ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ: ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ 6 ಉದ್ಯೋಗಿಗಳ ಅಪಹರಣ

|
Google Oneindia Kannada News

ಗುವಾಹಟಿ, ಏಪ್ರಿಲ್ 21: ಅಸ್ಸಾಂನ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಆರು ಮಂದಿ ಉದ್ಯೋಗಿಗಳ ಅಪಹರಿಸಲಾಗಿದೆ ಎನ್ನುವ ಮಾಹಿತಿ ಕೇಳಿಬಂದಿದೆ.
ಸಿಬ್ಬಂದಿಯನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ತನ್ನ ಸಿಬ್ಬಂದಿಗಳ ಅಪಹರಣದ ಕುರಿತು ಒಎನ್ ಜಿಸಿ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇಂದು ಬೆಳಗಿನ ಜಾವ ಶಿವಸಾಗರ ಜಿಲ್ಲೆಯ ಲಖ್ವಾ ಒಎನ್ ಜಿಸಿ ಘಟಕದಲ್ಲಿ ಮೂವರು ಸಿಬ್ಬಂದಿಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಅಪಹರಣಕ್ಕೊಳಗಾದ ನೌಕರರನ್ನು ಒಎನ್‌ಜಿಸಿಗೆ ಸೇರಿದ ಕಾರ್ಯಾಚರಣಾ ವಾಹನದಲ್ಲಿಯೇ ದುಷ್ಕರ್ಮಿಗಳು ಕರೆದೊಯ್ದಿದ್ದಾರೆ.

ನೈಜೀರಿಯಾ ಶಾಲೆಯೊಂದರಲ್ಲಿ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣನೈಜೀರಿಯಾ ಶಾಲೆಯೊಂದರಲ್ಲಿ 300ಕ್ಕೂ ಹೆಚ್ಚು ಬಾಲಕಿಯರ ಅಪಹರಣ

ಅಸ್ಸಾಂ ಶಿವಸಾಗರ ಜಿಲ್ಲೆಯ ಲಖ್ವಾದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ತೈಲ ಸಂಸ್ಕರಣಾ ಘಟಕದ ಇಬ್ಬರು ಸಹಾಯಕ ಜೂನಿಯರ್ ಇಂಜಿನಿಯರ್‌ಗಳು ಮತ್ತು ಓರ್ವ ಜೂನಿಯರ್ ಟೆಕ್ನಿಷಿಯನ್​ನ್ನು ಅಪಹರಿಸಿದ್ದಾರೆ.

ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಅಸ್ಸಾಂ ರಾಜ್ಯ ಪೊಲೀಸರ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಮತ್ತು ಒಎನ್‌ಜಿಸಿ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Six ONGC Employees Abducted In Assam, Probe Underway

ನಂತರ, ಅಸ್ಸಾಂ-ನಾಗಾಲ್ಯಾಂಡ್ ಗಡಿಯ ಸಮೀಪವಿರುವ ನಿಮೋನಗಢ ಅರಣ್ಯದ ಬಳಿ ವಾಹನವನ್ನು ಬಿಟ್ಟು ಸಿಬ್ಬಂದಿಗಳೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಟ್ವೀಟ್ ಮಾಡಿದೆ.

English summary
Six employees of the Oil and Natural Gas Corporation Limited (ONGC) were allegedly abducted in the early hours of Wednesday from a rig site in Lakwa field of Assam’s Sivasagar district, the company said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X