ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳ ಮೂಲಕ ಬೆಂಗಳೂರು-ಮಂಗಳೂರು ರೈಲು ಸಂಚಾರ

|
Google Oneindia Kannada News

ಹಾಸನ, ನವೆಂಬರ್ 12 : ಶ್ರವಣಬೆಳಗೊಳ ಮೂಲಕ ಮಂಗಳೂರಿಗೆ ರೈಲು ಸಂಚಾರ ನಡೆಸಲು ಅನುಮತಿ ಸಿಕ್ಕಿದೆ. 2018ರ ಫೆಬ್ರವರಿಯಲ್ಲಿ ಬೆಂಗಳೂರು-ಶ್ರವಣಬೆಳಗೊಳ-ಮಂಗಳೂರು ರೈಲು ಸಂಚಾರ ಆರಂಭವಾಗಲಿದೆ.

ಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆ

ಬೆಂಗಳೂರು-ಹಾಸನ ಮಾರ್ಗದಲ್ಲಿ ಈಗಾಗಲೇ ರೈಲು ಸಂಚಾರ ಆರಂಭವಾಗಿದೆ. ಶ್ರವಣಬೆಳಗೊಳ ಮೂಲಕ ಮಂಗಳೂರಿಗೆ ರೈಲು ಸಂಚಾರ ಆರಂಭವಾದರೆ ಪ್ರಯಾಣದ ಅವಧಿ 85 ರಿಂದ 45 ನಿಮಿಷಕ್ಕೆ ಕಡಿಯೆಯಾಗಲಿದೆ.

Bengaluru-Mangaluru train to run via Shravanabelagola from February

ಫೆಬ್ರವರಿ 10ರಿಂದ ವಾರದಲ್ಲಿ 4 ಬಾರಿ ಶ್ರವಣಬೆಳಗೊಳ ಮಾರ್ಗವಾಗಿ ರೈಲು ಸಂಚಾರ ನಡೆಸಲು ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ. ಸದ್ಯ, ಬೆಂಗಳೂರು-ಮಂಗಳೂರು ನಡುವಿನ ರೈಲು ಮೈಸೂರು ಮಾರ್ಗದ ಮೂಲಕ ಸಂಚಾರ ನಡೆಸುತ್ತಿದೆ.

ಹಾಸನ- ಬೆಂಗಳೂರು ರೈಲಿನ ವೇಳಾಪಟ್ಟಿ, ಏನೆಂದು ಹೆಸರು?ಹಾಸನ- ಬೆಂಗಳೂರು ರೈಲಿನ ವೇಳಾಪಟ್ಟಿ, ಏನೆಂದು ಹೆಸರು?

ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ನಿಲ್ದಾಣದಲ್ಲಿ ನಿಂತು ಮಂಗಳೂರು ತಲುಪಲಿದೆ.

ವೇಳಾಪಟ್ಟಿ : ಫೆಬ್ರವರಿ 10ರಿಂದ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.15ಕ್ಕೆ ಹೊರಡುವ ರೈಲು, ಮರುದಿನ ಬೆಳಗ್ಗೆ 6.20ಕ್ಕೆ ಮಂಗಳೂರನ್ನು ತಲುಪಲಿದೆ.

English summary
Thanks to Ministry of Railways for sanctioning a new train between Bengaluru and Mangaluru, via Shravanabelagola. The train will start from 10th February 2018. The route of the train is like this : Yeshwanthpur, Kunigal, Shravanabelagola, Channarayapatna, Hassan, Sakaleshpur, Subramanya road, Bantwal, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X