ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದಬಳಕೆ ಸರಿಯಾಗಿರಲಿ: ವಿಷ್ಣು ಅಳಿಯ ಅನಿರುದ್ಧಗೆ ಸಿಎಂ ಎಚ್ಚರಿಕೆ

|
Google Oneindia Kannada News

ಹಾಸನ, ನವೆಂಬರ್ 28: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಗಳು ನಿರ್ಲಕ್ಷ್ಯದ ಬಗ್ಗೆ ಸಿಟ್ಟಾಗಿ ಕುಮಾರಸ್ವಾಮಿ ವಿರುದ್ಧ ಹಗುರ ಪದ ಬಳಸಿದ್ದ ನಟ ಅನಿರುದ್ಧಗೆ ಕುಮಾರಸ್ವಾಮಿ ಅವರು ಇಂದು ಎಚ್ಚರಿಕೆ ನೀಡಿದ್ದಾರೆ.

ವಿಷ್ಣುವರ್ಧನ್ ಅವರು ಕಾಲವಾಗಿ ಒಂಬತ್ತು ವರ್ಷವಾದರು ಸ್ಮಾರಕ ನಿರ್ಮಾಣ ಮಾಡದೇ ಇರುವ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ವಿಷ್ಣುವರ್ಧನ್ ಅಳಿಯ ನಟ ಅನಿರುದ್ ಅವರು ನಿನ್ನೆ ಸಿಎಂ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದರು. ಕುಮಾರಸ್ವಾಮಿ ಅವರನ್ನು ಉಡಾಫೆ ಸಿಎಂ ಎಂದು ಜರಿದಿದ್ದರು.

ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

ಇದಕ್ಕೆ ಇಂದು ಹಾಸನದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ವಿಷ್ಣುವರ್ಧನ್ ತೀರಿಕೊಂಡಾಗ ನಾನು ಸಿಎಂ ಆಗಿರಲಿಲ್ಲ, ಅನಿರುದ್ಧ ಪದ ಬಳಕೆ ಬಗ್ಗೆ ಜಾಗೃತೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

CM Kumaraswamy warn actor Anirudh about loose talks

ವಿಷ್ಣು ನಿಧನರಾದಾಗ ಅಂದಿನ ಸಿಎಂಗೆ ಕರೆ ಮಾಡಿ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಬೇಡ ಎಂದು ಹೇಳಿದ್ದೆ. ಸರ್ಕಾರಿ ಗೌರವ ಕೊಡಿ ಎಂದೂ ಹೇಳಿದ್ದೆ ಆದರೂ ನನ್ನನ್ನು ಉಡಾಫೆ ಎಂದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

ಕುಮಾರಸ್ವಾಮಿ ಅವರನ್ನು ಕೆಲವು ದಿನಗಳ ಹಿಂದೆಯಷ್ಟೆ ಭಾರತಿ ವಿಷ್ಣುವರ್ಧನ್ ಮತ್ತು ವಿಷ್ಣುವರ್ಧನ್ ಅಳಿಯ ಅನಿರುದ್ಧ ಭೇಟಿ ಮಾಡಿ, ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿದ್ದರು.

'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ

ಎಚ್‌ಡಿಕೆ ಅವರು ವಿಷ್ಣು ಸ್ಮಾರಕವನ್ನೂ ಕಂಠೀರವದಲ್ಲಿಯೇ ಮಾಡಲಾಗುವುದು ಎಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅನಿರುದ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇಂದು ಭಾರತಿ ವಿಷ್ಣುವರ್ಧನ್ ಅವರು ಅನಿರುದ್ಧ ಪರವಾಗಿ ಕುಮಾರಸ್ವಾಮಿ ಕ್ಷಮೆ ಕೋರಿದ್ದಾರೆ.

English summary
CM Kumaraswamy today warn Vishnuvardhan son in law and actor Anirudh about his loose talks. Anirudh. Anirudh yesterday said that Kumaraswamy is a lazy cm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X