ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಪಕ್ಷದ ಒಂದೊಂದು ಟಿಕೆಟ್ ನಿಂದ 5 ಕೋಟಿ ಸಂಗ್ರಹಿಸಿದ ಕುಮಾರಸ್ವಾಮಿ!

|
Google Oneindia Kannada News

ಹಾಸನ, ಫೆ 21: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ದೇಣಿಗೆ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ರಾಮ ಮಂದಿರಕ್ಕೆ ಹಣ ಸಂಗ್ರಹ ಮಾಡುತ್ತಿರುವವರು ಪುಂಡ ಪೋಕರಿಗಳು ಎಂದು ಕುಮಾರಸ್ವಾಮಿ ಹೇಳಿದ್ದರು. ಇದು, ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ.

ಅಯೋಧ್ಯೆ ರಾಮಮಂದಿರ ದೇಣಿಗೆ ಸಂಗ್ರಹ: ಎಚ್ಡಿಕೆ ಆರೋಪ ನಿಜವಾದರೆ ಎಂತಹ ದುರಂತ!ಅಯೋಧ್ಯೆ ರಾಮಮಂದಿರ ದೇಣಿಗೆ ಸಂಗ್ರಹ: ಎಚ್ಡಿಕೆ ಆರೋಪ ನಿಜವಾದರೆ ಎಂತಹ ದುರಂತ!

ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದರೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ವಿರುದ್ದ, ಹಾಸನದ ಪ್ರಭಾವೀ ಮುಖಂಡ ಬಿಜೆಪಿಯ ಅರಕಲಗೂಡು ಮಂಜು ಗುರುತರ ಆರೋಪವನ್ನು ಮಾಡಿದ್ದಾರೆ.

ನಮ್ಮ ಕುಟುಂಬದ ದೈವಭಕ್ತಿಯ ಮುಂದೆ ನಕಲಿ ಹಿಂದೂಗಳ ದೈವಭಕ್ತಿ ಕಾಲುಭಾಗಕ್ಕೂ ಸಾಲದು ಎಂದು ಎಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿರುವ ಎ.ಮಂಜು, ಚುನಾವಣೆಯ ವೇಳೆ ಟಿಕೆಟ್ ಆಕಾಂಕ್ಷಿಗಳಿಂದ ಕೋಟಿ ಕೋಟಿ ಪೀಕುತ್ತೀರಲ್ವಾ ಅದ್ಯಾವ ಲೆಕ್ಕ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆ

ದುಡ್ಡು ತೆಗೆದುಕೊಂಡು ಪಕ್ಷದ ಬಿ-ಫಾರಂ ಕೊಡುತ್ತಿರುವುದಲ್ಲ

ದುಡ್ಡು ತೆಗೆದುಕೊಂಡು ಪಕ್ಷದ ಬಿ-ಫಾರಂ ಕೊಡುತ್ತಿರುವುದಲ್ಲ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಮಂಜು, "ನಾವು ಈ ನಾಡಿನ ಹೆಮ್ಮೆಯ ಪ್ರತೀಕವಾದ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದೆವೆಯೇ ಹೊರತು, ದುಡ್ಡು ತೆಗೆದುಕೊಂಡು ಪಕ್ಷದ ಬಿ-ಫಾರಂ ಕೊಡುತ್ತಿರುವುದಲ್ಲ"ಎಂದು ಅವರು ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ

"ಮಂದಿರ ನಿರ್ಮಾಣಕ್ಕೆ ಯಾರನ್ನೂ ಒತ್ತಾಯಿಸುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದಾಗ್ಯೂ, ದೇಣಿಗೆ ಸಂಗ್ರಹ ಮಾಡಲು ಬರುತ್ತಿರುವವರನ್ನು ಪುಂಡ ಪೋಕರಿಗಳು ಎನ್ನುವುದು ಎಷ್ಟು ಸರಿ. ಚುನಾವಣೆಯ ವೇಳೆ ಒಂದೊಂದು ಟಿಕೆಟಿಗೆ ನಾಲ್ಕೈದು ಕೋಟಿ ರೂಪಾಯಿ ತೆಗೆದುಕೊಳ್ಳುತ್ತೀರಲ್ಲಾ. ಅದಕ್ಕೆ ಏನೆಂದು ಹೇಳಬೇಕು"ಎಂದು ಎ.ಮಂಜು ಪ್ರಶ್ನಿಸಿದ್ದಾರೆ.

ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ

ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ

"ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದಲ್ಲೇ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಆರೆಸ್ಸೆಸ್‌ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ. ದೇಶದಲ್ಲಿ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಸ್ವತಂತ್ರವಾಗಿ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದು ಅಘೋಷಿತ ತುರ್ತು ಪರಿಸ್ಥಿತಿ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

ಉಡುಪಿ ಪೇಜಾವರ ಶ್ರೀಗಳೂ ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು

ಉಡುಪಿ ಪೇಜಾವರ ಶ್ರೀಗಳೂ ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು

"ಇದೊಂದು ಆಧಾರ ರಹಿತವಾದ ಆರೋಪವಾಗಿದ್ದು, ಶ್ರೀ ರಾಮ ಜನ್ಮಭೂಮಿಯ ನಿಧಿ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿದೆ. ದೇಶದ ಪ್ರತಿಯೊಂದು ರಾಮಭಕ್ತರ ಮನೆಯನ್ನು ಸಂಪರ್ಕಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ"ಎಂದು ಉಡುಪಿ ಪೇಜಾವರ ಶ್ರೀಗಳೂ ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.

English summary
BJP Leader A Manju Objected HD Kumaraswamy Statement On Ram Mandir Fund Collection,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X