ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಸಾಯನಿಕ ಮುಕ್ತ ಮಾವಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಜ್ವಲ್ ಕರೆ

|
Google Oneindia Kannada News

ಹಾಸನ, ಜೂನ್ 06 : 'ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳ ಮಾರಾಟದ ಬಗ್ಗೆ ರೈತರು, ವ್ಯಾಪಾರಸ್ಥರು ಮತ್ತು ಗ್ರಾಹಕರುಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಅಧಿಕಾರಿಗಳು ಶ್ರಮಿಸಬೇಕು' ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದರು.

ನಗರದ ಕಲಾಭವನದಲ್ಲಿ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ಏರ್ಪಡಿಸಿದ್ದ ಹಲಸು ಮತ್ತು ಮಾವು ಮಾರಾಟ ಮೇಳವನ್ನು ಪ್ರಜ್ವಲ್ ರೇವಣ್ಣ ಉದ್ಘಾಟಿಸಿದರು.

ನೀವು ಮಾವು ಪ್ರಿಯರೇ, ಹಾಗಾದರೇ ತಿನ್ನೋ ಮುನ್ನ ಯೋಚಿಸ್ಲೇಬೇಕುನೀವು ಮಾವು ಪ್ರಿಯರೇ, ಹಾಗಾದರೇ ತಿನ್ನೋ ಮುನ್ನ ಯೋಚಿಸ್ಲೇಬೇಕು

'ಗ್ರಾಹಕರು ರೈತರಿಂದ ನೇರ ಖರೀದಿ ಮಾಡಲು ಹಾಗೂ ಮಾವಿನ ಹಣ್ಣುಗಳ ಕುರಿತು ಜನರಿಗೆ ತಿಳುವಳಿಕೆ ಮೂಡಿಸುವಂತಹ ಕಾರ್ಯಕ್ರಮ ಇದ್ದಾಗಿದ್ದು, ಈ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು' ಎಂದರು.

ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?

Prajwal Revanna

'ಸುಮಾರು 54 ಜಾತಿಯ ಮಾವಿನ ಹಣ್ಣುಗಳನ್ನು ಮೇಳದಲ್ಲಿರುವುದು ವಿಶೇಷ. ಗುರುವಾರದಿಂದ ಐದು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ರೈತರು, ಶಾಲಾ ಮಕ್ಕಳು ಹಣ್ಣಿನ ಹಾಗೂ ಈ ಮೇಳದ ಅರಿವನ್ನು ಮೂಡಿಸಬೇಕೆಂದು' ಹೇಳಿದರು.

ಮೈಸೂರಿನಲ್ಲಿ ಥರಾವರಿ ಮಾವುಗಳ ದರ್ಬಾರ್ಮೈಸೂರಿನಲ್ಲಿ ಥರಾವರಿ ಮಾವುಗಳ ದರ್ಬಾರ್

ಕೋಲಾರ, ರಾಮನಗರ, ಹಾಸನ ಜಿಲ್ಲೆಯ ವಿವಿದ ತಾಲೂಕುಗಳಿಂದ ರೈತರು ಸ್ವತಃ ಬೆಳೆದ ಮಾವಿನ ಹಣ್ಣುಗಳನ್ನು ತಂದು ಈ ಮಾವಿನ ಮೇಳದಲ್ಲಿ ಪಾಳ್ಗೊಂಡಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ.

ಹಲಸಿನ ಮೇಳ : ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಸಂಯುಕ್ತಾಶ್ರಯದಲ್ಲಿ ಮಾವು ಬೆಳೆಗಾರರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿರುವ ಮೇಳ ಜೂನ್ 10ರವರೆಗೆ ಕಲಾಭವನದಲ್ಲಿ ನಡೆಯಲಿದೆ.

12 ಮಳಿಗೆಗಳಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಪ್ರದರ್ಶನವಿದ್ದು, ಬಾದಾಮಿ, ಬಂಗನಪಲ್ಲಿ, ಮಲ್ಲಿಕಾ ಸೆಂದೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ, ಕನ್ನೇಲಿ, ಗೋಲಾ, ಆಮಪಾಸ, ಹಿಮಾಯುದ್ದೀನ್, ರಸಪೂರಿ, ಜೆರುಕುರಸಂ, ನೀಲೆಶಾನ್, ಗೂಳು ಮಾವು, ರತ್ನಗಿರಿ ಬಾದಾಮಿ, ನಿಲುದ್ದೀನ್ ಕ್ರಾಸ್ ಸೇರಿದಂತೆ ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಪ್ರದರ್ಶಿಸಲಾಗಿದೆ.

English summary
Hassan MP Prajwal Revanna inaugurate the Mango mela and called for Create awareness about chemical used mangoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X