ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಸಿಎಂ ಮಾಡುವುದು ನನ್ನ ಗುರಿಯಲ್ಲ : ದೇವೇಗೌಡ

By Mahesh
|
Google Oneindia Kannada News

ಹೊಳೆನರಸೀಪುರ, ಮಾರ್ಚ್ 02: ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ಜಾತ್ಯಾತೀತ ಜನತಾ ದಳ(ಜೆಡಿಎಸ್) ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ಅವರು ಹೇಳಿದ್ದಾರೆ.

ಮೈತ್ರಿ ಮಾತುಕತೆ, ಜೆಡಿಎಸ್‌ ಚಿತ್ತ ಎಡಪಕ್ಷಗಳತ್ತ!ಮೈತ್ರಿ ಮಾತುಕತೆ, ಜೆಡಿಎಸ್‌ ಚಿತ್ತ ಎಡಪಕ್ಷಗಳತ್ತ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ದೇವೇಗೌಡರು ಹೇಳಿದರು.

ಅನುಮಾನ ಮೂಡಿಸಿದೆ 'ಕೈ' ಶಾಸಕ ಗುತ್ತೇದಾರ್ ಹೊಸ ನಡೆಅನುಮಾನ ಮೂಡಿಸಿದೆ 'ಕೈ' ಶಾಸಕ ಗುತ್ತೇದಾರ್ ಹೊಸ ನಡೆ

ತಪ್ಪಿದ ಅಪಘಾತ: ಹೊಳೆನರಸೀಪುರದ ಶ್ರೀಲಕ್ಷ್ಮೀನರಸಿಂಹ ದೇಗುಲದ ರಥೋತ್ಸವದ ಉದ್ಘಾಟನೆಗೆ ಬಂದಿದ್ದ ದೇವೇಗೌಡರ ಕುಟುಂಬ ಇಂದು ಕೆಲಕಾಲ ಆತಂಕ ಎದುರಿಸಿತು. ರಥ ಎಳೆಯಲು ಚಾಲನೆ ನೀಡುತ್ತಿದ್ದಮ್ತೆ ಭಕ್ತರು ಏಕಾಏಕಿ ಧಾವಿಸಿ ಬಂದರು. ಈ ನೂಕು ನುಗ್ಗಲಿನಲ್ಲಿ ದೇವೇಗೌಡರ ಪತ್ನಿ ಚನ್ನಮ್ಮ ಸಿಲುಕಿಕೊಂಡರು. ಆದರೆ, ತಕ್ಷಣವೆ ಪುತ್ರ ರೇವಣ್ಣ ಹಾಗೂ ಅವರ ಅಂಗರಕ್ಷಕರು ನೆರವಿಗೆ ಧಾವಿಸಿ ಅಪಾಯದಿಂದ ಪಾರು ಮಾಡಿದ ಘಟನೆ ನಡೆಯಿತು.

ಚುನಾವಣಾ ಪೂರ್ವ ಮೈತ್ರಿ ಬಗ್ಗೆ

ಚುನಾವಣಾ ಪೂರ್ವ ಮೈತ್ರಿ ಬಗ್ಗೆ

ನನ್ನ ಹೋರಾಟದ ಫಲದಿಂದ ಬಿಎಸ್ಪಿ, ಸಿಪಿಐಎಂ, ಎನ್ ಸಿಪಿ ಜತೆ ಈಗಾಗಲೇ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಓವೈಸಿ ಅವರ ಎಐಎಂಐಎಂ ಜತೆ ಮಾತುಕತೆ ನಡೆಡಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈಗ ಸಾಧಿಸಿರುವ ಮೈತ್ರಿಗಳು ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮುಂದುವರೆಯಲಿದೆ ಎಂದರು.

ಯಾರನ್ನು ಅಂಗಲಾಚುವುದಿಲ್ಲ

ಯಾರನ್ನು ಅಂಗಲಾಚುವುದಿಲ್ಲ

ಪ್ರಾದೇಶಿಕ ಪಕ್ಷವು ಮೊದಲು ಗಟ್ಟಿಯಾಗಿ ನೆಲೆ ನಿಲ್ಲಬೇಕು. ನನ್ನ ಮಗನನ್ನು ಸಿಎಂ ಮಾಡುವುದಷ್ಟೇ ನನ್ನ ಉದ್ದೇಶವಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನಾವು ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ. ಬೆಂಬಲ ನೀಡಿ ಎಂದು ಯಾರನ್ನು ಅಂಗಲಾಚುವುದಿಲ್ಲ. ಸೋಲು ಗೆಲುವು ಇದ್ದಿದ್ದೇ ಎಂದರು. ಈ ಮೂಲಕ ಕಾಂಗ್ರೆಸ್ ಬೆಂಬಲ ಕೋರುತ್ತಾರೆ ಎಂಬ ಸುದ್ದಿಗೆ ಗುದ್ದು ನೀಡಿದ್ದಾರೆ.

ಮೊಮ್ಮಗ ಸೂರಜ್ ಮದುವೆ ಸಂಭ್ರಮ

ಮೊಮ್ಮಗ ಸೂರಜ್ ಮದುವೆ ಸಂಭ್ರಮ

ಎಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಜೇಷ್ಠ ಪುತ್ರ ಡಾ. ಸೂರಜ್ ರೇವಣ್ಣ ಅವರಿಗೆ ಕಂಕಣ ಬಲ ಕೂಡಿಬಂದಿದೆ. ಮಾರ್ಚ್ 04ರಂದು ಬೆಳಗ್ಗೆ 6.45ರಿಂದ 7.15 ರವರೆಗೆ ಮುಹೂರ್ತ ನಿಗದಿಯಾಗಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ ಮದುವೆ ನೆರವೇರಲಿದೆ.

ಕುಟುಂಬದಿಂದ ಸ್ಪರ್ಧೆ ಬಗ್ಗೆ ಹೇಳಲಿಲ್ಲ

ಕುಟುಂಬದಿಂದ ಸ್ಪರ್ಧೆ ಬಗ್ಗೆ ಹೇಳಲಿಲ್ಲ

ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ಜಾತ್ಯಾತೀತ ಜನತಾ ದಳ(ಜೆಡಿಎಸ್) ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ಅವರು ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ದೇವೇಗೌಡರು ಹೇಳಿದರು. ಕುಟುಂಬದಿಂದ ಯಾರು ಯಾರು ಸ್ಪರ್ಧಿಸುತ್ತಾರೆ ಎಂಬುದರ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.

ವಿಕಾಸ ಪರ್ವ: 128 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್ವಿಕಾಸ ಪರ್ವ: 128 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್

English summary
Holenarsipur: My aim is not to make my son HD Kumaraswamy as CM, my aim is to bring JDS (a regional party) to power again said JDS supremo HD Deve Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X