ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ : ಮಳೆ ತೀವ್ರತೆ, ಭೂಕುಸಿತ ಬಗ್ಗೆ ಕೇಂದ್ರ ತಂಡದ ಅಚ್ಚರಿ

|
Google Oneindia Kannada News

ಹಾಸನ ಸೆಪ್ಟೆಂಬರ್ 15: ಅತಿವೃಷ್ಟಿ ಹಾನಿ ಅಧ್ಯಯನಕ್ಕೆ ಅಗಮಿಸಿದ ಕೇಂದ್ರ ಅಧ್ಯಯನ ತಂಡದ ಸದಸ್ಯರು ,ಸಕಲೇಶಪುರ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವೆಡೆ ಭೂಕುಸಿತವನ್ನು ಗಮನಿಸಿ ಮಳೆಯ ತೀವ್ರತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಒಟ್ಟಾರೆ ಹಾನಿ ಪ್ರಮಾಣದ ಬಗ್ಗೆ ವಿವರಿಸಿದರು.

ಕೇಂದ್ರ ಹಣಕಾಸು ಇಲಾಖೆಯ ವೆಚ್ಚ ವಿಭಾಗದ ಉಪ ಕಾರ್ಯದರ್ಶಿ ಭರತೇಂದ್ರ ಕುಮಾರ್ ಸಿಂಗ್. ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್ ಚಂದ್ ಪಂಡಿತ್ ಮತ್ತು ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೋಳಗೊಂಡ ತಂಡ ಸಕಲೇಶಪುರ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಮಳೆಯಿಂದ ಆದ ಹಾನಿಯನ್ನು ಪರಿಶೀಲಿಸಿತು.

ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ರೋಹಿಣಿಗೆ ಎಚ್ಡಿಡಿ ಕಿವಿಮಾತುಸಂತ್ರಸ್ತರಿಗೆ ಪರಿಹಾರ ಒದಗಿಸುವ ಬಗ್ಗೆ ರೋಹಿಣಿಗೆ ಎಚ್ಡಿಡಿ ಕಿವಿಮಾತು

ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್, ಹೆಗ್ಗೇರಿ, ಅಳುವಳ್ಳಿ, ಕಡದರಹಳ್ಳಿ, ಮಗಾನಹಳ್ಳಿ, ಹೊಳಲ್ಲಹಳ್ಳಿ, ಹೆತ್ತೂರು, ಮಂಕನಹಳ್ಳಿ, ಬಿಸ್ಲೆ, ಅಡ್ಡಹೊಳೆ, ಹಿಜ್ಜನಹಳ್ಳಿ, ಮಾಗೇರಿ ಮತ್ತಿತ್ತರ ಸ್ಥಳಗಳಿಗೆ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ಪರಿಶೀಲಿಸಿತು.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ದಕ್ಷಿಣ ಕನ್ನಡದ ಮೂಲಕ ಗುಂಡ್ಯಕ್ಕೆ ಆಗಮಿಸಿದ ತಂಡ ನಂತರ ಶಿರಾಡಿಘಾಟ್‍ನ ವಿವಿಧ ಸ್ಥಳಗಳಲ್ಲಿ ಭೂಕುಸಿತದಿಂದಾಗಿರುವ ಹಾನಿ ಪರಿಶೀಲಿಸಿತು. ಅಲ್ಲದೆ ಮಾರ್ಗದುದ್ದಕ್ಕೂ ಉಂಟಾಗಿರುವ ಬೆಳಹಾನಿ ಗುಡ್ಡ ಕುಸಿತಗಳನ್ನು ಗಮನಿಸಿತು.

ಭೂಕಂಪದ ಎಚ್ಚರಿಕೆ ಗಂಟೆಗೆ ಕಿವಿಗೊಡಲಿಲ್ಲ, ವಿನಾಶ ತಪ್ಪಲಿಲ್ಲಭೂಕಂಪದ ಎಚ್ಚರಿಕೆ ಗಂಟೆಗೆ ಕಿವಿಗೊಡಲಿಲ್ಲ, ವಿನಾಶ ತಪ್ಪಲಿಲ್ಲ

ಹೆತ್ತೂರು ಹೋಬಳಿಯಲ್ಲಿ ಬಾರಿ ಮಳೆಯಿಂದ ಕಾಫಿ ಮತ್ತು ಕಾಳು ಮೆಣಸಿನ ಬೆಳೆ ಸಂಪೂರ್ಣವಾಗಿ ನಷ್ಟವಾಗಿರುವುದನ್ನು ಕೇಂದ್ರ ತಂಡ ಪರಿಶೀಲಿಸಿತು.

ಕಾಫಿ ಬೆಳೆಗಾರರಿಗೆ ಉಂಟಾದ ನಷ್ಟ

ಕಾಫಿ ಬೆಳೆಗಾರರಿಗೆ ಉಂಟಾದ ನಷ್ಟ

ಸ್ಥಳೀಯ ಕಾಫಿ ಬೆಳೆಗಾರರು ತಮಗೆ ಉಂಟಾಗಿರುವ ಸಂಕಷ್ಟಗಳನ್ನು ವಿವರಿಸಿದರು. ಶಾಸಕರಾದ ಎಚ್.ಕೆ. ಕುಮಾರಸ್ವಾಮಿ ಹಾಗೂ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮತ್ತು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಎಚ್.ಡಿ.ಶ್ರೀನಿವಾಸ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಸಂಜಯ್ ಮತ್ತು ಜಂಟಿ ಕೃಷಿ ನಿರ್ದೇಶಕರಾದ ಕೆ.ಮಧುಸೂಧನ್ ಅವರು ಮಳೆಯ ಅರ್ಭಟದಿಂದಾಗಿರುವ ಹಾನಿಯ ಸ್ವರೂಪ ಅದರ ದೀರ್ಘಾವದಿ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೇಂದ್ರ ತಂಡವು ಮಾಗೇರಿ ಸಮೀಪದ ಹಿಜ್ಜನಹಳ್ಳಿ ಬಳಿ ಉಂಟಾಗಿರುವ ಭೂಕುಸಿತವನ್ನು ಗಮನಿಸಿ ಮಳೆಯ ತೀವ್ರತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು. ಸ್ಥಳೀಯ ಗ್ರಾಮಸ್ಥರು ಸಹ ಕೇಂದ್ರ ತಂಡದೊಂದಿಗೆ ತಮ್ಮ ಅಳಲು ತೋಡಿಕೊಂಡರು.

ಹಗಲು ರಾತ್ರಿ ಎನ್ನದೆ ಪರಿಶೀಲನೆ

ಹಗಲು ರಾತ್ರಿ ಎನ್ನದೆ ಪರಿಶೀಲನೆ

ಶಾಸಕರಾದ ಎಚ್.ಕೆ. ಕುಮಾರಸ್ವಾಮಿಯವರು ಮಾಹಿತಿ ನೀಡಿ ಸಕಲೇಶಪುರ ತಾಲ್ಲೂಕಿನಲ್ಲಿ ಮಳೆ ಬಹುದೊಡ್ಡ ಅನಾಹುತ ಸೃಷ್ಠಿಸಿದೆ ಜಿಲ್ಲೆಯಲ್ಲಿ ಸುಮಾರು 940 ಕೋಟಿ ರೂಪಾಯಿ ನಷ್ಟವಾಗಿದೆ. ವಾಸ್ತವ ನಷ್ಟದ ಅಂದಾಜು ಮಾಡಿ ಕೇಂದ್ರ ತಂಡದ ಗಮನಕ್ಕೆ ತಂದರು.

ನಂತರ ರಾತ್ರಿ ಬಿಸಿಲೆ ಬಳಿ ಉಂಟಾಗಿರುವ ರಸ್ತೆ ಹಾನಿಯನ್ನು ಕೇಂದ್ರ ತಂಡ ಪರಿಶೀಲಿಸಿದರು, ಜಿಲ್ಲಾಡಳಿತದ ವತಿಯಿಂದ ಕೇಂದ್ರದ ತಂಡ ಪರಿಶೀಲನೆಗೆ ಅನುಕೂಲವಾಗುವಂತೆ ಬೆಳಕಿಗಾಗಿ ಜನರೇಟರ್ ವ್ಯವಸ್ಥೆಯನ್ನು ಕಲ್ಪಿಸಿತು.

ರಾತ್ರಿ 10.30 ಕ್ಕೆ ಹಾಸನಕ್ಕೆ ಕೇಂದ್ರ ತಂಡ ಅಗಮಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತ್ತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಉಂಟಾಗಿರುವ ಕೃಷಿ, ತೋಟಗಾರಿಕೆ, ಬೆಳೆಗಳ ಹಾನಿ, ಜನ-ಜಾನುವಾರು ಜೀವಹಾನಿ, ರಸ್ತೆ, ಕಟ್ಟಡಗಳಿಗೆ ಆಗಿರುವ ಹಾನಿ ಮತ್ತು ನಷ್ಟದ ಬಗ್ಗೆ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ವಾಸ್ತವ್ಯವಾಗಿ 94085 ಲಕ್ಷ ರೂಪಾಯಿ ಹಾನಿಯಾಗಿದೆ

ವಾಸ್ತವ್ಯವಾಗಿ 94085 ಲಕ್ಷ ರೂಪಾಯಿ ಹಾನಿಯಾಗಿದೆ

ಜಿಲ್ಲೆಯಲ್ಲಿ ಒಟ್ಟಾರೆ ಎನ್.ಡಿ.ಆರ್.ಎಫ್ ಮಾರ್ಗಸೂಚಿನ್ವಯ 6940 ಲಕ್ಷರೂಪಾಯಿ ನಷ್ಟ ಉಂಟಾಗಿದೆ. ಅದರೆ ವಾಸ್ತವ್ಯವಾಗಿ 94085 ಲಕ್ಷ ರೂಪಾಯಿ ಹಾನಿಯಾಗಿದೆ ಎಂದರು. ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನೆರವು ಒದಗಿಲು ಕೇಂದ್ರ ಶಿಫಾರಸು ಮಾಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮನವಿ ಮಾಡಿದರು.

ಕಳೆದ ಮೂರು ತಿಂಗಳ ಕಾಲ ಸಕಲೇಶಪುರ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತವಾಗಿತ್ತು ಕಾಫಿ ಮೆಣಸು ಏಲಕ್ಕಿ ಹಾಗೂ ಅಪಾರ ಪ್ರಮಾಣದ ಕೃಷಿ, ತೋಟಗಾರಿಕಾ ಬೆಳೆ ಹಾನಿಯಾಗಿದೆ ಎಂದು ಶಾಸಕರಾದ ಎಚ್.ಕೆ.ಕುಮಾರಸ್ವಾಮಿ ಯವರು ತಿಳಿಸಿದರಲ್ಲದೆ, ಈ ವರ್ಷ ಸುರಿದ ದಾಖಲೆ ಮಳೆಯಿಂದ ಆಗಿರುವ ವಿವಿಧ ರೀತಿಯ ತೊಂದರೆ ನಷ್ಟಗಳನ್ನು ಕೇಂದ್ರ ತಂಡದ ಮುಂದೆ ತೆರೆದಿಟ್ಟರು.

ಸಕಲೇಶಪುರದಲ್ಲಿ ಜೀವ ಹಾನಿ, ಮನೆ ಹಾನಿ

ಸಕಲೇಶಪುರದಲ್ಲಿ ಜೀವ ಹಾನಿ, ಮನೆ ಹಾನಿ

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಶೇ 154 ರಷ್ಟು, ಜುಲೈ ಶೇ 74 ರಷ್ಟು, ಆಗಸ್ಟ್ ಮಾಹೆಯಲ್ಲಿ ಶೇ 143 ರಷ್ಟು ಅಧಿಕ ಮಳೆಯಾಗಿದೆ. ಆಲೂರು ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಶೇ 112 ರಷ್ಟು, ಜುಲೈ ಶೇ.12 ರಷ್ಟು, ಆಗಸ್ಟ್ ಮಾಹೆಯಲ್ಲಿ ಶೇ.143 ರಷ್ಟು ಅಧಿಕ ಮಳೆಯಾಗಿದೆ, ಅರಕಲಗೂಡು ತಾಲ್ಲೂಕಿನಲ್ಲಿ ಜೂನ್ ತಿಂಗಳಿನಲ್ಲಿ ಶೇ.107 ರಷ್ಟು, ಜುಲೈ ಶೇ.38 ರಷ್ಟು, ಆಗಸ್ಟ್ ಮಾಹೆಯಲ್ಲಿ ಶೇ.92 ರಷ್ಟು ಅಧಿಕ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಯವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಸಕಲೇಶಪುರ ತಾಲ್ಲೂಕಿನಲ್ಲಿ 6, ಅಕರಲಗೂಡು ತಾಲ್ಲೂಕಿನಲ್ಲಿ 1 ಮಾನವ ಜೀವ ಹಾನಿ ಸಂಭವಿಸಿದೆ. 1044 ಮನೆ ಹಾನಿಗೊಂಡಿದ್ದು ಅಂದಾಜು 283.33 ಲಕ್ಷ ರೂ ಹಾನಿಯಾಗಿದೆ.

58304 ಎಕರೆ ಭೂ ಪ್ರದೇಶದಲ್ಲಿ ವಿವಿಧ ರೀತಿಯ ಬೆಳೆ ಹಾನಿಯಾಗಿದ್ದು, ಪ್ರಕೃತಿ ವಿಕೋಪ ನಿಧಿ ಮಾರ್ಗಸೂಚಿದನ್ವಯ ಅಂದಾಜು 3635 ಲಕ್ಷ ನಷ್ಟ ಸಂಭವಿಸಿದೆ ಅದರೆ ಕೃಷಿ ಬಿತ್ತನೆ ನಿರ್ವಹಣೆಗೆ 65228ಲಕ್ಷ ರೂಪಾಯಿ ವಾಸ್ತವ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿಯವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

NDRF ಮಾರ್ಗಸೂಚಿ ಅನ್ವಯ ನಷ್ಟದ ಲೆಕ್ಕಾಚಾರ

NDRF ಮಾರ್ಗಸೂಚಿ ಅನ್ವಯ ನಷ್ಟದ ಲೆಕ್ಕಾಚಾರ

ಜಿಲ್ಲೆಯಲ್ಲಿ 700 ಎಕರೆ ಜಮೀನಿನಲ್ಲಿ ಹೂಳು ತುಂಬಿದ್ದು 55.06 ಲಕ್ಷದಷ್ಟು ನಷ್ಟ ಸಂಭವಿಸಿದೆ ಒಟ್ಟಾರೆ ಜೀವಹಾನಿ, ಮಳೆಹಾನಿ, ಬೆಳೆಹಾನಿ, ಭೂಕುಸಿತ ಮತ್ತಿತರ ಕಾರಣಗಳಿಂದ ಪ್ರಕೃತಿ ವಿಕೋಪ ನಿಧಿ ಮಾರ್ಗಸೂಚಿಯಂತೆ ಒಟ್ಟಾರೆ 4008.8 ಲಕ್ಷ ರೂಪಾಯಿ ಹಾಗೂ ವಾಸ್ತವಾಗಿ 65,601.2ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಯವರು ಕೇಂದ್ರ ತಂಡಕ್ಕೆ ವಿವರಿಸಿದರು.

ಜಿಲ್ಲೆಯಲ್ಲಿ 188.95 ಕಿ.ಮಿ ರಸ್ತೆ, 88 ಕಿ.ಮಿ. ಸೇತುವೆ 8 ಕಟ್ಟಡಗಳು ಹಾನಿಗೀಡಾಗಿದ್ದು ಒಟ್ಟಾರೆ 106 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಸಣ್ಣ ನೀರಾವರಿ ಇಲಾಖೆಯ 30 ಕೆರೆಗಳು ಹಾನಿಗೀಡಾಗಿದ್ದು ಎನ್.ಡಿ.ಆರ್.ಎಫ್ ಮಾರ್ಗಸೂಚಿದನ್ವಯ 45 ಲಕ್ಷ ಹಾಗೂ ಮತ್ತು ವಾಸ್ತವ್ಯ ಅಂದಾಜು 234.50 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ.

ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಸಲ್ಲಿಕೆ

ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಸಲ್ಲಿಕೆ

ಒಟ್ಟಾರೆ 605 ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಹಾನಿಗೀಡಾಗಿದ್ದು ವಾಸ್ತವ್ಯ ಅಂದಾಜು 1530.15 ಲಕ್ಷ ರೂಪಾಯಿ ಹಾಗೂ ಎನ್.ಡಿ.ಆರ್.ಎಫ್ ಮಾರ್ಗಸೂಚಿದನ್ವಯ 1146.70 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

360 ವಿದ್ಯುತ್ ಕಂಬಗಳು 100 ಟ್ರಾನ್ಸ್ ಫಾರ್ಮರ್ ಹಾಗೂ ಹಾನಿಗೀಡಾಗಿದ್ದು 383.0 ಲಕ್ಷ ರೂಪಾಯಿ ಹಾನಿಯಾಗಿದೆ ಜಿಲ್ಲಾ ಪ್ರಾಥಮಿಕ ಆರೋಗ್ರ ಕೇಂದ್ರಗಳು ಹಾನಿಯಾಗಿದೆ. ಅಂದಾಜು 48 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿಯವರು ವರದಿ ನೀಡಿದರು.

ರಸ್ತೆ, ಸೇತುವೆ, ಸಣ್ಣ ನೀರಾವರಿ ಇಲಾಖೆ ಕೆರೆಗಳು ಶಾಲೆ, ಅಂಗನವಾಡಿ ಕಟ್ಟಡಗಳು, ವಿದ್ಯುತ್ ಕಂಬ ಟ್ರಾನ್ಸ್ ಫಾರ್ಮರ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಇತರೆ ಸರ್ಕಾರಿ ಆಸ್ತಿ ಸೇರಿದಂತೆ ಒಟ್ಟಾರೆ 2931 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ

English summary
An inter-ministerial Central team visited rain-affected areas of Hassan district on Thursday. The team visited Shiradi Ghat, Mageri, Hijjanahalli, Bisale Ghat and other parts of Sakleshpur taluk. DC Rohini briefed about the total damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X