ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮಾಣವಚನ ತೆಗೆದುಕೊಂಡು ಮಾತನಾಡುತ್ತೇನೆ; ರಂಜನ್ ಗೊಗಯ್

|
Google Oneindia Kannada News

ಗುವಾಹಟಿ, ಮಾರ್ಚ್ 18; ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ.

ಈ ಕುರಿತು ಅಸ್ಸಾಂನ ಗುವಾಹಟಿಯಲ್ಲಿ ಮಾತನಾಡಿರುವ ರಂಜನ್ ಗೊಗಯ್ ಅವರು, ಮೊದಲು ಪ್ರಮಾಣವಚನ ತಗೆದುಕೊಳ್ಳುತ್ತೇನೆ. ಆ ನಂತರ ನಾನು ಏಕೆ ರಾಜ್ಯಸಭಾ ಸ್ಥಾನವನ್ನು ಒಪ್ಪಿಕೊಂಡೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದಿದ್ದಾರೆ.

ರಾಜ್ಯಸಭೆಗೆ ಸಿಜೆಐ ರಂಜನ್ ಗೋಗೊಯ್ ನಾಮನಿರ್ದೇಶನರಾಜ್ಯಸಭೆಗೆ ಸಿಜೆಐ ರಂಜನ್ ಗೋಗೊಯ್ ನಾಮನಿರ್ದೇಶನ

ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ರಾಜ್ಯಸಭೆಯಲ್ಲಿ ನ್ಯಾಯಂಗವನ್ನು ಪ್ರತಿನಿಧಿಸುವ ಅದ್ಭುತ ಅವಕಾಶ ಸಿಕ್ಕಿದೆ. ಆ ನಂತರವೇ ನಾನು ಈಗಿನ ವಿವಾದಗಳಿಗೆ ಉತ್ತರಿಸುತ್ತೇನೆ ಎಂದರು.

Retired Justice Ranjan Gogoi Clarification On His Rajya Sabha Nomination

ನಿನ್ನೆಯಷ್ಟೇ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ರಂಜನ್ ಗೊಗಯ್ ಅಂತಹ ಲಜ್ಜಿಗೇಡಿ ಮನುಷ್ಯನನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿರಲಿಲ್ಲ ಎಂದು ರಂಜನ್ ಗೊಗಯ್ ಅವರ ರಾಜ್ಯ ಸಭೆ ನಾಮನಿರ್ದೇಶನ ವಿರೋಧಿಸಿದ್ದರು.

'ರಂಜನ್ ಗೊಗಯ್ ನಂತಹ ಲಜ್ಜಗೇಡಿ ಮನುಷ್ಯ ಮತ್ತೊಬ್ಬ ಇಲ್ಲ'; ಕಾಟ್ಜು'ರಂಜನ್ ಗೊಗಯ್ ನಂತಹ ಲಜ್ಜಗೇಡಿ ಮನುಷ್ಯ ಮತ್ತೊಬ್ಬ ಇಲ್ಲ'; ಕಾಟ್ಜು

ಭಾರತದ ಸುಪ್ರೀಂಕೋರ್ಟ ನ 46 ನೇ ಮುಖ್ಯ ನ್ಯಾಯಮೂರ್ತಿ ಆಗಿ ರಂಜನ್ ಗೊಗಯ್ ಅವರು 2018-19 ರ ಅವಧಿಯಲ್ಲಿ 13 ತಿಂಗಳು ಕೆಲಸ ಮಾಡಿದ್ದಾರೆ. ಅವರು ಈಗ ರಾಜ್ಯಸಭೆಗೆ ಹೋಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

English summary
Retired Justice Ranjan Gogai clarification about his rajya sabha nomination. I will answer all allegations, he said in Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X