ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಾವಾಸ್ಯೆಯಂದು ಅರಸೀಕರೆ ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ!

|
Google Oneindia Kannada News

ಹಾಸನ,ಜು1: ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು ಅಥವಾ ದೊಡ್ಡವರು ನಡೆಯುವಾಗ ಅಥವಾ ಒಂದೇ ಸ್ಥಳದಲ್ಲಿ 2-3 ಬಾರಿ ಎಡವಿ ಬಿದ್ದಾಗ ಅಥವಾ ಗ್ರಾಮಕ್ಕೆ ಹೊಸಬರು ಯಾರಾದರೂ ಬಂದರೇ ಕೋಳಿ ಅಥವಾ ಕುರಿ ಬಲಿಕೊಟ್ಟು ಶಾಂತಿ ಮಾಡಿಸುವ ಪದ್ಧತಿಯಿದೆ.

ಹಾಸನ ಜಿಲ್ಲೆಯ ಅರಸೀಕೆರೆಯ ಗ್ರಾಮೀಣ ಠಾಣೆ ಪೊಲೀಸರು ಪೊಲೀಸ್ ಠಾಣೆಯಲ್ಲಿ ಕೋಳಿ ಬಲಿ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಬಲಿ ಯಾಕೆ ಕೊಟ್ಟರು?, ಯಾರಾದರೂ ಎಡವಿ ಬಿದ್ದಿದ್ದಾರ?, ಅಥವಾ ಜಿಲ್ಲೆಗೆ ಯಾರಾದರೂ ಹೊಸಬರು ಬಂದರಾ? ಎಂದು ಜನ ಕೇಳುತ್ತಿದ್ದಾರೆ.

ಕನ್ಹಯ್ಯ ಹತ್ಯೆ ಬಗ್ಗೆ ಮುಸ್ಲಿಂ ಸಂಘಟನೆಗಳು ತುಟಿ ಬಿಚ್ಚುತ್ತಿಲ್ಲ ಏಕೆ?: ಆರ್. ಅಶೋಕ್ ಪ್ರಶ್ನೆಕನ್ಹಯ್ಯ ಹತ್ಯೆ ಬಗ್ಗೆ ಮುಸ್ಲಿಂ ಸಂಘಟನೆಗಳು ತುಟಿ ಬಿಚ್ಚುತ್ತಿಲ್ಲ ಏಕೆ?: ಆರ್. ಅಶೋಕ್ ಪ್ರಶ್ನೆ

ಕಪ್ಪು ಕೋಳಿಯನ್ನು ಬಲಿಕೊಟ್ಟ ಪೊಲೀಸರ ಮೌಢ್ಯತೆ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಣ್ಣೆತ್ತಿನ ಅಮಾವಾಸ್ಯೆಯ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಕೋಳಿ ಬಲಿ ನಡೆದಿದೆ.

Arasikere Rural Police Performs Black Magic

ಮೂಢನಂಬಿಕೆ ಜೀವಂತ; ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಢನಂಬಿಕೆ ಜೀವಂತವಾಗಿದೆ. ಇದನ್ನು ಕೆಲವರು ಸಂಪ್ರದಾಯ ಎಂದು ನಡೆಸಿಕೊಂಡು ಬರುತ್ತಿದ್ದರೆ, ಕೆಲವರು ಮಾತ್ರ ಇಂತಹ ಪದ್ಧತಿ ಆಚರಿಸದಿದ್ದರೆ ಗ್ರಾಮಕ್ಕೆ ಕೆಡುಕಾಗುತ್ತದೆ ಎಂದು ನಂಬಿದ್ದಾರೆ.

'ಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ'ಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ

ಊರಿಗೆ ಮಾರಿ ಬರುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಅದೇನು ಬಂತು? ಎಂದು ಜನರಿಗೆ ಗೊತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೌಢ್ಯತೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಕಪ್ಪು ಕೋಳಿಯ ಬಲಿ ಘಟನೆಯೇ ಸಾಕ್ಷಿ. ಈ ಕುರಿತ ವಿಡಿಯೋವೊಂದು ಸಹ ಹರಿದಾಡುತ್ತಿದೆ.

Arasikere Rural Police Performs Black Magic

ಅರಸೀಕೆರೆ ಪಟ್ಟಣದ ಡಿವೈಎಸ್ಪಿ ಕಚೇರಿಯ ಕಟ್ಟಡದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭಾನಾಮತಿ ಮಾಡಿಸೋ ವ್ಯಕ್ತಿಯನ್ನು ಕರೆಸಿ ಕರಿ ಕೋಳಿಯನ್ನು ಬಾಗಿಲಿಗೆ ಮೂರು ಬಾರಿ ನೀವಳಿಸಿ, ನಿಂಬೆಹಣ್ಣು, ಒಣ ಮೆಣಸಿನಕಾಯಿ, ಇದ್ದಿಲುಗಳ ಮೂಲಕ ದೃಷ್ಟಿ ತೆಗೆದು ಬಾಗಿಲಿನಲ್ಲಿಯೇ ಕೋಳಿ ಬಲಿಕೊಟ್ಟಿದ್ದಾರೆ ಎಂಬ ಸುದ್ದಿ ಇದೆ. ಇದು ನಿಜವೋ?. ಇಲ್ಲವೋ? ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಬೇಕಿದೆ.

Recommended Video

HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada

English summary
In the time of Mannetin amavasya black magic performed in Arasikere rural police station. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X