಿ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ, ಜಿಪಂ ಅಧ್ಯಕ್ಷರಾದ ಶ್ವೇತಾ ದೇವರಾಜ್, ಸದಸ್ಯರಾದ ಮಮತಾ, ಗ್ರಾಪಂ ಅಧ್ಯಕ್ಷರಾದ ಹೇಮಾ ಇನ್ನಿತರರು ಭಜನಾಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

English summary
As world famous Mahamastakabhisheka for Bahubali in Shravanabelagola will begin from Feb 7th, Hassan is all set for historical event. Special cultural programmes have already started in Shravanabelagola, as a part of Mahamastakabhisheka which will be taken place every 12 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more