ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಹಾಸನಾಂಬ ದೇವಿಯ ದರ್ಶನ ಪಡೆದ ಗಣ್ಯರು

|
Google Oneindia Kannada News

ಹಾಸನ, ಅಕ್ಟೋಬರ್ 22 : ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ಸಮೇತರಾಗಿ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ದರ್ಶನ ಪಡೆದರು. ಅಕ್ಟೋಬರ್ 29ರ ತನಕ ದೇವಿಯ ದರ್ಶನವನ್ನು ಪಡೆಯಲು ಅವಕಾಶವಿದೆ.

ಮಂಗಳವಾರ ಎಚ್.ಡಿ. ದೇವೆಗೌಡ ಪತ್ನಿ ಚನ್ನಾಂಬಿಕ, ಪುತ್ರ ಎಚ್.ಡಿ. ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ, ಮೊಮ್ಮಗ ನಿಖಿಲ್‍ ಕುಮಾರಸ್ವಾಮಿ ಜೊತೆ ಹಾಸನಾಂಬ ಮತ್ತು ಸಿದ್ದೇಶ್ವರ ದೇವಿಯ ದರ್ಶನ ಪಡೆದರು.

ಅಕ್ಟೋಬರ್ 17ರಿಂದ ಹಾಸನಾಂಬೆ ದರ್ಶನ ಪಡೆಯಿರಿ ಅಕ್ಟೋಬರ್ 17ರಿಂದ ಹಾಸನಾಂಬೆ ದರ್ಶನ ಪಡೆಯಿರಿ

ಅಕ್ಟೋಬರ್ 23ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3ರಿಂದ ಅಕ್ಟೋಬರ್ 24ರ ಬೆಳಗ್ಗೆ 6 ಗಂಟೆಯ ತನಕ ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಹಾಸನಾಂಬ ಜಾತ್ರೆ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿಹಾಸನಾಂಬ ಜಾತ್ರೆ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ

ಬುಧವಾರ ಮಧ್ಯಾಹ್ನ 1ರಿಂದ 3 ಗಂಟೆ ವರೆಗೆ ದೇವಿಗೆ ನೈವೇದ್ಯವಿರುವುದರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಕ್ಟೋಬರ್ 29ರ ತನಕ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನ ಪಡೆಯಲು ಅವಕಾಶವಿದೆ.

ಹಾಸನಾಂಬ ದೇವಿಗೆ ಭಕ್ತಾದಿಗಳು ಬರೆದಿರುವ ಚಿತ್ರವಿಚಿತ್ರ ಪತ್ರಗಳುಹಾಸನಾಂಬ ದೇವಿಗೆ ಭಕ್ತಾದಿಗಳು ಬರೆದಿರುವ ಚಿತ್ರವಿಚಿತ್ರ ಪತ್ರಗಳು

ಹಾಸನಾಂಬ ದರ್ಶನ ಪಡೆದ ಗೌಡರ ಕುಟುಂಬ

ಹಾಸನಾಂಬ ದರ್ಶನ ಪಡೆದ ಗೌಡರ ಕುಟುಂಬ

ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಪತ್ನಿ ಚನ್ನಾಂಬಿಕ, ಪುತ್ರ ಎಚ್.ಡಿ. ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ, ಮೊಮ್ಮಗ ನಿಖಿಲ್‍ ಜೊತೆ ಮಂಗಳವಾರ ಹಾಸನಾಂಬ ಮತ್ತು ಸಿದ್ದೇಶ್ವರ ದೇವಿಯ ದರ್ಶನವನ್ನು ಪಡೆದರು.

ನಟಿ ತಾರಾರಿಂದ ದರ್ಶನ

ನಟಿ ತಾರಾರಿಂದ ದರ್ಶನ

ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ ಹಾಗೂ ನಟಿ ತಾರಾ ಮತ್ತಿತರರು ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ತಾಯಿ ಪುಷ್ಪ ಜೊತೆ ಬಾಗಿನ ಸಮೇತರಾಗಿ ಆಗಮಿಸಿದ ತಾರಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿಯೂ ಅರ್ಚನೆ ಮಾಡಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಿಯ ದರ್ಶನ ಪಡೆದ ರೇವಣ್ಣ

ದೇವಿಯ ದರ್ಶನ ಪಡೆದ ರೇವಣ್ಣ

ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಸನಾಂಬೆಯ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ಸಹ ದರ್ಶನ ಪಡೆದು ಪುನೀತರಾದರು.

ಉಸ್ತುವಾರಿ ಸಚಿವರಿಂದ ದರ್ಶನ

ಉಸ್ತುವಾರಿ ಸಚಿವರಿಂದ ದರ್ಶನ

ಅಕ್ಟೋಬರ್ 17ರಂದು ಹಾಸನದ ಅದಿ ದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸಿ ಬಾಳೆ ಕಂದು ಕಡಿಯುವ ಮೂಲಕ ತೆರೆಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಶಾಸಕ ಪ್ರೀತಂ ಜೆ ಗೌಡ ಮುಂತಾದವರು ಜೊತೆಗಿದ್ದರು.

English summary
In pics : Celebrities visited Hasanamba temple at Hassan. Historical Hasanamba temple opened on October 17, 2019. Temple is opened for devotes only once in a year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X