ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

|
Google Oneindia Kannada News

ಹಾಸನ ನವೆಂಬರ್ 08: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುತ್ತಿರುವ ಸಹಕಾರ ತರಬೇತಿ ಕೇಂದ್ರದ ವತಿಯಿಂದ ನೂತನವಾಗಿ "ಕರ್ನಾಟಕ ಇನ್‍ಸ್ಸಿಟ್ಯೂಟ್ ಆಫ್ ಕೋ-ಅಪರೇಟಿವ್ ಮ್ಯಾಜ್‍ಮೆಂಟ್" ಸಂಸ್ಥೆಯ ಮೂಲಕ "6 ತಿಂಗಳು/180 ದಿನಗಳ" ಅವಧಿಯ "ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನಜ್‍ಮೆಂಟ್" (ಈ ಮೊದಲಿನ ಹೆಸರು ಜಿ.ಡಿ.ಸಿ) ತರಬೇತಿಯನ್ನು ನೀಡಲಿದೆ. ಈ ತರಬೇತಿಯನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸಹಕಾರ ಸಂಘ ಸಂಸ್ಥೆಗಳಲ್ಲಿ, ಸಹಕಾರ ಇಲಾಖೆಯಲ್ಲಿ ಹಾಗೂ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ನಿಯಮಿತವಾಗಿ ಖಾಸಗಿ ಅಭ್ಯರ್ಥಿಗಳಿಗೂ ಸದರಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಹಕಾರ ಸಂಘ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷ ಕಾಲಾವಾದರೂ ಸೇವೆ ಸಲ್ಲಿಸಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಇಂತಹ ಅಭ್ಯರ್ಥಿಗಳು ಮಾತ್ರ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು.

Application invited for Diploma in Co Operative Managment

ತರಬೇತಿಯನ್ನು ಪಡೆಯಲು ಇಚ್ಚೆಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು ಮಡಿಕೇರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಂದ ಪಡೆದು ಭರ್ತಿ ಮಾಡಿ ನ. 30ರೊಳಗಾಗಿ ಪ್ರಾಶುಂಪಾಲರಿಗೆ ತಲಪುವಂತೆ ಕಳುಹಿಸಬೇಕು.

ಸಹಕಾರ ತರಬೇತಿ ಕೇಂದ್ರದಲ್ಲಿ 6 ತಿಂಗಳ ವಿಶೇಷ ಡಿಪ್ಲೋಮಾ ಇನ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ನಿರುದ್ಯೋಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ವಯೋಮಿತಿ ಕನಿಷ್ಟ 18 ವರ್ಷದವರಾಗಿದ್ದು, ಗರಿಷ್ಟ 30 ವರ್ಷಗಳು ಮೀರಿರಬಾರದು. ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/11/2018.

ಸಾಮಾನ್ಯ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400ಗಳ ಶಿಷ್ಯ ವೇತನವನ್ನು ನೀಡಲಾಗುವುದು (ಖಾಸಗೀ ಅಭ್ಯಥಿಗಳನ್ನು ಹೊರತುಪಡಿಸಿ) ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳಿಗೆ ರೂ.500ಗಳ ಶಿಷ್ಯವೇತನವನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಇದೆ (ಊಟ, ತಿಂಡಿಗೆ ತಗಲುವ ವೆಚ್ಚವನ್ನು ಪ್ರವೇಶ ಪಡೆದ ಶಿಕ್ಷಣಾರ್ಥಿಗಳೇ ಭರಿಸಬೇಕು.)

ಹೆಚ್ಚಿನ ವಿವರಗಳಿಗೆ ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಾಸನ ಜಿಲ್ಲಾ ಸಹಕಾರ ಯೂನಿಯನ್ ನಿ., 'ಸಹಕಾರ ಭವನ' ಹಳೇ ಬಸ್‍ಸ್ಟ್ಯಾಂಡ್ ಸಮೀಪ, ಹಾಸನ - 573201 ಇವರನ್ನು ಖುದ್ದಾಗಿ ಸಂಪರ್ಕಿಸಬಹುದಾಗಿದೆ ಮತ್ತು ಅರ್ಜಿ ಫಾರಂಗಳು ಹಾಸನ ಜಿಲ್ಲಾ ಸಹಕಾರ ಯೂನಿಯನ್ ನಿ., ಹಾಸನ ಇಲ್ಲಿ ದೊರೆಯುತ್ತವೆ.

English summary
Hassan : Application invited for Diploma in Co Operative Management. Interested and eligible candidates can apply for training before Nov 30, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X