ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರದ ಸಮಸ್ಯೆಯನ್ನು ಎದುರಿಸುವಲ್ಲಿ ಸಿದ್ದು ಸೋತಿದ್ದಾರೆ: ದೇವೇಗೌಡ

ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಹೇಮಾವತಿ ಅಣೆಕಟ್ಟಿನಿಂದ ತಮಿಳುನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಉದ್ದೇಶಿರುವುದರ ವಿರುದ್ಧ ಹಾಸನದಲ್ಲಿ ಜೆಡಿಎಸ್ ಪ್ರತಿಭಟನೆ.

|
Google Oneindia Kannada News

ಹಾಸನ, ಫೆಬ್ರವರಿ 25: ರಾಜ್ಯದಲ್ಲಿ ತಲೆದೋರಿರುವ ಬರದ ಪರಿಸ್ಥಿತಿಯನ್ನು ದಕ್ಷತೆಯಿಂದ ಎದುರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತಿದ್ದಾರೆಂದು ಮಾಜಿ ಪ್ರಧಾನಿ ಹಾಗೂ ಜಾತ್ಯಾತೀತ ಜನತಾ ದಳದ (ಜೆಡಿಎಸ್) ಧುರೀಣ ಎಚ್.ಡಿ. ದೇವೇಗೌಡ ಟೀಕಿಸಿದ್ದಾರೆ.

ರಾಜ್ಯ ಸರ್ಕಾರವು ಹೇಮಾವತಿ ಅಣೆಕಟ್ಟಿನಿಂದ ನಿರ್ದಿಷ್ಟ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಲು ನಿರ್ಧರಿಸಿರುವುದನ್ನು ಖಂಡಿಸಿ ಜಾತ್ಯಾತೀತ ಜನತಾದಳ (ಜೆಡಿಎಸ್) ಶನಿವಾರ ಹಾಸನದಲ್ಲಿ ನಡೆಸಿದ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಟೀಕಾಸ್ತ್ರವನ್ನು ಪ್ರಯೋಗಿಸಿದರು.

CM Siddaramaiah failed to tackle the drought situation: Devegowda

''ಯಗಚಿನಾಳ ಹಾಗೂ ಹಾಸನ ನಡುವಿನ ಪ್ರಾಂತ್ಯಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಪ್ರಾಂತ್ಯಗಳಿಗೆ ವಾರಕ್ಕೆರಡು ಬಾರಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ದನ ಕರುಗಳಿಗೂ ನೀರಿಲ್ಲ. ನಮ್ಮಲ್ಲಿ ಸದ್ಯಕ್ಕಿರುವ ನೀರನ್ನು ನಮ್ಮ ಜನರಿಗೆ ಸಮರ್ಪಕವಾಗಿ ಹಂಚದೇ ಬೇರೆ ರಾಜ್ಯಗಳ ಜನರಿಗೆ ಹಂಚಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಆಕ್ಷೇಪಾರ್ಹ '' ಎಂದು ಅವರು ಕಿಡಿಕಾರಿದರು.
ಕೃಷ್ಣ ರಾಜ ಸಾಗರ ಅಣೆಕಟ್ಟಿನಲ್ಲಿ ಈಗಾಗಲೇ ನೀರಿನ ಸಂಗ್ರಹ ಡೆಡ್ ಸ್ಟೋರೇಜ್ ಮುಟ್ಟಿದ್ದು, ಬೇಸಿಗೆ ಕಾಲ ಆರಂಭವಾಗಿರುವ ಈ ಹೊತ್ತಿನಲ್ಲಿ ರಾಜ್ಯದೆಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಇಂಥ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕತ್ತೆಗಳು, ಕುರಿಗಳು!: ಕತ್ತೆಗಳನ್ನು ಕುರಿಗಳನ್ನು ಪ್ರತಿಭಟನೆಯಲ್ಲಿ ಉಪಯೋಗಿಸಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ, ನಗರದ ಪ್ರಮುಖ ಬೀದಿಗಳಲ್ಲಿ ಹರಿದಾಡಿತು.

English summary
Reacting to Karnataka governments decision to release water to Tamilnadu from Hemavathi Dam, over 200 JD(S) workers protested in Hassan on Feb. 25. During protest, former Prime Minister and JD(S) Supreme H.D.Devegowda lashed out against Karnataka Chief Minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X