ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವು, ಪ್ರತಿಭಟನೆ

|
Google Oneindia Kannada News

ಹಾಸನ, ಆ.01: ಹಾಸನ ಜಿಲ್ಲೆಯಲ್ಲಿ ಸೋಮವಾರ ವಿದ್ಯಾರ್ಥಿನಿಯೊಬ್ಬರು ರೈಲ್ವೇ ಹಳಿ ಮೇಲೆ ಜಾರಿಬಿದ್ದು ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಭಾರಿ ಆಕ್ರೋಶ ಉಂಟಾಗಿದ್ದು, ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ ಪ್ರೀತಿ ಪುಟ್ಟಸ್ವಾಮಿ ಎಂಬ 22 ವರ್ಷದ ವಿದ್ಯಾರ್ಥಿನಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಹಾಸನ: ಹೆಂಡತಿ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನನ್ನು ಕೊಂದ ಪತಿ!ಹಾಸನ: ಹೆಂಡತಿ ಕೈ ಟಚ್ ಮಾಡಿದ್ದಕ್ಕೆ ಅಪ್ರಾಪ್ತನನ್ನು ಕೊಂದ ಪತಿ!

ಆಕೆಯ ತಂದೆ ಪುಟ್ಟಸ್ವಾಮಿ ಆಕೆಯನ್ನು ಆಟೋದಿಂದ ಇಳಿಸಿದ ಹೋದ ನಂತರ ಈ ದುರ್ಘಟನೆ ನಡೆದಿದೆ. ರೈಲ್ವೆ ಹಳಿಗಳ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುತ್ತಿದ್ದಾಗ, ಪ್ರೀತಿ ಪುಟ್ಟಸ್ವಾಮಿ ಹಳಿಯಿಂದ ಜಾರಿದ್ದಾರೆ. ಇದರಿಂದ ಅವರ ಮುಂದೆ ಬರುತ್ತಿದ್ದ ರೈಲು ಆಕೆಗೆ ಡಿಕ್ಕಿ ಹೊಡೆದಿದೆ.

A Student Hit By Train While Crossing Track in Hassan

ಘಟನೆ ಬೆನ್ನಲ್ಲೇ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಫುಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಸನ-ಮೈಸೂರು ಹೆದ್ದಾರಿ ತಡೆ ನಡೆಸಿದರು. ರಸ್ತೆಯಲ್ಲಿ ಟೈರ್‌ಗಳನ್ನು ಸುಟ್ಟು ಅಧೀಕಾರಿಗಳ ವಿರುದ್ಧ ಕಿಡಿಕಾರಿದರು.

ಇಲ್ಲಿ ಫುಟ್‌ ಓವರ್‌ ಬ್ರಿಡ್ಜ್‌ ಇಲ್ಲದ ಕಾರಣ ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಹಳಿ ದಾಟಿ ಮಾರುಕಟ್ಟೆ ಮತ್ತು ಕಾಲೇಜಿಗೆ ಹೋಗಬೇಕಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಹಾಸನ ಜಿಲ್ಲೆಯ ಅಂಕಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಇಲ್ಲಿ ಹಳಿಗಳನ್ನು ದಾಟುವುದನ್ನು ನಿಷೇಧಿಸಲಾಗಿದೆ. ಹಳಿಗಳನ್ನು ದಾಟದಂತೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಎಚ್ಚರಿಕೆ ಫಲಕಗಳನ್ನು ಕೂಡ ಹಾಕಲಾಗಿದೆ. ಆದರೂ, ಕಾಲೇಜುಗಳು ಮತ್ತು ಮಾರುಕಟ್ಟೆಯ ಸಮೀಪವಿರುವ ಕಾರಣ, ನಿವಾಸಿಗಳು ಇನ್ನೊಂದು ಬದಿಗೆ ದಾಟಲು ಹಳಿಗಳನ್ನು ಸುಲಭವಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

English summary
A student in Hassan district monday slipped on the tracks and hit by a moving train, causing her death. students protesting against the 'negligence' of railway officials. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X