ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥವಾಗಿ ಸಿಕ್ಕ ಅನ್ವಿತಾ ಅಮೆರಿಕಕ್ಕೆ ಹಾರಲು ಸಿದ್ಧ!

By Gururaj
|
Google Oneindia Kannada News

ಹಾಸನ, ಜುಲೈ 15 : ಅಂದು ಆಕೆ ಪೊದೆಯಲ್ಲಿ ಅನಾಥವಾಗಿ ಬಿದ್ದಿದ್ದ ಬಾಲಕಿ. ಇಂದು ಅಪ್ಪ-ಅಮ್ಮನ ಜೊತೆ ಅಮೆರಿಕಕ್ಕೆ ಹಾರಲು ಸಿದ್ಧಳಾಗುತ್ತಿದ್ದಾಳೆ. ಇದು ಹಾಸನದ ಅನ್ವಿತಾಳಿಗೆ ಒಲಿದು ಬಂದಿರುವ ಅದೃಷ್ಟ.

2017ರ ಜುಲೈನಲ್ಲಿ ನವಿಲುಗಳಿಂದ ಕಚ್ಚಿಸಿಕೊಂಡು ಪೊದೆಯಲ್ಲಿ ಅನಾಥವಾಗಿ ಬಿದ್ದಿದ್ದ ಅನ್ವಿತಾ ಅಮೆರಿಕಕ್ಕೆ ಹಾರಲು ಸಿದ್ಧಳಾಗುತ್ತಿದ್ದಾಳೆ. ಎರಡು ದಿನದ ಹಿಂದೆ ಅನ್ವಿತಾ ಮೊದಲ ಹುಟ್ಟು ಆಚರಿಸಿಕೊಂಡಳು. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ, ಇಬ್ಬರ ಜೀವ ಉಳಿಸಿದ ಎಸ್.ಪಿ ದೇವರಾಜ್ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ, ಇಬ್ಬರ ಜೀವ ಉಳಿಸಿದ ಎಸ್.ಪಿ ದೇವರಾಜ್

ಅನ್ವಿತಾ ಕಥೆ ಓದಿ : ಹಾಸನ-ಹೊಳೆನರಸೀಪುರ ರಸ್ತೆಯ ಶ್ರೀರಾಮದೇವರ ಕಟ್ಟೆ ರೆಸಾರ್ಟ್ ಬಳಿಯ ಪೊದೆಯಲ್ಲಿ 2013ರ ಜುಲೈ 13ರಂದು ಅನಾಥ ಹೆಣ್ಣು ಶಿಶು ಪತ್ತೆಯಾಗಿತ್ತು. ರೆಸಾರ್ಟ್‌ನ ಉದ್ಯೋಗಿ ಭವ್ಯಾ ಅವರು ಮಗುವನ್ನು ಗಮನಿಸಿ ರಕ್ಷಣೆ ಮಾಡಿದ್ದರು.

Abandoned baby Anvitha all set to fly US

ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆಣ್ಣು ಮಗುವನ್ನು ಮೊದಲು ಹೊಳೆನರಸೀಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹಾಸನಾಂಬ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಹೆರಿಗೆ ರಜೆ: ಮಹಿಳೆಯರಿಗೆ ಕೆಲಸ ಕೊಡಲು ಕಂಪನಿಗಳು ಹಿಂದೇಟುಹೆರಿಗೆ ರಜೆ: ಮಹಿಳೆಯರಿಗೆ ಕೆಲಸ ಕೊಡಲು ಕಂಪನಿಗಳು ಹಿಂದೇಟು

ಲಕ್ಷ್ಮೀಕಾಂತ್ ಎಂಬ ವೈದ್ಯರು ಮೊದಲು ಮಗುವಿಗೆ ಚಿಕಿತ್ಸೆ ನೀಡಿದ್ದರು. ಸರಿಯಾಗಿ ಕಣ್ಣನ್ನು ಬಿಡದ ಕಂದಮ್ಮ ನವಿಲುಗಳ ದಾಳಿಗೆ ತುತ್ತಾಗಿದೆ ಎಂದು ಹೇಳಿದ್ದರು. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಮಗುವನ್ನು ಕೊನೆಗೆ ಹಾಸನದ ತವರು ಚಾರಿಟಲ್ ಟ್ರಸ್ಟ್‌ಗೆ ನೀಡಲಾಗಿತ್ತು. ಮಗುವಿಗೆ ಅನ್ವಿತಾ ಎಂದು ನಾಮಕರಣ ಮಾಡಲಾಗಿತ್ತು.

ಅಮೆರಿಕದಲ್ಲಿ ವಾಸವಾಗಿರುವ ಕೋರೆ ಜಾಯ್ ಮತ್ತು ಕ್ಯಾಥರಿನ್ ಲೀ ಅವರು ಭಾರತ ಸರ್ಕಾರದಿಂದ ಒಪ್ಪಿಗೆ ಪಡೆದ ಬಳಿಕ ಅನ್ವಿತಾಳನ್ನು ದತ್ತು ಪಡೆದಿದ್ದಾರೆ. ಅನ್ವಿತಾ ಪಾಸ್‌ಪೋರ್ಟ್ ಆಗುವುದು ಮಾತ್ರ ಬಾಕಿ ಇದೆ. ಪಾಸ್‌ ಪೋರ್ಟ್ ಸಿಕ್ಕ ಬಳಿಕ ಅನ್ವಿತಾಳನ್ನು ದಂಪತಿಗಳು ಕರೆದುಕೊಂಡು ಹೋಗಲಿದ್ದಾರೆ.

ತವರು ಚಾರಿಟಲ್ ಟ್ರಸ್ಟ್‌ ಶುಕ್ರವಾರ ಅನ್ವಿತಾಳ ಮೊದಲ ವರ್ಷದ ಹುಟ್ಟು ಹಬ್ಬ ಆಯೋಜನೆ ಮಾಡಿತ್ತು. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹುಟ್ಟು ಹಬ್ಬದಲ್ಲಿ ಪಾಲ್ಗೊಂಡರು. 'ಅನ್ವಿತಾಳನ್ನು ದತ್ತು ಪಡೆದಿರುವುದು ಸಂತಸ ತಂದಿದೆ' ಎಂದು ಹೇಳಿದರು.

English summary
A girl baby who was found abandoned in 2017 now all set to fly to the United States. Baby Anvitha found abandoned near Sriramadevara Katte on Hassan-Holenarsipur road. The newborn was found with peacock bites. Later baby admitted to HIMS and handover to Thavaru Charitable Trust. Couple from Tennessee has adopted Anvitha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X