ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್‌; ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗಕ್ಕೆ ಅನುದಾನ

|
Google Oneindia Kannada News

ಹಾಸನ, ಫೆಬ್ರವರಿ 5; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೆ ಇಲಾಖೆಗೆ ನಿಗದಿ ಮಾಡಿರುವ ಅನುದಾನದ ವಿವರಗಳಿರುವ ಪಿಂಕ್ ಬುಕ್ ಅನ್ನು ಇಲಾಖೆ ಬಿಡುಗಡೆ ಮಾಡಿದೆ. ಬಹು ನಿರೀಕ್ಷಿತ ಚಿಕ್ಕಮಗಳೂರು-ಬೇಲೂರು-ಹಾಸನ ರೈಲು ಮಾರ್ಗಕ್ಕೆ 1000 ಕೋಟಿ ಅನುದಾನ ನೀಡಲಾಗಿದೆ.

ಹಾಸನ-ಬೇಲೂರು-ಚಿಕ್ಕಮಗಳೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ 1000 ಕೋಟಿ ಅನುದಾನ ನೀಡಲಾಗಿದೆ. ಮಹತ್ವದ ರೈಲು ಮಾರ್ಗಕ್ಕೆ ಈ ಅನುದಾನ ಕಡಿಮೆಯಾಯಿತು ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು ಕೇಂದ್ರ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 100 ಕೋಟಿ ಮೀಸಲು

ಬೆಂಗಳೂರು ಮತ್ತು ಮೈಸೂರು ನಗರವನ್ನು ಸಂಪರ್ಕಿಸುವ ಚಿಕ್ಕಮಗಳೂರು ನೇರ ರೈಲು ಸಂಪರ್ಕ ಯೋಜನೆ ಮಹತ್ವದ್ದಾಗಿದೆ. ಈ ಮಾರ್ಗಕ್ಕೆ ಮಂಜೂರಾತಿ ದೊರೆತು ನಾಲ್ಕು ವರ್ಷಗಳು ಕಳೆದರೂ ಅನುದಾನ ಮಾತ್ರ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪವೂ ಇದೆ.

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ

1000 Crore For Hassan Beluru Chikkamagaluru Railway Line

ಚಿಕ್ಕಮಗಳೂರು-ಬೇಲೂರು ನಡುವಿನ ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಹಾಸನ-ಬೇಲೂರು ನಡುವಿನ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೂ ಬಜೆಟ್‌ನಲ್ಲಿ ಸರಿಯಾಗಿ ಅನುದಾನ ನಿಗದಿ ಮಾಡಿಲ್ಲ ಎಂದು ಆರೋಪಿಸಲಾಗುತ್ತಿದೆ.

ಚೆನ್ನೈ-ಬೆಂಗಳೂರು-ಮೈಸೂರು ವಿಶೇಷ ರೈಲು; ವೇಳಾಪಟ್ಟಿ ಚೆನ್ನೈ-ಬೆಂಗಳೂರು-ಮೈಸೂರು ವಿಶೇಷ ರೈಲು; ವೇಳಾಪಟ್ಟಿ

ವಿದ್ಯುದೀಕರಣಕ್ಕೆ 162.6 ಕೋಟಿ; ಹಾಸನ ಜಿಲ್ಲೆಯನ್ನು ಸಂಪರ್ಕಿಸುವ ಒಟ್ಟು 2 ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ಒಟ್ಟು 162.6 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಚಿಕ್ಕಬಣಾವರ-ಹಾಸನ ಮಾರ್ಗದ ವಿದ್ಯುದೀಕರಣಕ್ಕೆ 50.6 ಕೋಟಿ ರೂ.ಗಳು.

ಮೈಸೂರು-ಹಾಸನ-ಮಂಗಳೂರು ನಡುವಿನ 347 ಕಿ. ಮೀ. ವಿದ್ಯುದೀಕರಣಕ್ಕೆ 112 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

English summary
Finance minister Nirmala Sitharaman in a budget 2021 announced 1000 crore for railway line project between Hassan-Beluru-Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X