ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಕ್ಕಾಗಿ ಇತರರ ಮನೆಬಾಗಿಲಿಗೆ ಹೋಗುವುದು ಜೆಡಿಎಸ್ ಗುಣ:ಪ್ರೀತಂಗೌಡ

|
Google Oneindia Kannada News

Recommended Video

ಅಧಿಕಾರಕ್ಕೋಸ್ಕರ ರೇವಣ್ಣ, ಕುಮಾರಸ್ವಾಮಿ ಕಂಡೋರ ಮನೆ ಬಾಗಿಲಿಗೆ ಹೋಗ್ತಾರೆ..! | Oneindia Kannada

ಹಾಸನ, ಏಪ್ರಿಲ್ 15: ಮಂಡ್ಯದಲ್ಲಿ ಜೆಡಿಎಸ್ ನಡೆಸುತ್ತಿರುವ ಕುತಂತ್ರ ರಾಜಕಾರಣವನ್ನು ಹಾಸನದಲ್ಲೂ ಪ್ರಯೋಗಿಸುತ್ತಿದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಹೇಳಿದರು.

ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ಪರ ಪ್ರಚಾರ ಮಾಡುವ ಸಂದರ್ಭ 'ಒನ್‌ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ ಅವರು, ಈ ಬಾರಿ ಹಾನಸದಲ್ಲಿ ಕಮಲ ಅರಳುವುದು ಖಾಯಂ ಎಂದರು.

ಪ್ರಜ್ವಲ್ ರೇವಣ್ಣ ನಾಮಪತ್ರ ಮರುಪರಿಶೀಲನೆಗೆ ಚುನಾವಣಾ ಆಯೋಗ ನೋಟಿಸ್ಪ್ರಜ್ವಲ್ ರೇವಣ್ಣ ನಾಮಪತ್ರ ಮರುಪರಿಶೀಲನೆಗೆ ಚುನಾವಣಾ ಆಯೋಗ ನೋಟಿಸ್

ಬೇಲೂರು, ಆಲೂರು, ಕಡೂರು, ಸಕಲೇಶಪುರಗಳಲ್ಲಿ ಬಿಜೆಪಿಗೆ ಸಾಂಪ್ರದಾಯಿಕ ಮತದಾರರು ಇದ್ದಾರೆ. ಹೊಳೆನರಸೀಪುರ, ಅರಕಲಗೂಡಿನಲ್ಲಿ ಪಕ್ಷ ಗಟ್ಟಿಯಾಗಿರಲಿಲ್ಲ, ಆದರೆ ಎ.ಮಂಜು ಅವರು ಬಿಜೆಪಿ ಬಂದ ನಂತರ ಅಲ್ಲಿಯೂ ಬಿಜೆಪಿಗೆ ಬಲ ಬಂದಿದೆ ಹಾಗಾಗಿ ಈ ಬಾರಿ ಎ.ಮಂಜು ಅವರು ಕನಿಷ್ಟ ಎರಡು ಲಕ್ಷ ಮತಗಳಿಂದ ಹಾಸನದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಪ್ರೀತಂಗೌಡ ವಿಶ್ವಾಸ ವ್ಯಕ್ತಪಡಿಸಿದರು.

BJP MLA Preetham Gowda interiew with One India Kannada

ಎ.ಮಂಜು ಅವರನ್ನು ಸೋಲಿಸಲು ಪ್ರೀತಂಗೌಡ ಯತ್ನಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ 'ಒನ್ಇಂಡಿಯಾ ಕನ್ನಡ' ಪ್ರಶ್ನಿಸಿದಾಗ, ಅದು ಆಧಾರರಹಿತ ಆರೋಪ, ಮಂಜು ಅವರು ಬೇರೆ ಪಕ್ಷದಲ್ಲಿ ನಾನು ಆಡಿದ್ದಿರಬಹುದಾದ ಮಾತು ಪಕ್ಷದ ನೆಲೆಗಟ್ಟಿನಲ್ಲಿ ಆಡಿದ್ದೆ, ಆದರೆ ಅವರು ಪಕ್ಷಕ್ಕೆ ಸೇರಿದ ಮೇಲೆ ಅವರ ಪರ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ, ಬಿಜೆಪಿಯ ಕಟ್ಟಾಳು ನಾನು ಎಂದು ಪ್ರೀತಂಗೌಡ ಹೇಳಿದರು.

'ಎ.ಮಂಜು ಅಧಿಕಾರಕ್ಕೆ ನಮ್ಮ ಮನೆಗೆ ಬಂದರೂ ಆಶ್ಚರ್ಯವಿಲ್ಲ' ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರೀತಂಗೌಡ, ಅಧಿಕಾರಕ್ಕೆ ಬೇರೆಯವರ ಮನೆ ಬಾಗಿಲಿಗೆ ಹೋಗುವ ಜಾಯಮಾನ ಬಿಜೆಪಿಯದ್ದಲ್ಲ, ಅದು ಜೆಡಿಎಸ್‌ನ ಗುಣ. ಅಧಿಕಾರಕ್ಕಾಗಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ಮನೆ ಬಾಗಿಲಿಗೆ ಬಂದಿದ್ದರು, ಈಗ ಕಾಂಗ್ರೆಸ್ ಬಾಗಿಲಿಗೆ ಹೋಗಿದ್ದಾರೆ. ಎ.ಮಂಜು ಕುಟುಂಬ ರಾಜಕಾರಣದ ವಿರುದ್ಧ ಹೋರಾಡಲು ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದರು.

ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್‌ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್‌

ಎ.ಮಂಜು ಅವರನ್ನು ಏಕೆ ಗೆಲ್ಲಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಕ್ಕೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಾಗೂ ಕರ್ನಾಟಕದಲ್ಲಿ ಕುಟುಂಬ ರಾಜಕೀಯದ ವಿರುದ್ಧ ಹೋರಾಡಲು ಎ.ಮಂಜು ಅವರಿಗೆ ಮತ ಹಾಕಬೇಕು. ಮತ್ತು ಈ ಬಾರಿ ಹಾಸನದ ಜನ ಕುಟುಂಬ ರಾಜಕಾರಣದ ವಿರುದ್ಧ ಇದ್ದಾರೆ ಎಂದು ಹೇಳಿದರು.

English summary
Hassan BJP MLA Preetham Gowda said that, BJP candidate A Manju will win in Hassan by 2 lakh vote marjin, from his win family politics of Deve Gowda will also end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X