ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂದಾ...ಎದ್ದೇಳಮ್ಮಾ, ತಾಯಿ ಆನೆಯ ನೋವಿಗೆ ಜನರ ಕಂಬನಿ

|
Google Oneindia Kannada News

Recommended Video

ಈ ಆನೆಯ ಗೋಳಾಟ ನೋಡಿದರೆ ಇಂಥವರ ಕಣ್ಣಲ್ಲೂ ನೀರು ಬರುತ್ತೆ | Oneindia Kannada

ಹಾಸನ, ಸೆಪ್ಟೆಂಬರ್ 27 : ಹುಟ್ಟಿದ ಕೆಲವೇ ಕ್ಷಣದಲ್ಲಿ ಕಣ್ಣ ಮುಂದೆಯೇ ಮಗು ಮೃತಪಟ್ಟಿತು. ತಾಯಿಯ ರೋದನೆ ಮುಗಿಲು ಮುಟ್ಟಿತ್ತು. ತಾಯಿಯನ್ನು ಮಗುವಿನ ಮೃತದೇಹದಿಂದ ದೂರ ಸರಿಸಲು ಹರಸಾಹಸ ಪಡಬೇಕಾಯಿತು.

ಹೌದು...ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊತ್ತನಹಳ್ಳಿ ಬುಧವಾರ ಮನಕಲುಕುವ ಘಟನೆಗೆ ಸಾಕ್ಷಿಯಾಯಿತು. ಕೆಸರಿನಲ್ಲಿ ಸಿಲುಕಿ ಆಗ ತಾನೆ ಹುಟ್ಟಿದ ಆನೆ ಮರಿ ಪ್ರಾಣ ಬಿಟ್ಟಿತು. ಹೆತ್ತ ಕಂದಮ್ಮನನ್ನು ಕಳೆದುಕೊಂಡ ಆನೆಯು ಘೀಳಿಡುತ್ತಾ ಕಂದನ ಅಗಲಿಕೆಗೆ ಕಂಬನಿ ಸುರಿಸಿತು.

ಚಿಕ್ಕಮಗಳೂರು‌: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..!ಚಿಕ್ಕಮಗಳೂರು‌: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..!

ಕೊತ್ತನಹಳ್ಳಿ ಗ್ರಾಮದ ತಿಮ್ಮೇಗೌಡ ಎಂಬುವವರ ಭತ್ತದ ಗದ್ದೆಯಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿತ್ತು. ಆದರೆ, ಮರಿ ಕೆಸರಿನಲ್ಲಿ ಸಿಲುಕಿತ್ತು. ಕಂದನನ್ನು ಕೆಸರಿನಿಂದ ಹೊರ ತರುವ ತಾಯಿ ಆನೆಯ ಪ್ರಯತ್ನ ಫಲಕೊಡಲಿಲ್ಲ.

Baby elephant died emotional moment in Sakleshpur

ಕೆಲವು ಗಂಟೆಗಳ ಕಾಲ ಕೆಸರಿನಲ್ಲಿ ನರಳಾಡಿದ ಆನೆ ಮರಿ ನಂತರ ಸಾವನ್ನಪ್ಪಿತ್ತು. ಇಂದರಿಂದ ನೊಂದ ತಾಯಿ ಆನೆ ಸ್ಥಳ ಬಿಟ್ಟು ಕದಲಲಿಲ್ಲ. ಸೊಂಡಿಲಿನಿಂದ ಮರಿಯನ್ನು ಕೆಸರಿನಿಂದ ಎಳೆಯುತ್ತಾ, ಕಂದ ಬದುಕಿದೆ ಎಂಬ ಭಾವನೆಯಲ್ಲಿಯೇ ಕಣ್ಣೀರು ಹಾಕುತ್ತಿತ್ತು.

ಕೆಲವು ಗಂಟೆಗಳ ಹೋರಾಟದ ಬಳಿಕ ಬುಧವಾರ ಬೆಳಗಾಯಿತು. ಸತ್ತ ಆನೆ ಮರಿಯನ್ನು ಕೆಸರಿನಿಂದ ಎಳೆದು ಸ್ವಲ್ಪ ದೂರಕ್ಕೆ ತಂದ ತಾಯಿ ಆನೆ, ಅದನ್ನು ಎಬ್ಬಿಸಲು ಪ್ರಯತ್ನ ನಡೆಸುತ್ತಿತ್ತು. ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕಮರಿ ಆನೆ ಉಳಿಸಲು ಹೆಣ್ಣಾನೆ ದಾಳಿ: 60 ಪ್ರಯಾಣಿಕರನ್ನು ರಕ್ಷಿಸಿದ ಚಾಲಕ

ಆನೆಯ ಘೀಳಿಡುವ ಸದ್ದನ್ನು ಕೇಳಿ 12 ಕಾಡಾನೆಗಳು ಸ್ಥಳಕ್ಕೆ ಬಂದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಪಟಾಕಿ ಸಿಡಿಸಿ ಅವುಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದರು. ಆದರೆ, ಕೆಲವು ಆನೆಗಳು ಕಾಡಿನತ್ತ ಹೋದರು ಕಂದನನ್ನು ಕಳೆದುಕೊಂಡ ತಾಯಿ ಆನೆ ಮಾತ್ರ ಸ್ಥಳ ಬಿಟ್ಟು ಕದಲಲಿಲ್ಲ.

ಸಕ್ರೆಬೈಲಿನ ಮರಿಯಾನೆ ಬಾಲಾಜಿ ಇನ್ನು ನೆನಪು ಮಾತ್ರಸಕ್ರೆಬೈಲಿನ ಮರಿಯಾನೆ ಬಾಲಾಜಿ ಇನ್ನು ನೆನಪು ಮಾತ್ರ

Baby elephant died emotional moment in Sakleshpur

ಗುರುವಾರ ಸಂಜೆಯ ತನಕವೂ ಮರದ ರೆಂಬೆಗಳನ್ನು ಮುರಿಯುತ್ತಾ, ಸಾವನ್ನಪ್ಪಿದ ಮರಿಯನ್ನು ನೋಡಿ ಆನೆ ಘೀಳಿಡುತ್ತಲೇ ಇತ್ತು. ಈ ಘಟನೆಯನ್ನು ನೋಡಿದ ಜನರು ಸಹ ಕಣ್ಣೀರು ಹಾಕಿದರು....

English summary
Hassan district Sakleshpur taluk Kottanahalli village witnessed for emotional moment when a newborn calf died in a paddy field. Wild elephants numbering to 12 gathered to mourn its death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X