ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕಲೇಶಪುರದ ಸಿಡಿಪಿಓ ಲಂಚ ದಾಹಕ್ಕೆ ಅಂಗನವಾಡಿ ಕಾರ್ಯಕತೆ ಬಲಿಪಶು!

|
Google Oneindia Kannada News

ಬೆಂಗಳೂರು, ಮೇ. 07: ಅಧಿಕಾರಿಯ ಲಂಚ ದಾಹಕ್ಕೆ ಅಂಗನವಾಡಿ ಕಾರ್ಯಕರ್ತೆ ಬಲಿ ಪಶುವಾಗಿದ್ದಾರೆ. ಅಧಿಕಾರಿಯ ಸೂಚನೆ ಮೇರೆಗೆ ಮತ್ತೊಬ್ಬ ಅಂಗನವಾಡಿ ಕಾರ್ಯಕರ್ತೆಯಿಂದ ಲಂಚ ಪಡೆದು ತನ್ನ ಅಧಿಕಾರಿಗೆ ನೀಡಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ ಎಸಿಬಿ ಬಲೆಗೆ ಬಿದ್ದು ಜೈಲು ಸೇರಿದ್ದಾರೆ.

ಇಂತಹ ಘಟನೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರದ ಚಿಕ್ಕ ಸತ್ತಿಗಾಲ್ ಗ್ರಾಮದ ನಿವಾಸಿ ಅಂಗನವಾಡಿ ಟೀಚರ್ ಅಗಿದ್ದರು. ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪ ಆಧಾರದ ಮೇಲೆ ಅಂಗನವಾಡಿ ಟೀಚರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಸುತ್ತೋಲೆ ಅನ್ವಯ ಅನುಕಂಪದ ಆಧಾರದ ಮೇಲೆ ಅಂಗನವಾಡಿ ಟೀಚರ್ ಕೆಲಸಕ್ಕೆ ಶಿಫಾರಸು ಮಾಡಲು 20 ಸಾವಿರ ರೂ. ನೀಡುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಡಿಕೆ ಇಟ್ಟಿದ್ದರು. ಹತ್ತು ಸಾವಿರ ರೂ. ಲಂಚ ನೀಡುವಂತೆ ಮುಂಗಡವಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಮೇ. 05 ರಂದು ಹತ್ತು ಸಾವಿರ ರೂ. ಲಂಚ ಕೊಡಲು ಹೋದಾಗ, ಸಕಲೇಶ್ವರ ಶಿಶು ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್, ಆತನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಸುಧಾ ಅವರಿಗೆ ನೀಡುವಂತೆ ಸೂಚಿಸಿದ್ದಾನೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾ ಮೇಲಾಧಿಕಾರಿಯ ಮಾತಿಗೆ ಅಡ್ಡಿ ಹೇಳದೇ ಲಂಚದ ಹಣ ಸ್ವೀಕರಿಸಿದ್ದಾರೆ. ಈ ವೇಳೆ ಹಾಸನ ಎಸಿಬಿ ಅಧಿಕಾರಿಗಳು ಲಂಚದ ಹಣ ಸಮೇತ ಅಂಗನವಾಡಿ ಕಾರ್ಯಕರ್ತೆ ಸುಧಾ ಅವರನ್ನು ಬಂಧಿಸಿದ್ದಾರೆ. ಜತೆಗೆ ಸಕಲೇಶ್ವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ್ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಂಚದ ಹಣ ವಶಪಡಿಸಿಕೊಂಡು ಕೇಸು ದಾಖಲಿಸಿದ್ದಾರೆ.

Hassan: Anganavadi worker lost job because of Her senior officer

ತಾಯಿ ಕಳೆದುಕೊಂಡಿದ್ದ ಅಂಗನವಾಡಿ ಕಾರ್ಯೆಕರ್ತೆ ಬಳಿಯೂ ಲಂಚ ಪೀಕಲು ಪ್ಲಾನ್ ರೂಪಿಸಿದ್ದ ಶಿವಪ್ರಕಾಶ್, ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ಸುಧಾ ಅವರನ್ನು ಬಳಸಿಕೊಂಡು ಅವರ ಬದುಕನ್ನೇ ಬೀದಿಗೆ ತಳ್ಳಿದ್ದಾನೆ. ಮೇಲಾಧಿಕಾರಿಯ ಮಾತು ಕೇಳಿ ಸುಧಾ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.

Hassan: Anganavadi worker lost job because of Her senior officer

ಲಂಚ ಪೀಡಕರ ಖತರ್ ನಾಕ್ ಪ್ಲಾನ್:

ಲಂಚ ಸ್ವೀಕಾರ ಯಾವುದೇ ಪ್ರಕರಣ ನೋಡಿದ್ರೂ ಲಂಚ ದಾಹಿಗಳ ದಾಹಕ್ಕೆ ಅಮಾಯಕರು ಬಲಿಪಶು ಆಗಿರುವುದೇ ಕಾಣುತ್ತಾರೆ. ಉನ್ನತ ಹುದ್ದೆಯಲ್ಲಿದ್ದವರು ಲಂಚ ಸ್ವೀಕರಿಸಿ ಸಿಕ್ಕಿಬಿದ್ದರೆ ಸಾರ್ವಜನಿಕವಾಗಿ ಮರ್ಯಾದೆ ಕಳೆದುಕೊಳ್ಳಬೇಕು. ಜತೆಗೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ನೇರವಾಗಿ ಸಿಕ್ಕಿ ಬೀಳುವ ಭಯ. ಹೀಗಾಗಿ ಖಾಸಗಿ ವ್ಯಕ್ತಿಗಳನ್ನು ನಿಯೋಜಿಸುತ್ತಾರೆ. ಇಲ್ಲವೇ ಕಚೇರಿಯಲ್ಲಿ ಕೆಲಸ ಮಾಡುವ ನಂಬಿಕಸ್ತ ಸಿಬ್ಬಂದಿಯನ್ನು ಏಜೆಂಟರನ್ನಾಗಿ ನೇಮಿಸಿಕೊಳ್ಳುತ್ತಾರೆ. ಇವರು ಮಾಡುವ ತಪ್ಪಿಗೆ ಈ ಮುಗ್ಧರು ಜೀವನ ಬೀದಿಗೆ ಬೀಳುತ್ತದೆ. ಸಕಲೇಶ್ವರ ಶಿಶು ಅಭಿವೃದ್ಧಿ ಅಧಿಕಾರಿಯ ದಹ ದಾಹನಕ್ಕೆ ಅಂಗನವಾಡಿಯ ಕಾರ್ಯಕರ್ತೆ ಬಲಿ ಪಶು ಆಗಿದ್ದಾರೆ.

English summary
Anganavadi worker and taluk child development officer arrested in bribe case by Hassana acb police . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X