ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ರೇವಣ್ಣ Vs ಪ್ರೀತಂ ಗೌಡ: ಏನಿದು ಸದನದಲ್ಲಿ 'ಹಾಸನ ಗೌಡ್ರ ಗದ್ಲ'

|
Google Oneindia Kannada News

ಬೆಂಗಳೂರು, ಮಾರ್ಚ್ 18: ಈ ಬಾರಿಯ ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ಪ್ರತಿನಿತ್ಯ ಗಮನಿಸಬೇಕಾದಂಥ ಅಂಶವೇನಂದರೆ, ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರು ಮತ್ತು ಬಿಜೆಪಿ ಶಾಸಕ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ.

ಇತ್ತೀಚೆಗೆ ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇ ಗೌಡ್ರು ಮತ್ತು ಹಾಸನ ಶಾಸಕ ಪ್ರೀತಂ ಗೌಡ ನಡುವೆ ವರ್ಗಾವಣೆಯ ವಿಚಾರಕ್ಕೆ ಸದನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಸ್ಪೀಕರ್ ಕಾಗೇರಿಯವರ ಮಧ್ಯಪ್ರವೇಶದ ನಂತರ ಇದು ತಿಳಿಯಾಯಿತು.

ಡಿಕೆಶಿಗೆ ಕೆಟ್ಟಕಾಲ ಶುರು: ಎಚ್ಡಿಕೆ ಸುತ್ತ ಇದ್ದ ಗ್ರಹಗಳು ಈಗ ಡಿಕೆಶಿ ಹಿಂದೆ ಮುಂದೆ ಡಿಕೆಶಿಗೆ ಕೆಟ್ಟಕಾಲ ಶುರು: ಎಚ್ಡಿಕೆ ಸುತ್ತ ಇದ್ದ ಗ್ರಹಗಳು ಈಗ ಡಿಕೆಶಿ ಹಿಂದೆ ಮುಂದೆ

ಇನ್ನು, ಪ್ರೀತಂ ಗೌಡ ಮತ್ತು ದೇವೇಗೌಡ್ರ ಕುಟುಂಬದ ನಡುವೆ ವಾಕ್ಸಮರ ಆಗಾಗ ನಡೆಯುತ್ತಲೇ ಇರುತ್ತದೆ. ಹಾಸನ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ, ದಿನನಿತ್ಯ ಏನಾದರೂ ಸಂಘರ್ಷಗಳು ನಡೆಯುತ್ತಲೇ ಇರುತ್ತದೆ.

ಬುಧವಾರದ (ಮಾ 17) ಅಧಿವೇಶನದ ವೇಳೆಯೂ ಪ್ರೀತಂ ಗೌಡ ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಾರಿ ಇದು ಹಾಸನದಲ್ಲಿ ವಿಮಾನ ನಿಲ್ದಾಣದ ವಿಚಾರದಲ್ಲಿ.

"ಹೌದಪ್ಪಾ.. ರಮೇಶ್ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಾನೇ" ಎಂದ ರೇವಣ್ಣ

 ಪ್ರೀತಂ ಗೌಡ ಅವರನ್ನು ತರ್ಲೆ ಮುಂಡೇದು ಎಂದು ಹೇಳಿದ್ದ ರೇವಣ್ಣ

ಪ್ರೀತಂ ಗೌಡ ಅವರನ್ನು ತರ್ಲೆ ಮುಂಡೇದು ಎಂದು ಹೇಳಿದ್ದ ರೇವಣ್ಣ

ಈ ಹಿಂದೆ ಪ್ರೀತಂ ಗೌಡ ಅವರನ್ನು ತರ್ಲೆ ಮುಂಡೇದು ಎಂದು ಹೇಳಿದ್ದ ರೇವಣ್ಣ, "ಹಾಸನ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಯಡಿಯೂರಪ್ಪನವರ ಸರಕಾರ ತಾರತಮ್ಯ ಮಾಡುತ್ತಿದೆ. ಎಲ್ಲಾ ಇದ್ದರೂ, ಹಾಸನದಲ್ಲಿ ವಿಮಾನ ನಿಲ್ದಾಣದ ಕೆಲಸ ಮುಂದಕ್ಕೆ ಹೋಗುವುದಿಲ್ಲ"ಎಂದು ಸದನದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

 ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್

ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್

"ಹಾಸನ ವಿಮಾನ ನಿಲ್ದಾಣಕ್ಕೆ ಟೆಂಡರ್‌ನ್ನು ಯಾವಾಗ ಕರೆಯುತ್ತೀರಾ ಎಂದು ಸದನದಲ್ಲಿ ಉತ್ತರ ಕೊಡಿ. ನಮ್ಮ ಜಿಲ್ಲೆಯ ಅಭಿವೃದ್ದಿ ಕೆಲಸ ಮಾಡುವುದಿಲ್ಲ ಎಂದಾದರೆ, ಅದನ್ನಾದರೂ ಹೇಳಿ ಬಿಡಿ, ನಾವು ತಲೆಯೇ ಹಾಕುವುದಿಲ್ಲ"ಎಂದು ರೇವಣ್ಣ, ಬಿಎಸ್ವೈ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

 ಸರಕಾರಕ್ಕೆ ರೇವಣ್ಣ ಪ್ರಶ್ನೆ

ಸರಕಾರಕ್ಕೆ ರೇವಣ್ಣ ಪ್ರಶ್ನೆ

"ಸುಮಾರು ಐದೂವರೆ ದಶಕಗಳಿಂದ ವಿಮಾನ ನಿಲ್ದಾಣದ ವಿಚಾರ ನೆನೆಗುದಿಗೆ ಬಿದ್ದಿದೆ. ಶಿವಮೊಗ್ಗ, ವಿಜಯಪುರಕ್ಕೆ ನೀಡುವ ಆದ್ಯತೆಯನ್ನು ನಮ್ಮ ಜಿಲ್ಲೆಗೆ ಯಾಕೆ ನೀಡುತ್ತಿಲ್ಲ"ಎಂದು ರೇವಣ್ಣ ಸರಕಾರವನ್ನು ಪ್ರಶ್ನಿಸಿದರು.

Recommended Video

ಸಿಎಂ ಭೇಟಿಯಾದ ಬಸವಕಲ್ಯಾಣ ಟಿಕೆಟ್‌ ಆಕಾಂಕ್ಷಿ ಪ್ರದೀಪ್ ವಾತಡೆ | Oneindia Kannada
 ರೇವಣ್ಣ ಪ್ರಶ್ನೆಗೆ ಪ್ರೀತಂ ಗೌಡ ಉತ್ತರ

ರೇವಣ್ಣ ಪ್ರಶ್ನೆಗೆ ಪ್ರೀತಂ ಗೌಡ ಉತ್ತರ

ಆಗ ಮಧ್ಯ ಪ್ರವೇಶಿಸಿದ ಪ್ರೀತಂ ಗೌಡ, "ಇಷ್ಟು ವರ್ಷ ಯಾರೂ ಮಾಡದ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ. ಬಜೆಟ್‌ನಲ್ಲಿ 175 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಸದ್ಯದಲ್ಲೇ ಕಾಮಗಾರಿ ಪ್ರಕ್ರಿಯೆ ಆರಂಭಗೊಳ್ಳಲಿದೆ"ಎಂದಾಗ ರೇವಣ್ಣ ಸುಮ್ಮನಾದರು.

English summary
BJP MLA Preetham Gowda Reply To H D Revanna In Assembly On Hassan Airport
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X