ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮುವಾದಿಗಳನ್ನು ದೂರವಿಡಬೇಕು, ನಾವೆಲ್ಲಾ ಒಟ್ಟಾಗಬೇಕು: ಹೆಚ್.ಡಿ.ರೇವಣ್ಣ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂ. 6: ರಾಜಕಾರಣದಲ್ಲಿ ಸಣ್ಣ ಪುಟ್ಟದ್ದು ಇದ್ದೇ ಇರುತ್ತದೆ, ಇವಾಗ ಅದೆಲ್ಲವನ್ನು ಬಿಟ್ಟು ಕೋಮುವಾದಿಗಳನ್ನು ದೂರವಿಡಬೇಕು, ನಾವೆಲ್ಲ ಒಟ್ಟಾಗಬೇಕು, ಪ್ರಾದೇಶಿಕ ಪಕ್ಷ ಉಳಿದುಕೊಂಡರೇ, ನಾವು ಯಾವತ್ತಾದರೂ ಉಪ್ಪಿನಕಾಯಿ ತರ ಉಪಯೋಗಕ್ಕೆ ಬರುತ್ತೇವೆ. ನಾನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ ಎಂದು ಮಾಜಿ ಸಚಿವ ಹೆಚ್‍.ಡಿ. ರೇವಣ್ಣ ತಿಳಿಸಿದರು.

ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಎಂತಹದ್ದನ್ನೆಲ್ಲಾ ಬಿಟ್ಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಉಳಿದುಕೊಳ್ಳಲಿ, ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರುತ್ತೇವೆ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು?; ಸಿದ್ದರಾಮಯ್ಯಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು?; ಸಿದ್ದರಾಮಯ್ಯ

ಕೋಮುವಾದಿಗಳನ್ನು ದೂರವಿಡುವ ವಿಶ್ವಾಸವಿದೆ

ಕೋಮುವಾದಿಗಳನ್ನು ದೂರವಿಡುವ ವಿಶ್ವಾಸವಿದೆ

ಜೆಡಿಎಸ್ ಗೆ ಈಗಲೂ ಬಿಜೆಪಿ ಗೆಲ್ಲಬಾರದು ಎಂಬ ಇಚ್ಚೆ ಇದ್ರೆ ಅವರ ಅಭ್ಯರ್ಥಿಯನ್ನ ಕಣದಿಂದ ನಿವೃತ್ತಿ ಮಾಡಿಸಲಿ. ನಾವು ಅನೇಕ ಬಾರಿ ಜೆಡಿಎಸ್ ಗೆ ನೆರವಾಗಿಲ್ವಾ. ದೇವೇಗೌಡರನ್ನ ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್ ಗೆ ಸಹಕಾರ ಕೊಟ್ಟಿದ್ದೇವೆ.‌ ಈಗ ಅಲ್ಪಸಂಖ್ಯಾತರೊಬ್ಬರು ಗೆಲ್ಲಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು? ಎಂಬ ಹೇಳಿಕೆ ಹಿನ್ನೆಲೆ

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಸಚಿವ ಹೆಚ್‍.ಡಿ.ರೇವಣ್ಣ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸ್ವಲ್ಪ ಕೂಲ್ ಆಗಲಿ, ನಾನೂ ಹೋಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ನಂಬಿಕೆಯಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂದರೆ ನಾವೆಲ್ಲಾ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಆಶಯ ಕೇವಲ ಬಿಜೆಪಿಯಿಂದ ಈಡೇರಿಸಲು ಸಾಧ್ಯ: ಡಾ.ಅಶ್ವತ್ಥನಾರಾಯಣಪ್ರಜಾಪ್ರಭುತ್ವದ ಆಶಯ ಕೇವಲ ಬಿಜೆಪಿಯಿಂದ ಈಡೇರಿಸಲು ಸಾಧ್ಯ: ಡಾ.ಅಶ್ವತ್ಥನಾರಾಯಣ

ಮರಿತಿಬ್ಬೇಗೌಡಗೆ ರೇವಣ್ಣ ತಿರುಗೇಟು

ಮರಿತಿಬ್ಬೇಗೌಡಗೆ ರೇವಣ್ಣ ತಿರುಗೇಟು

ದಕ್ಷಿಣ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಕೊಡುತ್ತೇನೆ ಎಂಬ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಪಕ್ಷದಲ್ಲಿ ಎಲ್ಲ ಊಟ ಮಾಡಿ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತೇನೆ ಅಂದರೆ ಹೇಗೆ ಉಪಸಭಾಪತಿ ಆಗಿದ್ದಾರೆ. ಎರಡು ಸಲ ಎಂಎಲ್ ಸಿ ಮಾಡಿದ್ದೇವೆ ಇನ್ನೇನು ಮಾಡ್ಬೇಕು. ಹಾಗೇನಾದ್ರೂ ಇದ್ದರೆ ಓಪನ್ ಆಗಿ ಹೇಳಿ, ಹಿಂದೆ ಯಾಕೆ ಹೇಳ್ತಿರಿ ಎಂದು ಆಕ್ರೋಶ ಹೊರಹಾಕಿದರು.

ಜೆಡಿಎಸ್ ನಿಂದ ನನಗೆ ಅನ್ಯಾಯವಾಗಿದೆ ಅಂತಾ ಹೇಳಿ ರಾಜೀನಾಮೆ ಕೊಡಲಿ. ನಂತರ ಓಪನ್ ಆಗಿ ಪ್ರಚಾರ ಮಾಡ್ಲಿ, ಕಾಂಗ್ರೆಸ್ ಸೇರಿ ಮತ್ತೆ ಗೆಲ್ಲಲಿ. ಅವರು ದೊಡ್ಡವರಿದ್ದಾರೆ, ಅನುಭವಿಗಳಿದ್ದಾರೆ. ಇಂತಹ ನಿಲುವಿಗೆ ಹೋಗಬಾರದಿತ್ತು ಎಂಬುದು ನನ್ನ ಭಾವನೆ. ನಿಮಗಾಗಿ ಕುಮಾರಸ್ವಾಮಿ ಏನೇನ್ ಮಾಡಿದ್ದಾರೆ ಅಂತ ಗೊತ್ತಿದೆ. ಅದೆಲ್ಲ ಯಾವಾತ್ತಾದರೂ ತಿರುಗು ಬಾಣವಾಗುತ್ತೆ, ಇದು ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದರು.

ರೌಡಿಗಳ ತಾಣವಾದ ಹಾಸನ ಪೊಲೀಸ್ ಠಾಣೆಗಳು

ರೌಡಿಗಳ ತಾಣವಾದ ಹಾಸನ ಪೊಲೀಸ್ ಠಾಣೆಗಳು

ಪ್ರಶಾಂತ್ ನಾಗರಾಜ್ ಕೇಸ್‌ ಸಿಐಡಿಗೆ ಹಸ್ತಾಂತರ ವಿಚಾರ ಪ್ರತಿಕ್ರಿಯೆ ನೀಡಿದ ಅವರು ಡಿವೈಎಸ್ ಪಿ, ಸಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಿಡಿಸಿದರು. ನಾನು ಗೃಹಸಚಿವ, ಡಿಜಿ (ಎಲ್ ಅಂಡ್ ಓ), ಮೈಸೂರು ಐಜಿಯವರಿಗೆ ಮನವಿ ಮಾಡುತ್ತೇನೆ, ಮೊದಲು ಡಿವೈಎಸ್ ಪಿ ಉದಯ್‌ಭಾಸ್ಕರ್, ಸಿಪಿಐ ರೇಣುಕಾಪ್ರಸಾದ್ ನನ್ನು ಅರೆಸ್ಟ್ ಮಾಡಿ, ಕಸ್ಟಡಿ ತೆಗೆದುಕೊಳ್ಳಲಿ, ಅವರ ಫೋನ್ ಪರಿಶೀಲಿಸಿದರೆ ಎಲ್ಲಾ ವಿಷಯ ಬಯಲಾಗುತ್ತೆ, ಪ್ರಶಾಂತ್ ಪತ್ನಿ ನೀಡಿದ್ದ ಕಂಪ್ಲೆಂಟ್ ನ್ನು ಉದಯ್ ಭಾಸ್ಕರ್ ಹೇಗೆ ಬದಲಾಯಿಸಿದ, ಅವರ ಮೇಲೆ ಉನ್ನತಮಟ್ಟದ ತನಿಖೆ ನಡೆಸಿ ಎಂದು ಮನವಿ ಮಾಡಿದರು. ಇನ್ನು ಹಾಸನ ಪೊಲೀಸ್ ಠಾಣೆಗಳು ರೌಡಿಗಳ ತಾಣವಾಗಿದೆ, ದುಡ್ಡಿಗಾಗಿ ಈ ಅಧಿಕಾರಿಗಳು ಯಾರನ್ನು ಬೇಕಾದರೂ ಕೊಲೆ ಮಾಡಿಸುತ್ತಾರೆ, ಜೂಜು, ಮರಳುದಂದೆ, ಮಟ್ಕಾ ಆಡ್ಸದೆ ಇವರ ಕೆಲಸ ಎಂದು ಜನರೇ ಹೇಳುತ್ತಿದ್ದಾರೆ,

ಕಾಂಗ್ರೆಸ್ ಅವರ ತರ ಸಣ್ಣತನದ ಹೇಳಿಕೆ ಬೇಡ

ಕಾಂಗ್ರೆಸ್ ಅವರ ತರ ಸಣ್ಣತನದ ಹೇಳಿಕೆ ಬೇಡ

ರೌಡಿಗಳನ್ನು ಸಾಕುವುದರಲ್ಲಿ ಉದಯ್‌ಭಾಸ್ಕರ್ ಬೆಸ್ಟ್ ಅಂಥ ಸರ್ಟಿಫಿಕೇಟ್ ಕೊಡಲಿ ಎಂದರು. ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ, ಮೊದಲು ಈ ಅಧಿಕಾರಿಗಳ ಮೇಲೆ ಎಫ್‌ಐಆರ್ ಹಾಕಿ, ಈ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ, ಧಾರವಾಡದಲ್ಲಿ ಯೋಗೀಶ್ ಹತ್ಯೆ ಪ್ರಕರಣದಲ್ಲಿ ಏನಾಯ್ತು, ರಾಜಕಾರಣಿ, ಪೊಲೀಸರನ್ನು ಬಂಧಿಸಿಲ್ವ, ಸರ್ಕಲ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಫಿಶ್ ಮಾರ್ಕೆಟ್ ಆಗಿದೆ, 40, 50 ಲಕ್ಷ ಕೊಟ್ಟು ಬಂದಿದ್ದೇನೆ ಅಂತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈಗೀನ ಗೃಹಮಂತ್ರಿಗಳ ಬಗ್ಗೆ ಗೌವರವಿದೆ, ಸಣ್ಣತನದ ವ್ಯಕ್ತಿಯಲ್ಲ, ಅವರ ಬಗ್ಗೆ ಕಾಂಗ್ರೆಸ್ ಅವರ ತರ ಸಣ್ಣತನದ ಹೇಳಿಕೆ ಕೊಡಲ್ಲ ನಾನು ಎಂದರು. ಪ್ರಾದೇಶಿಕ ಪಕ್ಷ ಉಳಿದುಕೊಳ್ಳಲಿ, ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರುತ್ತೇವೆ. ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ ಎಂದರು.

Recommended Video

ಏನ್ ಗುರೂ.... Hardik Pandya, ಬಗ್ಗೆ ಎಂಥಾ‌ ಮಾತು ಹೇಳ್ಬಿಟ್ರು Ravi Shastri | *Cricket | OneIndia Kannada

English summary
HD Revanna calls for unity of secular forces against communalists. He requested Congress leaders to support JDS candidate in Rajya Sabha Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X