ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ : 10 ಜನರ ತಂಡದಿಂದ ಅಂಚೆ ಕಚೇರಿಯಲ್ಲಿ 2 ಲಕ್ಷ ದರೋಡೆ

|
Google Oneindia Kannada News

ಹಾಸನ, ಜೂನ್ 30 : 10 ಜನರ ತಂಡವೊಂದು ಹಾಸನದ ಅಂಚೆ ಕಚೇರಿಯಲ್ಲಿ 2 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ನಡೆದಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನದ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಘಟನೆ ನಡೆದಿದೆ. 10 ಜನರ ತಂಡ ಅಂಚೆ ಕಚೇರಿಗೆ ಬಂದಿದ್ದು, ಅಂಚೆ ಸಹಾಯಕಿಯ ಗಮನ ಬೇರೆ ಕಡೆ ಸೆಳೆದು ಎರಡು ಲಕ್ಷ ನಗದು ಕಳವು ಮಾಡಿದೆ.

ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಎಂದರೇನು? ಇದರ ಲಾಭಗಳೇನು?

ಪಾಸ್‌ ಪುಸ್ತಕ ಎಂಟ್ರಿ ಮಾಡಿಸುವ ನೆಪದಲ್ಲಿ ಬಂದ ತಂಡದಲ್ಲಿದ್ದ ಮೂವರು ಕ್ಯಾಶ್ ಕೌಂಟರ್ ಬಳಿ ಬಂದಿದ್ದರು. ಉಳಿದವರು ಕೌಂಟರ್ ಮುಂಭಾಗ ಮಾತನಾಡುತ್ತಾ ನಿಂತಿದ್ದರು. ಅಂಚೆ ಸಹಾಯಕಿ ಕಾಂಚನಾ ಅವರ ಬಳಿ ಮಾತನಾಡುತ್ತಾ ಅವರ ಗಮನ ಬೇರೆಕರೆ ಸೆಳೆದು ಹಣ ದೋಚಿದ್ದಾರೆ.

ಅಂಚೆ ಕಚೇರಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆಅಂಚೆ ಕಚೇರಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ

2 lakh stolen form Hassan post office

ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದೆ. ಶನಿವಾರ ಅಂಚೆ ಕಚೇರಿಯಲ್ಲಿ ಹೆಚ್ಚು ಜನರಿದ್ದರು. ಇದರ ಲಾಭ ಪಡೆದ ತಂಡ ಹಣವನ್ನು ಎಗರಿಸಿ ಪರಾರಿಯಾಗಿದೆ.

ಕ್ಲಿಕ್‌ ಅಂಡ್‌ ಪೋಸ್ಟ್‌: ದೇಶದಲ್ಲೇ ಮೊದಲ ಸೇವೆ ಬೆಂಗಳೂರಿನಲ್ಲಿಕ್ಲಿಕ್‌ ಅಂಡ್‌ ಪೋಸ್ಟ್‌: ದೇಶದಲ್ಲೇ ಮೊದಲ ಸೇವೆ ಬೆಂಗಳೂರಿನಲ್ಲಿ

ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.

English summary
10 members gang stolen 2 lakh from Hassan, Karnataka post office on June 29, 2019. Gang enter the post office to update pass book. Gang activities recorded in CCTV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X