ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಮಸ್ತಕಾಭಿಷೇಕಕ್ಕೂ ಮುನ್ನ ಶ್ರವಣಬೆಳಗೊಳದಲ್ಲಿ ಮತ್ತೊಬ್ಬ ಬಾಹುಬಲಿ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಜನವರಿ 16: ಹಾಸನದ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮತ್ತೊಂದು ಬಾಹುಬಲಿಯ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿದೆ.

ಈಗಿರುವ ಐತಿಹಾಸಿಕ, ಖ್ಯಾತ ಬಾಹುಬಲಿಯ ಮೂರ್ತಿಯು ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿದೆ. ಹೀಗಾಗಿ ಇಲ್ಲಿಗೆ ಎಲ್ಲರಿಗೂ ತೆರಳಿ ದರ್ಶನ ಪಡೆಯುವುದು ಅಸಾಧ್ಯವಾಗಿರುವ ಹಿನ್ನಲೆಯಲ್ಲಿ ಶ್ರವಣಬೆಳಗೊಳದ ಶ್ರೀಮಠದ ಬಳಿಯೇ ಪ್ರತಿಷ್ಠಾಪಿಸುವ ಮೂಲಕ ಎಲ್ಲರಿಗೂ ದರ್ಶನಕ್ಕೆ ಅವಕಾಶ ಮಾಡಿಕೊಡಲು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮುಂದಾಗಿದ್ದಾರೆ.

ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆ

ಇದೀಗ ಪ್ರತಿಷ್ಠಾಪಿಸಲಾಗುತ್ತಿರುವ ಬಾಹುಬಲಿಯ ಮೂರ್ತಿಯು 12 ಅಡಿ ಎತ್ತರವಿದೆ. ರಾಮನಗರ ಜಿಲ್ಲೆಯ ಬಿಡದಿ ಸಮೀಪದ ದಾಸಪ್ಪನದೊಡ್ಡಿ ಬಳಿಯ ಶಿಲ್ಪಕಲಾ ಕೇಂದ್ರದಲ್ಲಿ ಕಳೆದ ಆರು ತಿಂಗಳಿನಿಂದಲೇ ಏಕಶಿಲಾ ಗೊಮ್ಮಟನ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಗೊಮ್ಮಟೇಶ್ವರನ ಕೆತ್ತನೆ ಕಾರ್ಯವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಅಶೋಕ ಗುಡಿಗಾರ್ ಮತ್ತು ಸಹಾಯಕರ ನೆರವೇರಿಸಿದ್ದು, ಮೂರ್ತಿ ಉತ್ತಮವಾಗಿ ಮೂಡಿ ಬಂದಿದೆ.

7 ರಿಂದ 8 ಟನ್ ತೂಕ

7 ರಿಂದ 8 ಟನ್ ತೂಕ

ಇದು 10 ಅಡಿ ಅಗಲದ ಪೀಠ ಹೊಂದಿ 12 ಅಡಿ ಎತ್ತರವಿದೆ. 7 ರಿಂದ 8 ಟನ್ ತೂಕವಿದೆ. ಬಾಹುಬಲಿಯ ಮುಖದ ಭಾವ ಮತ್ತು ರೂಪ ಗುಣ ಸ್ವಭಾವಗಳನ್ನು ಸಹಜ ಸ್ಥಿತಿಯಲ್ಲಿ ಹೊರಹೊಮ್ಮುವಂತೆ ಮಾಡುವಲ್ಲಿ ಶಿಲ್ಪಿ ಅಶೋಕ್ ಗುಡಿಗಾರ್ ಯಶಸ್ವಿಯಾಗಿದ್ದಾರೆ.

ಚಿತ್ರಗಳು : ಮಹಾಮಸ್ತಕಾಭಿಷೇಕದ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯಚಿತ್ರಗಳು : ಮಹಾಮಸ್ತಕಾಭಿಷೇಕದ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯ

ಫೆಬ್ರವರಿ 12 ರಂದು ಉದ್ಘಾಟನೆ

ಫೆಬ್ರವರಿ 12 ರಂದು ಉದ್ಘಾಟನೆ

ಜ.13ರಂದು ಬಿಡದಿಯಿಂದ ಕ್ರೇನ್ ಸಹಾಯದಿಂದ ಈ ವಿಗ್ರಹವನ್ನು 16 ಚಕ್ರದ ಲಾರಿಯಲ್ಲಿ ಕೆಂಗೇರಿಯ ನೈಸ್ ರಸ್ತೆ ಮೂಲಕ ಕುಣಿಗಲ್ ಮಾರ್ಗವಾಗಿ ಶ್ರವಣಬೆಳಗೊಳ ತಲುಪಿಸಲಾಗಿದೆ. ಪ್ರತಿಷ್ಠಾಪನೆ ಸಕಲ ಧಾರ್ಮಿಕ ಸಂಪ್ರದಾಯದೊಂದಿಗೆ ಫೆಬ್ರವರಿ 12ರಂದು ನಡೆಯಲಿದೆ ಎಂದು ಹೇಳಲಾಗಿದೆ.

ಮಹಾಮಸ್ತಕಾಭಿಷೇಕಕ್ಕೂ ಮುನ್ನ ಮತ್ತೋರ್ವ ಬಾಹುಬಲಿ!

ಮಹಾಮಸ್ತಕಾಭಿಷೇಕಕ್ಕೂ ಮುನ್ನ ಮತ್ತೋರ್ವ ಬಾಹುಬಲಿ!

ಮಹಾಮಸ್ತಾಭಿಷೇಕದ ವೇಳೆ ವಯೋವೃದ್ಧರು, ವಿಶಿಷ್ಟ ಚೇತನರು ಹಾಗೂ ಮಹಿಳೆಯರಾದಿಯಾಗಿ ಜೈನ ಯಾತ್ರಿಕರಿಗೆ ಸುಲಭವಾಗಿ ಮಸ್ತಾಭಿಷೇಕ ನೆರವೇರಿಸಲು ಅನುವಾಗಲೆಂದು ಮತ್ತೊಂದು ಬಾಹುಬಲಿಯನ್ನು ಪ್ರತಿಷ್ಠಾಪಿಸುವ ಉದ್ದೇಶದಿಂದ ಈ ಬಾಹುಬಲಿಯನ್ನು ತರಲಾಗಿದೆ.

ಫೆ.17 ರಿಂದ ಮಹಾಮಸ್ತಕಾಭಿಷೇಕ

ಫೆ.17 ರಿಂದ ಮಹಾಮಸ್ತಕಾಭಿಷೇಕ

ಈಗಿರುವ ವಿಂಧ್ಯಗಿರಿ ಬೆಟ್ಟದ ಮೇಲಿನ 57 ಅಡಿ ಎತ್ತರದ ಬೃಹತ್ ಗೊಮ್ಮಟೇಶ್ವರನ ಮುಂದೆ ಈಗ ಪ್ರತಿಷ್ಠಾಪಿಸಲಾಗುತ್ತಿರುವ ವಿಗ್ರಹ ಪುಟ್ಟದಾಗಿದ್ದು, ಫೆಬ್ರವರಿ 17 ರಿಂದ ಆರಂಭವಾಗಲಿರುವ ಮೂಲ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ವಿಶೇಷವಾಗಿ ಗಮನಸೆಳೆಯಲಿದೆ.

English summary
Another statue of Shri Bahubali will be inaugurating in Shravanabelagola in Hassan district on Feb 12th. The statue will be situated near Shri Charukirthi Bhattarak Swamiji math, Shravanabelagola. This will be the main attraction in Mahamastakabhisheka-2018, which will be taking place in this February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X