ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ : ಹಿಮ್ಸ್ ಆಸ್ಪತ್ರೆ ಅಭಿವೃದ್ಧಿಗೆ 171 ಕೋಟಿ ಯೋಜನೆ

By Gururaj
|
Google Oneindia Kannada News

ಹಾಸನ, ಜೂನ್ 25 : 'ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆ ಅಭಿವೃದ್ಧಿಗೆ 171 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ' ಎಂದು ಹಾಸನ ಜಿಲ್ಲಾ ಉಸ್ತುವಾರಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸೋಮವಾರ ಎಚ್.ಡಿ.ರೇವಣ್ಣ ಅವರು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಸ್ಥಳ ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಹಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನೆಡೆಸಿದರು.

ಬೆಂಗಳೂರಿನ ಖ್ಯಾತ ವೈದ್ಯರೊಬ್ಬರ ಮೊದಲ 20 ನಿಮಿಷದ ಚಿಕಿತ್ಸೆ ಇದೇ ನೋಡಿಬೆಂಗಳೂರಿನ ಖ್ಯಾತ ವೈದ್ಯರೊಬ್ಬರ ಮೊದಲ 20 ನಿಮಿಷದ ಚಿಕಿತ್ಸೆ ಇದೇ ನೋಡಿ

'ಹಿಮ್ಸ್‌ನ ಮೂಲಭೂತ ಸೌಕರ್ಯ ಅಭಿವೃದ್ದಿಗೆ 171 ಕೋಟಿ ರೂಪಾಯಿಗಳ ಹೊಸ ಯೋಜನೆ ರೂಪಿಸಲಾಗಿದೆ. ಶೀಘ್ರವೇ ಅದಕ್ಕೆ ಅನುಮೋದನೆ ಪಡೆದು, ಅನುದಾನ ಒದಗಿಸಲಾಗುವುದು' ಎಂದು ಹೇಳಿದರು.

HD Revanna

'ಹಾಲಿ ಇರುವ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು 7 ಅಂತಸ್ಥಿಗೆ ಏರಿಸುವ ಯೋಜನೆಗೆ 135 ಕೋಟಿ, ವೈದ್ಯಕೀಯ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡಗಳಿಗೆ 24 ಕೋಟಿ ಮತ್ತು ನರ್ಸ್‍ಗಳ ವಸತಿ ನಿಲಯಕ್ಕೆ 12 ಕೋಟಿ ರೂ.ಗಳ ಅಂದಾಜು ಯೋಜನೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

ಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನಡೆಂಗಿ ಜ್ವರ ಪ್ರಕರಣ: ರಾಜ್ಯಕ್ಕೆ ಮೂರನೇ ಸ್ಥಾನ

'ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಕೊರತೆ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಭರ್ತಿ ಮಾಡಲಾಗುವುದು. ಆದರೆ, ಸುಳ್ಳು ನೆಪ ಹೇಳಿ ಸೂಕ್ತ ಚಿಕಿತ್ಸೆ ನೀಡದೆ ಯಾವುದೇ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುವುದನ್ನು ತಾವು ಸಹಿಸುವುದಿಲ್ಲ' ಎಂದು ರೇವಣ್ಣ ಎಚ್ಚರಿಸಿದರು.

'ಹಾಸನ ಜಿಲ್ಲಾ ಆಸ್ಪತ್ರೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸುವುದು ತಮ್ಮ ಬಯಕೆ. ಆದರೆ, ಹಿಮ್ಸ್ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರ ವಿಶೇಷ ಪ್ರಯತ್ನ ಅಗತ್ಯ ಹಾಗೂ ಎಲ್ಲಾ ವೈದ್ಯಾಧಿಕಾರಿಗಳ ಶ್ರಮ ಹಾಗೂ ಸಹಕಾರ ಅಗತ್ಯ' ಎಂದು ಹೇಳಿದರು.

English summary
Minister H.D.Revanna said that 171 core action plan ready for Hassan Institute of Medical Science development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X