ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; 100 ಬೆಡ್‌ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ

|
Google Oneindia Kannada News

ಹಾಸನ, ಮೇ 14; ವಿವಿಧ ಮುಸ್ಲಿಂ ಸಂಘಟನೆಗಳು, ಸ್ವಯಂಸೇವಕರು, ದಾನಿಗಳ ನೆರವಿನೊಂದಿಗೆ 100 ಬೆಡ್‌ಗಳ ಹೊಸ ಕೋವಿಡ್ ಕೇರ್ ಸೆಂಟರ್‌ ಹಾಸನ ನಗರದಲ್ಲಿ ಆರಂಭಿಸಲಾಗಿದೆ. ಇಲ್ಲಿ 50 ಆಕ್ಸಿಜನ್ ಸಿಲಿಂಡರ್‌ಗಳು ಸಹ ಲಭ್ಯವಿದೆ.

ಶುಕ್ರವಾರ ಈ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆಗೊಂಡಿದೆ. ಹಾಸನ ನಗರದ ಹ್ಯುಮಾನಿಟೇರಿಯನ್ ಚಾರಿಟಬಲ್ಸ್ ಸರ್ವಿಸ್, ಶಮಾ ಟ್ರಸ್ ಹಾಗೂ ಬೆಂಗಳೂರಿನ ಹೆಚ್. ಬಿ. ಎಸ್ ಆಸ್ಪತ್ರೆ ಸಹಯೋಗದೊಂದಿಗೆ ಈದ್ಗಾ ಮೈದಾನದಲ್ಲಿನ ಚೈಲ್ಡ್ ಹೋಂ ಕಟ್ಟಡದಲ್ಲಿ ಕೇಂದ್ರ ಆರಂಭವಾಗಿದೆ.

ಬೆಂಗಳೂರಿನಲ್ಲಿರುವ ಹೆಚ್. ಬಿ. ಎಸ್ ಆಸ್ಪತ್ರೆ ವೈದ್ಯರಾದ ಡಾ. ತಾ. ಮತೀನ್ ಈ ಕೇಂದ್ರ ಪ್ರಾರಂಭಕ್ಕೆ ಆರ್ಥಿಕ, ವೈದ್ಯಕೀಯ ನೆರವಿನ ಜೊತೆಗೆ 50 ಆಮ್ಲಜನಕ ಸಿಲಿಂಡರ್ ಒದಗಿಸಿದ್ದಾರೆ ಮತ್ತು ವೈದಕೀಯ ಸಲಹೆಯ ಜವಾಬ್ದಾರಿ ಕೂಡ ನಿರ್ವಹಣೆ ಮಾಡುತ್ತಿದ್ದಾರೆ. ಜಿಲ್ಲೆಯ ಮುಸ್ಲಿಂ ಸಮುದಾಯದ ತಜ್ಞ ವೈದ್ಯರ ತಂಡವೂ ಸಹ ಆರ್ಥಿಕ ನೆರವು ನೀಡಿ ಉಚಿತ ಸೇವೆಯನ್ನು ಒದಗಿಸುತ್ತಿದ್ದಾರೆ.

100 Bed Covid Care Centre Inaugurated In Hassan City

ಮುಸ್ಲಿಂ ಸಮುದಾಯದ ಸುಮಾರು 50 ಮಂದಿ ಯುವಕರು ಹಾಗೂ ಹಿರಿಯರನ್ನೊಳಗೊಂಡ ಸಮರ್ಪಿತ ಸ್ವಯಂಸೇವಾ ತಂಡ ಸೋಂಕಿತರ ನೆರವಿಗಾಗಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಇವರೆಲ್ಲಾ ಮನೆಗಳಿಂದ ದೂರ ಉಳಿದು ಸೋಂಕಿತರಿಗೆ ಅಗತ್ಯ ಸೇವೆಗಳನ್ನು ನೀಡಲು ನೆರವಾಗುತ್ತಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ರಂಜಾನ್ ಹಬ್ಬ ಹಾಗೂ ಜಗಜ್ಯೋತಿ ಬಸವೇಶ್ವರರ ಜನ್ಮ ಜಂಯಂತಿ ದಿನವಾದ ಶುಕ್ರವಾರ ಕೇಂದ್ರವನ್ನು ಉದ್ಘಾಟಿಸಿದರು. "ಜಿಲ್ಲೆಯ ಕೊವಿಡ್ ಚಿಕಿತ್ಸಾ ಸೌಲಭ್ಯಕ್ಕೆ ಇದೊಂದು ದೊಡ್ಡ ಕೊಡುಗೆ. ಹಲವು ಸಂಘ ಸಂಸ್ಥೆಗಳು ಇಂತಹ ಪ್ರಯತ್ನಕ್ಕೆ ಕೈ ಜೋಡಿಸಿದರೆ ವೈದ್ಯಕೀಯ ಸೌಲಭ್ಯ ವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ" ಎಂದರು.

Recommended Video

Corona ಲಸಿಕೆಯಿಂದ ಹೃದ್ರೋಗಿಗಳಿಗೆ ಅಪಾಯವಾಗುತ್ತಾ? | Oneindia Kannada

"ಜಿಲ್ಲೆಗೆ ನಿಗದಿದಪಡಿಸಲಾದ ಕೋಟಾದಂತೆ ಪೂರೈಕೆಯಾಗುವ ಆಕ್ಸಿಜನ್‌ನಲ್ಲಿ ಈ ನೂತನ ಕೋವಿಡ್ ಕೇರ್ ಸೆಂಟರ್‌ಗೂ ಆಕ್ಸಿಜನ್ ಒದಗಿಲಾಗುವುದು. ಕೇಂದ್ರದಲ್ಲಿ ಕೆಲಸ ಮಾಡುವ ಸ್ವಂ ಸೇವಕರು ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡುವಂತೆ" ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

English summary
100 Bed covid care centre started in Hassan city. 50 oxygen cylinder available in centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X