ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಶಾಂತ್ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ, ಬಂಧಿತ ಆರೋಪಿಗಳು ಕೋರ್ಟ್‌ಗೆ ಹಾಜರು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂ. 10: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದ ಪ್ರಮುಖ ಅರೋಪಿಯನ್ನ ಪೊಲೀಸರು ಬಂಧಿಸಿದ್ದು, ರಾಜಕೀಯ ಕಾರಣಗಳಿಗೆ ನಗರಸಭೆ ಸದಸ್ಯನ ಹತ್ಯೆಯಾಗಿಲ್ಲ, ಕೇವಲ ವೈಯಕ್ತಿಕ ಕಾರಣಕ್ಕೆ ಹತ್ಯೆಯಾಗಿದೆ ಹಾಸನ ಎಸ್ಪಿ ಶ್ರೀನಿವಾಸಗೌಡ ಸ್ಪಷ್ಟಪಡಿಸಿದ್ದಾರೆ.

ಜೂನ್ 1 ರ ಸಂಜೆ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ನಾಗರಾಜ್ ನ ಬರ್ಬರ ಹತ್ಯೆಯಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮುಂದುವರೆಸಿದ್ದು, ಪ್ರಕರಣದ ಪ್ರಮುಖ ಆರೋಪಿ ಪೂರ್ಣಚಂದ್ರನನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿಯೂ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಇಂದು‌ ಸಿಐಡಿ ಅಧಿಕಾರಿಗಳು ಹಾಸನ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.

ಪ್ರಶಾಂತ್ ಕೊಲೆ ನಂತರ ಪೊಲೀಸ್ ಠಾಣೆಯಲ್ಲಿ ಸಂಭ್ರಮಾಚರಣೆ: ಎಚ್.ಡಿ. ರೇವಣ್ಣ ಆರೋಪಪ್ರಶಾಂತ್ ಕೊಲೆ ನಂತರ ಪೊಲೀಸ್ ಠಾಣೆಯಲ್ಲಿ ಸಂಭ್ರಮಾಚರಣೆ: ಎಚ್.ಡಿ. ರೇವಣ್ಣ ಆರೋಪ

ಇನ್ನು ಈ ಕೇಸ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರೋ ಹಾಸನ ಎಸ್ಪಿ ಶ್ರೀನಿವಾಸಗೌಡ, ನಾವು ಅನೇಕ ತಂಡಗಳನ್ನು ರಚಿಸಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದೆವು, ಇದೀಗ ಕೇಸನ್ನ ಸಿಐಡಿಗೆ ಹಸ್ತಾಂತರ ಮಾಡಿದ್ದೇವೆ, ಇನ್ಮುಂದೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮುಂದುವರೆಸುತ್ತಾರೆ ಎಂದರು.

 ವೈಯಕ್ತಿಕ ಕಾರಣಕ್ಕೇ ಪ್ರಶಾಂತ್ ಹತ್ಯೆ: ಸತ್ಯ ಬಹಿರಂಗ

ವೈಯಕ್ತಿಕ ಕಾರಣಕ್ಕೇ ಪ್ರಶಾಂತ್ ಹತ್ಯೆ: ಸತ್ಯ ಬಹಿರಂಗ

ತನಿಖೆ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿತ್ತು, ಅಲ್ಲದೇ ಪೊಲೀಸ್ ಅಧಿಕಾರಿಗಳ ಮೇಲೆಯೇ ಅನುಮಾನದ ಆರೋಪಗಳು ಕೇಳಿಬಂದಿತ್ತು. ಅಲ್ಲದೇ ನಿಷ್ಪಕ್ಷಪಾತವಾ ತನಿಖೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಸನ್ನ ಸಿಐಡಿಗೆ ಕೊಡಲಾಗಿದೆ. ನಮ್ಮ ತಂಡಗಳು ಸಿಐಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ, ಇನ್ನು ಬಂಧನವಾಗಿರುವ ಇಬ್ಬರು ಆರೋಪಿಗಳು ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದು, ವೈಯಕ್ತಿಕ ಕಾರಣಕ್ಕೇ ಪ್ರಶಾಂತ್ ಹತ್ಯೆಯಾಗಿದ್ದು, ರಾಜಕೀಯ ಕಾರಣಗಳಿಗಲ್ಲ ಅಂತಾ ಎಸ್ಪಿ ಸ್ಪಷ್ಟ ಪಡಿಸಿದ್ದಾರೆ. ಪ್ರಶಾಂತ್ ಹಾಗೂ ಬಂಧಿತ ಆರೋಪಿಗಳೆಲ್ಲರೂ ಪರಿಚಯಸ್ಥರು, ಒಂದೇ ಭಾಗದಲ್ಲಿ ವಾಸವಾಗಿದ್ದಾರೆ. ಎಲ್ಲರೂ ರಾಜಕೀಯವಾಗಿಯೂ ತೊಡಗಿಸಿಕೊಂಡಿದ್ದಾರೆ. ಅವರುಗಳ ಮಧ್ಯೆಯೆ ಹಲವಾರು ವಿಷಯಗಳಿಗೆ ಜಗಳವಿತ್ತು. ಪ್ರಾಥಮಿಕವಾಗಿ ವೈಯಕ್ತಿಕ ಕಾರಣಕ್ಕಾಗಿ ನಡೆದಿರೋ ಹತ್ಯೆಯಾಗೆ ಕಾಣುತ್ತಿದೆ ಅಂತಾ ಎಸ್ಪಿ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಮುಖಂಡನ ಹತ್ಯೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್.ಡಿ.ರೇವಣ್ಣ ಗರಂಜೆಡಿಎಸ್ ಮುಖಂಡನ ಹತ್ಯೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್.ಡಿ.ರೇವಣ್ಣ ಗರಂ

 ಹತ್ಯೆಗೆ ಪ್ರಮುಖ ಆರೋಪಿ ಹೇಳಿಕೆಗೆ ಕಾದುನೋಡಬೇಕಿದೆ

ಹತ್ಯೆಗೆ ಪ್ರಮುಖ ಆರೋಪಿ ಹೇಳಿಕೆಗೆ ಕಾದುನೋಡಬೇಕಿದೆ

ಏನಿದು ಪ್ರಕರಣ: ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರ ಅವರ ಪತ್ನಿಗೂ ಕೊಲೆಯಾದ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ ಮಧ್ಯೆ ಸಂಬಂಧ ಇತ್ತು ಎನ್ನಲಾಗಿದೆ. ಇತ್ತೀಚಿಗೆ ಆರೋಪಿಯ ಪತ್ನಿ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡಿಸಿದ್ದು, ಈ ವಿಚಾರವಾಗಿ ಪೂರ್ಣಚಂದ್ರ ಮತ್ತು ಪ್ರಶಾಂತ್ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಬಳಿಕ ಕೆಲವರ ಸಮ್ಮುಖದಲ್ಲಿ, ರಾಜಿ ಪಂಚಾಯಿತಿ ಮಾಡಲಾಗಿತ್ತು ಎನ್ನಲಾಗಿದೆ. ಪ್ರಮುಖ ಆರೋಪಿ ಪೂರ್ಣಚಂದ್ರ ಸೇಡು ತೀರಿಸಿಕೊಳ್ಳಲು ಆತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ವಾರಗಟ್ಟಲೆ ಆತನ ಚಲನವಲನಗಳನ್ನು ವೀಕ್ಷಣೆ ಮಾಡಿ ನಿನ್ನೆ ಒಂಟಿಯಾಗಿ ಮನೆ ಕಡೆಗೆ ಹೋಗುವಾಗ ಜವನಹಳ್ಳಿ ಮಠದ ರಸ್ತೆಯಲ್ಲಿ ಯಾರು ಇಲ್ಲದ ವೇಳೆ ಪ್ರಶಾಂತ್ ಬೈಕ್ ಅಡ್ಡಗಟ್ಟಿ ತನ್ನ ಸಹಚರರೊಂದಿಗೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಬರ್ಬರವಾಗಿ ಕೊಚ್ಚಿ ಪರಾರಿಯಾಗಿದ್ದರು.

ಮಾಜಿ ಸಚಿವ ಹೆಚ್.ಡಿ.‌ರೇವಣ್ಣ ಹತ್ಯೆಗೆ ಪೊಲೀಸ್ ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ಸೇರಿ‌ ನಗರ ಪೊಲೀಸರ ವೈಫಲ್ಯವೇ ಕಾರಣ ಅಂತಾ ಆರೋಪ ಮಾಡಿದ್ದ‌ರು, ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ರನ್ನು ಕಡ್ಡಾಯ ರಜೆ ಮೇಲೆ ಕಳಿಸಿ ನೊಟೀಸ್ ನೀಡಲಾಗಿದೆ. ಆ ಕೇಸ್ ಕೂಡಾ ಇಲಾಖೆಯೊಳಗೆ ತನಿಖೆ ಮುಂದುವರೆದಿದೆ. ಒಟ್ನಲ್ಲಿ, ಹಾಸನ ನಗರವನ್ನೇ ಬೆಚ್ಚಿ ಬೀಳಿಸಿದ್ದ ನಗರಸಭೆ ಸದಸ್ಯನ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರೋ ಇಬ್ಬರು‌ ಆರೋಪಿಗಳು ವೈಯಕ್ತಿಕ ಕಾರಣ ಅಂತಾ ಹೇಳಿದ್ದಾರೆ. ಇನ್ನು ಈಗ ಬಂಧಿಯಾಗಿರೋ ಪ್ರಮುಖ‌ ಆರೋಪಿ ಏನೆಲ್ಲಾ ಬಾಯ್ಬಿಡ್ತಾನೆ ಅಂತಾ ಕಾದು ನೋಡಬೇಕಿದೆ.

 ಹಿಮ್ಸ್ ಆಸ್ಪತ್ರೆ ಬಳಿ ಕುಳಿತ ರೇವಣ್ಣ

ಹಿಮ್ಸ್ ಆಸ್ಪತ್ರೆ ಬಳಿ ಕುಳಿತ ರೇವಣ್ಣ

ಪ್ರಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್‌ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದರು. ಕರ್ತವ್ಯಲೋಪ ಆರೋಪದಡಿ ಯಾರದೋ ಗುಲಾಮರಾಗಿ ಕೆಲಸ ಮಾಡುತ್ತಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಶಾಂತ್ ಹತ್ಯೆ ಹಿನ್ನೆಲೆ ನಿನ್ನೆಯಿಂದಲೂ ಪೊಲೀಸರ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಿಟ್ಟಾಗಿದ್ದಾರೆ. ಸಿಪಿಐ ರೇಣುಕಾಪ್ರಸಾದ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ಆತನನ್ನ ಕೂಡಲೇ ಸಸ್ಪೆಂಡ್‌ ಮಾಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ರೇವಣ್ಣ ಬಳಿ ಮಾತುಕತೆಗೆ ಬಂದ ಎಸ್ಪಿ ಆರ್.ಶ್ರೀನಿವಾಸ್‌ಗೌಡ ರೇವಣ್ಣ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. ಕ್ರಮ ಕೈಗೊಳ್ಳುತ್ತೇವೆ ಸಮಾಧಾನವಾಗಿರಿ ಎಂದು ಮನವಿ ಮಾಡಿದರು. ಮೊದಲು ಸಸ್ಪೆಂಡ್ ಮಾಡ್ರಿ ಎಂದು ಎಸ್ಪಿ ವಿರುದ್ದ ಗರಂ ರೇವಣ್ಣ ಆದರು. ಐಜಿ ಬಂದ ಮೇಲೆ ಮಾತಾಡ್ತೀನಿ ಹೋಗ್ರಿ ಎಂದು ಎಸ್ಪಿ, ಎಎಸ್ಪಿಗೆ ತಿಳಿಸಿದರು.

Recommended Video

AAP ಸಚಿವರು ಮಾಡಿದ ಕೆಲಸಕ್ಕೆ ಜನರ ಛೀಮಾರಿ | OneIndia Kannada
 ನಗರಸಭೆ ಸದಸ್ಯ ಪ್ರಶಾಂತ್ ವಿಧಿವಶ: ಶ್ರದ್ಧಾಂಜಲಿ

ನಗರಸಭೆ ಸದಸ್ಯ ಪ್ರಶಾಂತ್ ವಿಧಿವಶ: ಶ್ರದ್ಧಾಂಜಲಿ

ಹಾಸನ ನಗರದ 16ನೇ ವಾರ್ಡ್ ನಿಂದ ಜೆಡಿಎಸ್ ಪಕ್ಷದಿಂದ ನಗರಸಭೆಗೆ ಆಯ್ಕೆಯಾಗಿದ್ದರು. ಪ್ರಶಾಂತ್ ಕೊಲೆಗೆ ಕಾರಣವೇನು? ಎಂಬುದು ಇನ್ನೂ ನಿಗೂಢವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಶಾಂತ್ ಅವರು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಈ ಹಿನ್ನೆಲೆ ಪ್ರಶಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ.

ನಗರಸಭೆ ಸದಸ್ಯ ಪ್ರಶಾಂತ್ ವಿಧಿವಶ ಹಿನ್ನೆಲೆ ಅಗಲಿದ ಸದಸ್ಯನಿಗೆ ನಗರಸಭೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಸದಸ್ಯರು, ನಗರಸಭೆ ಅಧಿಕಾರಿ ವರ್ಗ ಸಿಬ್ಬಂದಿ ವರ್ಗ, ನಗರಸಭೆ ಸಭಾಂಗಣದಲ್ಲಿ ಪ್ರಶಾಂತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ನಗರಸಭೆ ಆವರಣದಲ್ಲಿ ಪ್ರಶಾಂತ್ ಅಂತಿಮ‌ದರ್ಶನ ಮಾಡುವ ಬಗ್ಗೆಯೂ ಚರ್ಚೆ ಮಾಡಿದರು.

 ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ

ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ

ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಹಿನ್ನೆಲೆ ಹಾಸನ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಾಸನ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ಬಗೆಯ ಮದ್ಯ ಹಾಗೂ ಅಮಲು ಪಾನೀಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಜೆಡಿಎಸ್ ಮುಖಂಡನ ಹತ್ಯೆಯಿಂದಾಗಿ ಹಾಸನದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಹಾಕಲಾಗಿದೆ. ಆದಷ್ಟು ಬೇಗ ಪೊಲೀಸರು ಕೊಲೆಗಡುಕರನ್ನು ಪತ್ತೆಹಚ್ಚಿ, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
CID is intensifying probe on Hassan Municipal Council member Prashanth murder case and have arrested main accused. Total 5 accused were presented to court on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X