ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಪ್ರೀತಂ ಗೌಡ ವಿರುದ್ಧ ಮಾಜಿ ಸಚಿವ ಎ. ಮಂಜು ಆಕ್ರೋಶ!

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್ 16; "ಪ್ರೀತಂ ಗೌಡ ನಡೆಯಿಂದ ನನ್ನ ಕುಟುಂಬ ಡಿಸ್ಟರ್ಬ್ ಆಗಿದೆ. ಎಲ್ಲರನ್ನೂ ಕಳೆದುಕೊಂಡು ಮಗನನ್ನು ಕಳೆದುಕೊಳ್ಳಬಾರದು ಎಂದು ತೀಮಾನ ಮಾಡಿದೆ. ಮಗನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆ ಹೊರತು ಬಿಜೆಪಿ ವಿರುದ್ಧ ಹೇಳಿಕೆ ಕೊಟ್ಟಿಲ್ಲ" ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎ. ಮಂಜು ಹೇಳಿದರು.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಮಾತಾನಾಡಿದ ಎ. ಮಂಜು, "ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅಲ್ಲಿನ ಉಸ್ತುವಾರಿ ಸಚಿವರೇ ಹೊಣೆ ಹೊರಬೇಕು. ಹಾಸನ ಜಿಲ್ಲೆಯಲ್ಲಿ ಯಾರು ಜವಾಬ್ದಾರಿ ಹೊರಬೇಕು?. ಜಿಲ್ಲಾಧ್ಯಕ್ಷ, ಶಾಸಕ‌ ಜವಾಬ್ದಾರಿ ಹೊರಬೇಕು, ಆಯಾ ಜಿಲ್ಲೆಯ ಉಸ್ತುವಾರಿ ಸಚಿವರೇ ಜವಾಬ್ದಾರಿ ಹೊರಬೇಕು" ಎಂದರು.

ಎ. ಮಂಜು ಕಾಂಗ್ರೆಸ್ ಸೇರ್ಪಡೆ; ಬಂತು ಸ್ಫೋಟಕ ಸುದ್ದಿ!ಎ. ಮಂಜು ಕಾಂಗ್ರೆಸ್ ಸೇರ್ಪಡೆ; ಬಂತು ಸ್ಫೋಟಕ ಸುದ್ದಿ!

ಬಿಜೆಪಿ ಪಕ್ಷ ಹಾಗೂ ನಾಯಕರ ವಿರುದ್ದ ಎ. ಮಂಜು ವಾಗ್ದಾಳಿ ನಡೆಸಿ, "ಸರ್ಕಾರ ಯಾವುದು? ಇರುತ್ತೋ ಆ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲುತ್ತಿತ್ತು, ಬಿಜೆಪಿ ಪಕ್ಷ ಹನ್ನೊಂದು ಸ್ಥಾನ ಗೆದ್ದಿದೆ ಅಂಥಾ ಹೇಳಕೊಳ್ಳೋದು ಬಿಟ್ಟರೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಹೇಳುವುದು ಸಮಜಾಯಿಸಿ ಅಲ್ಲಾ. ಮತದಾರರು ಬಿಜೆಪಿ ಕೈ ಹಿಡಿದಿಲ್ಲ‌ ಇದು ನನ್ನ ವೈಯುಕ್ತಿಕ ಅಭಿಪ್ರಾಯ" ಎಂದು ತಿಳಿಸಿದರು.

ಹಾಸನ ರಾಜಕೀಯ ಲೆಕ್ಕಾಚಾರ ಬದಲು; ಕಾಂಗ್ರೆಸ್ ನಾಯಕ ಬಿಜೆಪಿಗೆ! ಹಾಸನ ರಾಜಕೀಯ ಲೆಕ್ಕಾಚಾರ ಬದಲು; ಕಾಂಗ್ರೆಸ್ ನಾಯಕ ಬಿಜೆಪಿಗೆ!

A Manju Verbal Attack On Hassan BJP MLA Preetham Gowda

"ಕಾಂಗ್ರೆಸ್ ಪರ ಮತ ಹಾಕಿರುವುದು ನೋಡಿದರೆ ಕಾಂಗ್ರೆಸ್ ನಾಯಕರು ಹೇಳುವಂತೆ ಕಾಂಗ್ರೆಸ್ ಪರ ಅಲೆ ಇದೆ ಅಂಥಾ ಹೇಳುತ್ತಿರುವುದು ನಿಜ ಅನ್ನಿಸುತ್ತದೆ. ಮಗನ ಪರ ಕೆಲಸ ಮಾಡುತ್ತೇನೆ ಅಂಥಾ ನನ್ನ ಮೇಲೆ‌ ಕ್ರಮ ತೆಗೆದುಕೊಂಡರು. ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ?" ಎಂದು ಎ. ಮಂಜು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು.

ಹಾಸನ; ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಿಗ್ ಫೈಟ್! ಹಾಸನ; ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಬಿಗ್ ಫೈಟ್!

"ರಮೇಶ್ ಜಾರಕಿಹೊಳಿ ಶಾಸಕ ಎಂದು ಕ್ರಮ ಕೈಗೊಂಡಿಲ್ಲವೇ?. ಅಲ್ಲಿ ಅವನ ಸಹೋದರ ಗೆದ್ದ, ಇಲ್ಲಿ ನಾನು ಮಾಜಿ ಎಂಎಲ್‌ಎ ಅಂಥಾ ಕ್ರಮ ತಗೆದುಕೊಂಡರು. ಹಾಸನದಲ್ಲಿ ಎಷ್ಟು ಓಟು ತಗೆದುಕೊಂಡರು ಎಂದು ಹಾಸನ ಎಂಎಲ್‌ಎ ಹೇಳಬೇಕು. ಎಸ್. ಟಿ. ಸೋಮಶೇಖರ್ ಮಂತ್ರಿ, ಅವರ ಓಎಸ್‌ಡಿ ಅವತ್ತು ಸಾಯಂಕಾಲದವರೆಗೂ ಮಂತ್ರಿ ಜೊತೆ ಇದ್ದ, ಮಾರನೇ ದಿನ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟಿದ್ದಾರೆ, ಅವನ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ" ಎಂದು ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ಟಾರ್ಗೆಟ್ ಮಾಡಿದರು; "100ಕ್ಕೆ ನೂರರಷ್ಟು ನನ್ನನ್ನು ಟಾರ್ಗೆಟ್ ಮಾಡಿದರು. ಅದಕ್ಕೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಈ ಸ್ಥಿತಿ ಆಗಿರರೋದು. ಬಿಜೆಪಿಯವರು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಪ್ರಾಬಲ್ಯ ಮಾಡುವುದನ್ನು ಇಷ್ಟ ಪಡುತ್ತಿಲ್ಲ. ಅದಕ್ಕೆ ಜನ ಬಿಜೆಪಿಗೆ ತಕ್ಕ ಪಾಠ ಈಗ ಕಲಿಸಿದ್ದಾರೆ. ಒಬ್ಬ ಮಂತ್ರಿ ಇಟ್ಟುಕೊಂಡು ಮಂಡ್ಯದಲ್ಲಿ 50 ಓಟು ಬಂದಿದೆ. 600 ಓಟಿನಲ್ಲಿ 50 ಓಟು ಬಂದಿದೆ ನಾಚಿಕೆ ಆಗಲ್ವಾ?"

"ಸಿಎಂ ಆಗಿದ್ದ ಯಡಿಯೂರಪ್ಪ ಮಂಡ್ಯ ಜಿಲ್ಲೆಯವರು. ಪಾಪ ಅವರ ಸಂಬಂಧಿ ಬೂಕಳಿ ಮಂಜು ಕಣ್ಣೀರು ಹಾಕಿದರು. ನನಗೆ ಈ ರೀತಿ ಆಗುತ್ತಿದೆ ಎಂದು ಹೇಳಿಕೊಂಡರು. ಒಳ ಒಪ್ಪಂದದ ಏಟಿನಿಂದ ಬಿಜೆಪಿಗೆ ಲಾಸ್ ಆಗುತ್ತಿದೆ. ಉಸ್ತುವಾರಿ ಮಂತ್ರಿ ಇದ್ದರು ಮೈಸೂರಿನಲ್ಲಿ ಸೋತಿದ್ದಾರೆ. ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಅನ್ನೋದು ಪ್ರಶ್ನೆಯಾಗಿದೆ" ಎಂದು ಎ. ಮಂಜು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗಿನಲ್ಲಿ ಮಂಥರ್ ಗೌಡ ಸೋಲು ವಿಚಾರವಾಗಿ ಮಾತಾನಾಡಿದ ಅವರು, "ಹಾಸನದಿಂದ ನನ್ನ ಮಗನಿಗೆ ಟಿಕೆಟ್ ಕೊಡಿ ಅಂಥಾ ನಾವು ಕೇಳಿರಲಿಲ್ಲ. ಬಿಜೆಪಿಯವರೇ ಮಂಥರ್ ಗೌಡನಿಗೆ ಟಿಕೆಟ್ ಕೊಡುತ್ತೀವಿ ಅಂದಿದ್ದರು. ನಾನು ಐದು ಕೋಟಿ ಬಂಡಾಳ ಹಾಕುತ್ತೀನಿ ಅಂಥಾ ಹಾಸನದ ಶಾಸಕರು ಹೇಳಿದರು. ಹಾಸನದ ಶಾಸಕರು ಪಾರ್ಟಿ ಮೀಟಿಂಗ್‌ನಲ್ಲಿ ಹೇಳಿದರು. ಅವರು ಹಾಗೇ ಹೇಳಿದ್ದಾರೋ ಇಲ್ಲವೋ ಬಿಜೆಪಿ ‌ಜಿಲ್ಲಾಧ್ಯಕ್ಷ ಸುರೇಶ್ ಅವರನ್ನು ಕೇಳಿ. ಮಂತ್ರಿ ಸ್ಥಾನ ಕೊಟ್ಟರೆ ಬೆಂಬಲ ಕೊಡೋಣ ಅಂಥಾ ಇದ್ದೆ. ಮಂತ್ರಿ ಸ್ಥಾನ ಕೊಡದಿದ್ದಕ್ಕೆ ಬೆಂಬಲ‌ ನೀಡಲಿಲ್ಲ ಎಂದು ಪ್ರೀತಂ ಗೌಡ ಹೇಳಿದರು" ಎ. ಮಂಜು ಹೇಳಿದರು.

Recommended Video

ಯಾರಿಗೆ ಸಿಗತ್ತೆ ಉಪನಾಯಕನ ಪಟ್ಟ ! | Oneindia Kannada

English summary
Former minister and BJP leader A. Manju verbal attack on Hassan BJP MLA Preetham J. Gowda on legislative council elections result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X