India
 • search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ; ಅಶ್ವಥ್ ನಾರಾಯಣ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜೂನ್ 24 : "ಪ್ರಧಾನಮಂತ್ರಿಗಳು ಬರುವುದನ್ನು ಪ್ರಶ್ನೆ ಮಾಡುತ್ತಾರೆ? ಎಂದರೆ ಇವರು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದಾರೆ ಎಂದು ಅರ್ಥ ಮಾಡಿಕೊಳ್ಳಲಿ. ಒಂದು ಜವಾಬ್ದಾರಿಯುತ ಹೇಳಿಕೆ ಕೊಟ್ಟರೆ ಪ್ರತಿಕ್ರಿಯಿಸಬಹುದು ಇಂತಹ ಹೇಳಿಕೆಗೆ ಏನು ಪ್ರತಿಕ್ರಿಯಿಸಲಿ?" ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದರು.

"ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣದಲ್ಲಿ ಒಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಮಾಡಬಹುದಿತ್ತು" ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದರು.

Breaking; ಹಾಸನ ಮಾತ್ರವಲ್ಲ ಕೊಡಗಿನಲ್ಲೂ ಕಂಪಿಸಿದ ಭೂಮಿ Breaking; ಹಾಸನ ಮಾತ್ರವಲ್ಲ ಕೊಡಗಿನಲ್ಲೂ ಕಂಪಿಸಿದ ಭೂಮಿ

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಪ್ರಧಾನಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ ಎಂದು ನಾಡಿಗೆ ಗೊತ್ತಿದೆ. ಇಡೀ ದೇಶದ ಸುಧಾರಣೆ, ಬದಲಾವಣೆಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಅವರು ತೆಗೆದುಕೊಂಡಿದ್ದಾರೆ" ಎಂದರು.

"ದೇವೇಗೌಡರಿಗೆ ಗೌರವ ಕೊಟ್ಟು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮೋದಿ ಮಾಡುತ್ತಾರೆ. ಆದರೆ ಕುಮಾರಸ್ವಾಮಿ ಹೇಳಿಕೆಗೂ ವಾಸ್ತವಿಕತೆಗೂ ಸಂಬಂಧವಿಲ್ಲ ಇಂತಹ ಹೇಳಿಕೆ ಕೊಡುವುದನ್ನು ಕುಮಾರಸ್ವಾಮಿ ಅವರು ನಿಲ್ಲಿಸಬೇಕು" ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.

ಮೋದಿಗಾಗಿ 32 ಕೋಟಿ ವ್ಯಯಿಸುವ ಬದಲು ಒಂದು ಪಂಚಾಯಿತಿ ಅಭಿವೃದ್ಧಿ ಮಾಡಬಹುದಿತ್ತು: ಕುಮಾರಸ್ವಾಮಿ ಮೋದಿಗಾಗಿ 32 ಕೋಟಿ ವ್ಯಯಿಸುವ ಬದಲು ಒಂದು ಪಂಚಾಯಿತಿ ಅಭಿವೃದ್ಧಿ ಮಾಡಬಹುದಿತ್ತು: ಕುಮಾರಸ್ವಾಮಿ

ಕಾನೂನಿಗಿಂತ ದೊಡ್ಡವರು ಯಾರು ಇಲ್ಲ

ಕಾನೂನಿಗಿಂತ ದೊಡ್ಡವರು ಯಾರು ಇಲ್ಲ

ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, "ಕಾನೂನು ಗೌರವಿಸುವಂತಹ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗಲ್ಲ. ಕಾನೂನಿಗಿಂತ ದೊಡ್ಡವರು ಯಾರು ಇದ್ದೀವಿ ಕಾನೂನು ಪ್ರಕಾರ ನೋಟಿಸ್ ಕೊಟ್ಟಿದ್ದಾರೆ. ಇಡಿಗೆ ತನಿಖೆ ನಡೆಸಲು ಕಾಂಗ್ರೆಸ್ ಕಾಲದಲ್ಲಿ ದೂರು ಕೊಟ್ಟಿದ್ದಾರೆ, ಕಾಂಗ್ರೆಸ್‌ನವರೇ ದೂರು ಕೊಟ್ಟು, ಅದನ್ನೇ ಪ್ರಶ್ನೆ ಮಾಡುವುದು ತಪ್ಪಲ್ಲವಾ?. ಅವರು ತಪ್ಪು ಮಾಡಿರುವುದು ಎಲ್ಲರಿಗೂ ಎದ್ದು ಕಾಣುತ್ತಿದೆ. ತನಿಖೆ ನಡೆಯುತ್ತಿದೆ, ಸರಿಯೋ, ತಪ್ಪೋ ತನಿಖೆಯಿಂದ ಹೊರಬರುತ್ತದೆ. ನಮ್ಮ ಸಂವಿಧಾನ ಸಂಸ್ಥೆಗಳ ಮೇಲೆ ಇವರಿಗೆ ಭರವಸೆ ಇಲ್ಲಾ ಅಂದರೆ ಇನ್ನೂ ಯಾರ ಮೇಲೆ ಭರವಸೆ, ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾವುಗಳೇ ಅಧಿಕಾರದಲ್ಲಿದ್ದು ಇಂತಹ ಸಂಸ್ಥೆಗಳನ್ನು ರಚನೆ ಮಾಡಿದ್ದೇವೆ. ಅವರೇ ಗೌರವ ಕೊಡಲ್ಲ ಅಂದರೆ ಇನ್ಯಾರು ಕೊಡುತ್ತಾರೆ. ಬೆದರಿಕೆ ಪ್ರಶ್ನೆ ಯಾವುದು ಇಲ್ಲ. ತಪ್ಪು ಮಾಡಿದರೆ ಏನು ಮಾಡುತ್ತಾರೆ?, ತನಿಖೆ ಮಾಡುತ್ತಿರುವುದು ಸಂಸ್ಥೆಯ ಕರ್ತವ್ಯವಾಗಿದೆ" ಎಂದು ಅಶ್ವಥ್ ನಾರಾಯಣ್ ಹೇಳಿದರು.

ಕನ್ನಡನಾಡಿನ ವಿಭಜನೆ ಅನ್ನೋ ಪ್ರಶ್ನೆ ಇಲ್ಲ

ಕನ್ನಡನಾಡಿನ ವಿಭಜನೆ ಅನ್ನೋ ಪ್ರಶ್ನೆ ಇಲ್ಲ

ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. "ಖಂಡಿತಾ ಅವರು ಇಂತಹ ಹೇಳಿಕೆಯನ್ನು ಕೊಡಬಾರದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಈ ರೀತಿ ಪ್ರತ್ಯೇಕ ರಾಜ್ಯ ಇನ್ನೊಂದು ಮತ್ತೊಂದು ಅಂತಾ ಹಗುರವಾಗಿ ಮಾತನಾಡಬಾರದು, ಅವರ ಹೇಳಿಕೆಯನ್ನು ಆರೂವರೆ ಕೋಟಿ ಜನರ ಪರವಾಗಿ ಖಂಡಿಸುತ್ತೇನೆ" ಎಂದರು.

"ಆರು ರಾಜ್ಯವಾಗಿ ಹರಿದು ಹಂಚಿಹೋಗಿದ್ದನ್ನ ಒಂದುಗೂಡಿಸಿ ಕರ್ನಾಟಕ ನಿರ್ಮಾಣ ಮಾಡಿರುವುದು, ಇದರ ಮಹತ್ವ ಇದರ ಶಕ್ತಿ ಅರಿಯಬೇಕು. ಮೊದಲಿನಿಂದಲೂ ಇಂತಹ ಹೇಳಿಕೆ ಕೊಡುತ್ತಾರೆ. ಈ ರೀತಿ ಹೇಳಿಕೆ ಕೊಟ್ಟಿರುವುದನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ" ಎಂದು ಹೇಳಿದರು.

ಎಚ್. ಡಿ. ಕುಮಾರಸ್ವಾಮಿ ಟೀಕಾಪ್ರಹಾರ

ಎಚ್. ಡಿ. ಕುಮಾರಸ್ವಾಮಿ ಟೀಕಾಪ್ರಹಾರ

"ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆತರಲು 32 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದು ಯಾವ ಪುರುಷಾರ್ಥಕ್ಕೆ?" ಎಂದು ಮಾಜಿ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.

ಹಾಸನದಲ್ಲಿ ಮಾತನಾಡಿದ್ದ ಅವರು, "ರಾಷ್ಟ್ರದ ಗೌರವಾನ್ವಿತ ಪ್ರಧಾನಿಯವರು ಮೈಸೂರಿಗೆ ಭೇಟಿ ನೀಡಿ, ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನ ನಾಗರಿಕರ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಆದರೆ ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮಾತನಾಡಬೇಕಾದರೆ ಯಾವ ಸರ್ಕಾರವೂ ಏನು ಮಾಡಿಲ್ಲ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟಿದ್ದನ್ನು ಸ್ಮರಿಸುವುದು ದೊಡ್ಡತನ" ಎಂದರು.

ಪ್ರಧಾನಿಯಾಗಿದ್ದಾಗಲೇ ಎಚ್​. ಡಿ. ದೇವೇಗೌಡರ ಕನಸು

ಪ್ರಧಾನಿಯಾಗಿದ್ದಾಗಲೇ ಎಚ್​. ಡಿ. ದೇವೇಗೌಡರ ಕನಸು

"ಮಾಜಿ ಪ್ರಧಾನಿ ಎಚ್​. ಡಿ. ದೇವೇಗೌಡರ ಯೋಜನೆಯನ್ನು ಪ್ರಧಾನಿ ಮೋದಿ ಅವರು ತಾವು ಜಾರಿಗೆ ತಂದಿರುವ ಯೋಜನೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಂದು ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಭೇಟಿ ಮಾಡಲಾಗಿದ್ದು, ಇದರ ನಿಜವಾದ ಚಿಂತಕರು ದೇವೇಗೌಡರು​. ಅವರು ಪ್ರಧಾನಿ ಆಗಿದ್ದಾಗಲೇ ಈ ಯೋಜನೆ ಬಗ್ಗೆ ಕನಸು ಕಂಡಿದ್ದರು. ಅಷ್ಟರಲ್ಲಿ ಅವರ ಸರ್ಕಾರ ಹೋಯಿತು. ನನ್ನ ಸರ್ಕಾರದ ಅವಧಿಯಲ್ಲಿ ಇದಕ್ಕೆ ಮರು ಚಾಲನೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆದಾಗ ಪಿಯೂಷ್ ಗೋಯಲ್, ಕೃಷ್ಣಾದಲ್ಲಿ ಈ ಬಗ್ಗೆ ನನ್ನ ಜೊತೆ ಸಭೆ ಕೂಡ ಮಾಡಿದ್ದರು. ಅಂದು ಅವರು ನನಗೆ ಮುಂದಿನ ಬಜೆಟ್​ನಲ್ಲಿ ಹಣ ಇಟ್ಟು ಮೋದಿ ಕರೆಸಿ ಉದ್ಘಾಟನೆ ಮಾಡುವ ಭರವಸೆ ನೀಡಿದ್ದರು. ಆದರೂ ಮೂರು ವರ್ಷ ನೆನೆಗುದಿಗೆ ಬಿದ್ದಿತ್ತು. ಇದೀಗ ಚಾಲನೆ ನೀಡಿದ್ದಾರೆ" ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

   ಹೊಸಪೇಟೆಯ ಅಭಿಮಾನಿ ಏನ್ ಮಾಡಿದಾರೆ ಗೊತ್ತಾ! | *Entertainment | OneIndia Kannada
   English summary
   Higher education minister Dr. Ashwath Narayan reaction for former chief minister H. D. Kumaraswamy statement on prime minister Narendra Modi event in Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X