ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನದಲ್ಲಿ ಭೂಕಂಪ ಅನುಭವ: 100ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು

By Nayana
|
Google Oneindia Kannada News

Recommended Video

Kodagu floods: Bangalore drone start-up helps locate stranded people

ಹಾಸನ, ಆಗಸ್ಟ್ 21: ಭಾರಿ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿರುವ ರಾಜ್ಯದಲ್ಲಿ ಇದೀಗ ಭೂಕಂಪ ಭೀತಿ ಎದುರಾಗಿದ್ದು ಹಾಸನ ಜಿಲ್ಲೆಯ ಹಿಜ್ಜನಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಹಿಜ್ಜನಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಭೂಕಂಪದ ಪರಿಣಾಮ ಸುಮಾರು 4 ಕಿ.ಮೀನಷ್ಟು ಕಾಂಕ್ರೀಟ್‌ ರಸ್ತೆ ಹುದುಗಿಹೋಗಿದ್ದು, ಭಾರಿ ಗಾತ್ರದ ಬಂಟೆಯೊಂದು ಛಿತ್ರಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ, ಭೂಕುಸಿತದಿಂದಾಗಿ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ, 100ಕ್ಕೂ ಹೆಚ್ಚು ಮನೆಗಳು ಬಿರುಕುಬಿಟ್ಟಿವೆ. ಹಾಗೂ ಕೆಲವು ಮನೆಗಳು ನೆಲಸಮವಾಗಿದೆ.

ಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿ

ರಾತ್ರೋರಾತ್ರಿ ಇಡೀ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿ ಸಂತ್ರಸ್ತರ ಕೇಂದ್ರಕ್ಕೆ ತೆರಳಿವೆ, ಆದರೂ ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಡಕುಮರಿ ರೈಲ್ವೆಹಳಿ ಮೇಲೆ 10ಕ್ಕೂ ಹೆಚ್ಚುಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಸಕಲೇಶಪುರದ ವಿವಿಧೆಡೆ ಭೂಕುಸಿತ ಮುಂದುವರೆದಿದೆ.

After deadly rain, earthquake threat in the state

ಬೆಂಗಳೂರಲ್ಲಿ ಭೂಕಂಪ ಅನುಭವ: ಅಲ್ಲಗಳೆದ ಭೂಗರ್ಭ ತಜ್ಞರುಬೆಂಗಳೂರಲ್ಲಿ ಭೂಕಂಪ ಅನುಭವ: ಅಲ್ಲಗಳೆದ ಭೂಗರ್ಭ ತಜ್ಞರು

ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾಕಷ್ಟು ಮನೆಗಳು ಬಿರುಕು ಬಿಟ್ಟಿರುವ ಘಟನೆ ಸಕಲೇಶಪುರದ ಹಿಜ್ಜನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಹಾಸನದ ಬಹುತೇಕ ಹಳ್ಳಿಗಳಲ್ಲಿ ರಸ್ತೆಗಳು ಕಿಲೋಮೀಟರ್‌ಗಟ್ಟಲೆ ಕೊಚ್ಚಿಹೋಗಿದೆ ಜತೆಗೆ ಸೇತುವೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ, ಕಾಫಿ, ಭತ್ತ ಸೇರಿದಂತೆ ಸಾಕಷ್ಟು ಬೆಳೆಗಳು ನಾಶವಾಗಿದೆ.

English summary
After deadly rain and flood in the state, earthquake has created havoc in normal life. Earthquake was reported in Hassan district on Monday latenight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X