• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫಲಿತಾಂಶಕ್ಕೆ ಒಂದು ದಿನ ಮುನ್ನ ಹಾಸನದಲ್ಲಿ ಎಚ್.ಡಿ.ರೇವಣ್ಣ ಸಿಡಿಸಿದ ಹೊಸ ಬಾಂಬ್

|

ಹಾಸನ, ನ 9: ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಚುನಾವಣೆಯ ಮತಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಜೆಡಿಎಸ್ ಹಿರಿಯ ಶಾಸಕ, ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದರು.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   "ಶಿರಾದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ, ಚುನಾವಣಾ ಪ್ರಚಾರದ ವೇಳೆ ಕೆಲವೊಂದು ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಊರಿನೊಳಗೆ ಹೋಗಲು ಗ್ರಾಮಸ್ಥರು ಬಿಟ್ಟಿಲ್ಲ. ಹಾಗಿದ್ದರೂ, ನಮಗೆ ಲೀಡ್, ನಮಗೆ ಜಯ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ"ಎಂದು ರೇವಣ್ಣ ಆರೋಪಿಸಿದ್ದಾರೆ.

   ಹೊನ್ನಾದೇವಿ ಸನ್ನಿಧಾನದಲ್ಲಿ 1 ದಿನದ ಮುನ್ನವೇ ಗೊತ್ತಾದ ಶಿರಾ ಫಲಿತಾಂಶ

   "ನಿಯತ್ತಾಗಿ ಎಲ್ಲಿ ಚುನಾವಣೆ ನಡೆಯುತ್ತಿದೆ. ಒಂದೊಂದು ವೋಟಿಗೆ ಐದು ಸಾವಿರ, ಮೂರು ಸಾವಿರ ಹಂಚಿದರೆ, ಚುನಾವಣೆಯನ್ನು ಯಾವ ಪುರುಸಾರ್ಥಕ್ಕಾಗಿ ನಡೆಸಬೇಕು"ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

   "ಆಡಳಿತ ಪಕ್ಷದವರ ಕೈಯಲ್ಲಿ ಚುನಾವಣಾ ಆಯೋಗ ಸಿಲುಕಿಕೊಂಡಿದೆ. ಆಡಳಿತ ಯಂತ್ರವನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಯೋಗ ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ"ಎಂದು ರೇವಣ್ಣ ಬೇಸರ ವ್ಯಕ್ತ ಪಡಿಸಿದ್ದಾರೆ.

   "ನಮ್ಮ ಮುಖ್ಯಮಂತ್ರಿಗಳು ಮತ್ತು ಅವರ ಪುತ್ರ ವಿಜಯೇಂದ್ರ, ಶಿರಾದಲ್ಲಿ ಇಪ್ಪತ್ತು ಸಾವಿರ ಲೀಡ್ ನಿಂದ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿಕೊಂಡೂ ಬರುತ್ತಿದ್ದಾರೆ. ಹಾಗಿದ್ದರೆ, ಎಷ್ಟು ದುಡ್ಡು ಹಂಚಿರಬೇಕು ಎನ್ನುವುದನ್ನು ಜನರೇ ಅರ್ಥೈಸಿಕೊಳ್ಳಬಹುದು"ಎಂದು ರೇವಣ್ಣ ಹೇಳಿದರು.

   ಆರ್.ಆರ್.ನಗರ ಉಪಚುನಾವಣೆ: ಡಿ.ಕೆ.ಸುರೇಶ್ ಗೆ ಕಾಡುತ್ತಿರುವ ಆತಂಕ ಈ ಒಂದು ವಾರ್ಡಿದ್ದು!

   ಶಿರಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಎಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಹಿಸಲಾಗಿತ್ತು. ಇಬ್ಬರೂ, ಬಿರುಸಿನ ಪ್ರಚಾರವನ್ನು ನಡೆಸಿದ್ದರು.

   English summary
   BJP Misusing Power In Sira And RR Nagar Bypoll, Said JDS Leader HD Revanna.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X